ಫೋಕ್ಸ್‌ವ್ಯಾಗನ್ ಜೆಟ್ಟಾ: ವಿಶ್ವದ ಅತಿವೇಗದ ಹೈಬ್ರಿಡ್ ಕಾರು

Volkswagen Jetta
ಫೋಕ್ಸ್‌ವ್ಯಾಗನ್ ಜೆಟ್ಟಾ ಹೈಬ್ರಿಡ್ ಕಾರು ನಿರ್ಮಿಸುವ ದಾಖಲೆಗಳಿಗೆ ಸಾಟಿಯಿಲ್ಲ. ಪರಿಸರ ಸ್ನೇಹಿಯೆಂಬ ಖ್ಯಾತಿಯ ಈ ಕಾರಿಗೆ ಈಗಾಗಲೇ ಹತ್ತು ಹಲವು ಪ್ರಶಸ್ತಿಯ ಗರಿಗಳು ದೊರಕಿಯಾಗಿದೆ. ಇದೀಗ ಫೋಕ್ಸ್ ವ್ಯಾಗನ್ ಜೆಟ್ಟಾ ಕಾರಿಗೆ ವಿಶ್ವದ ವೇಗದ ಹೈಬ್ರಿಡ್ ಕಾರೆಂಬ ಬಿರುದು ದೊರಕಿದೆ.

ಹೀಗಾಗಿ ಇನ್ಮುಂದೆ ಜೆಟ್ಟಾ ಹೈಬ್ರಿಡ್ ಕಾರು ಖರೀದಿಸುವರು "ಪರಿಸರ ಸ್ನೇಹಿ ಕಾರೊಂದನ್ನು ಖರೀದಿಸುತ್ತಿದ್ದೇವೆ" ಎನ್ನುವುದರ ಜೊತೆಗೆ "ವಿಶ್ವದ ವೇಗದ ಹೈಬ್ರಿಡ್ ಕಾರು ಖರೀದಿಸುತ್ತಿದ್ದೇವೆ" ಎಂಬ ವಾಕ್ಯವನ್ನೂ ಸೇರಿಸಿಕೊಳ್ಳಬಹುದು.

ಪರಿಷ್ಕೃತ ಫೋಕ್ಸ್‌ವ್ಯಾಗನ್ ಜೆಟ್ಟಾ ಹೈಬ್ರಿಡ್ ಕಾರು ಇತ್ತೀಚೆಗೆ ಫಾಬ್ಲೆಡ್ ಬೊನೆವಿಲ್ಲೆ ಸಾಲ್ಟ್ ಫ್ಲಾಟ್ಸ್ ನಲ್ಲಿ ಗಂಟೆಗೆ 298.3 ಕಿ.ಮೀ. ವೇಗದಲ್ಲಿ ಚಲಿಸಿ ವೇಗದ ಹೈಬ್ರಿಡ್ ಕಾರೆಂಬ ಮೆಚ್ಚುಗೆಯನ್ನು ಗಳಿಸಿತ್ತು. ಆದರೆ ಈ ಪರಿಷ್ಕೃತ ಆವೃತ್ತಿಯ ಹೆಚ್ಚಿನ ಟೆಕ್ ಮಾಹಿತಿಯನ್ನು ಕಂಪನಿಯು ಬಹಿರಂಗಪಡಿಸಿಲ್ಲ.

ಆದರೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಮೂಲಿ ಜೆಟ್ಟಾ ಕಾರು ಇಷ್ಟೊಂದು ವೇಗವನ್ನು ಹೊಂದಿಲ್ಲ. ಆದರೆ ಭವಿಷ್ಯದಲ್ಲಿ ಈ ಕಾರಿಗೆ ವೇಗದ ಫೀಚರನ್ನು ಕಂಪನಿ ಸೇರಿಸಿಕೊಂಡರೆ ಅಚ್ಚರಿಯಿಲ್ಲ. ಪರಿಷ್ಕೃತ ಆವೃತ್ತಿಯನ್ನು ಹೆಚ್ಚು ಏರೋಡೈನಾಮಿಕ್ ಆಗಿ ವಿನ್ಯಾಸ ಮಾಡಲಾಗಿದೆ. ಸರಕಾರಿ ನೀತಿಗಳಿಗೆ ವಿರುದ್ಧವಾಗಿ ವಿನ್ಯಾಸ ಮಾಡಲಾಗಿಲ್ಲವೆಂದು ಕಂಪನಿ ಖಚಿತಪಡಿಸಿದೆ.

ಮಾರುಕಟ್ಟೆಯಲ್ಲಿರುವ ಫೋಕ್ಸ್‌ವ್ಯಾಗನ್ ಜೆಟ್ಟಾ ಹೈಬ್ರಿಡ್ ಕಾರು 150 ಪಿಎಸ್ ಪವರಿನ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 30 ಪಿಎಸ್ ಪವರಿನ ಎಲೆಕ್ಟ್ರಿಕ್ ಮೋಟರ್ ಎಂಜಿನ್ ಹೊಂದಿದೆ. ಇದರಲ್ಲಿ ಸುಮಾರು 9.2 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆಯಬಹುದಾಗಿದೆ.

ಈ ಹಿಂದೆ ವೋಲ್ವೊ ಹೈಬ್ರಿಡ್ ಟ್ರಕ್ ಪ್ರತಿಗಂಟೆಗೆ 255 ಕಿ.ಮೀ. ವೇಗದಲ್ಲಿ ಚಲಿಸಿ ದಾಖಲೆ ನಿರ್ಮಿಸಿತ್ತು.

ಓದಿ: ಜೆಟ್ಟಾ ಕಾರು ರಿವ್ಯೂ: ನಾನು ಕೆಟ್ಟ ಹುಡುಗನಲ್ಲ!

More from DriveSpark

Article Published On: Wednesday, August 22, 2012, 9:50 [IST]
English summary
Modified Volkswagen Jetta Hybrid set world record for achieving a top speed of 298.3kmph.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+