ಫೆ.17ರಂದು ಹೊಸ ಫೋಕ್ಸ್‌ವ್ಯಾಗನ್ ಜೆಟ್ಟಾ ಬಿಡುಗಡೆ

Written By:

ಜರ್ಮನಿಯ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಈಗಾಗಲೇ ದೇಶಕ್ಕೆ ಪೊಲೊ ಹಾಗೂ ವೆಂಟೊ ಹೊಸ ಮಾದರಿಗಳನ್ನು ಪರಿಚಯಿಸಿದೆ. ತನ್ನ ಮಾರಾಟ ವಲಯವನ್ನು ಇನ್ನಷ್ಟು ಕುದುರಿಸಿಕೊಳ್ಳುವ ಯೋಜನೆ ಹೊತ್ತುಕೊಂಡಿರುವ ಪ್ರಸ್ತುತ ಸಂಸ್ಥೇಯೀಗ ಮಗದೊಂದು ಮಾದರಿಗೆ ಹೊಸ ಸ್ವರೂಪ ನೀಡುತ್ತಿದೆ.

ಹೌದು, ಹೊಸ ಫೋಕ್ಸ್‌ವ್ಯಾಗನ್ ಜೆಟ್ಟಾ ಭಾರತ ಮಾರುಕಟ್ಟೆಯನ್ನು 2015 ಫೆಬ್ರವರಿ 17ರಂದು ಕಾಲಿಡಲಿದೆ. ಈ ಪರಿಷ್ಕೃತ ಕಾರಿನಲ್ಲಿ ಹಲವಾರು ಬದಲಾವಣೆ ಕಂಡುಬರಲಿದ್ದು, ಹೆಚ್ಚಿನ ಗ್ರಾಹಕರನ್ನು ಸೆಳೆಯಲಿದೆ ಎಂದು ಫೋಕ್ಸ್‌ವ್ಯಾಗನ್ ಭರವಸೆ ವ್ಯಕ್ತಪಡಿಸಿದೆ. ಹೊಸ ಜೆಟ್ಟಾ ಈಗಿನ ತಲೆಮಾರಿನ ಮಾದರಿಗೆ ಸಮಾನವಾದ ಬೆಲೆಯನ್ನು ಹೊಂದಿರಲಿದೆ.

volkswagen jetta

ಎಂಜಿನ್ ಮಾನದಂಡಗಳಲ್ಲಿ ಬದಲಾವಣೆಗಳಿಲ್ಲ

1390 ಸಿಸಿ ಪೆಟ್ರೋಲ್ ಎಂಜಿನ್ - 120 ಅಶ್ವಶಕ್ತಿ, 200 ಎನ್‌ಎಂ ಟಾರ್ಕ್, 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್, ಮೈಲೇಜ್ - 14.69 kpl.

1968 ಸಿಸಿ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ - 138 ಅಶ್ವಶಕ್ತಿ, 320 ಎನ್‌ಎಂ ಟಾರ್ಸ್, 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, ಮೈಲೇಜ್ - 19.33 kpl

1968 ಸಿಸಿ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ - 138 ಅಶ್ವಶಕ್ತಿ, 320 ಎನ್‌ಎಂ ಟಾರ್ಸ್, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್, ಮೈಲೇಜ್ - 16.96 kpl

volkswagen jetta

ಹೊರಮೈ

ಹೊಸ ಫ್ರಂಟ್ ಗ್ರಿಲ್,

ಬೈ ಕ್ಸೆನಾನ್ ಹೆಡ್ ಲೈಟ್,

ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್,

ಪರಿಷ್ಕೃತ ಬಂಪರ್ (ಮುಂಭಾಗ ಹಾಗೂ ಹಿಂಭಾಗ),

ಪರಿಷ್ಕೃತ ಟೈಲ್ ಲೈಟ್ - ಎಲ್‌ಇಡಿ ಇಂಡಿಕೇಟರ್

ಒಳಮೈ

ಪ್ರೀಮಿಯಂ ಸ್ಪರ್ಶತೆ,

ಹೊಸತಾದ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ,

ಪಿಯಾನೊ ಬ್ಲ್ಯಾಕ್ ಡ್ಯಾಶ್ ಬೋರ್ಡ್,

ಸ್ಟೀರಿಂಗ್ ವೀಲ್

English summary
In 2014 Volkswagen introduced face lifted version of their Polo hatchback and Vento sedan models. Now the German manufacturer will be launching its refreshed version of the Jetta on 17th of February, 2015.
Story first published: Monday, February 2, 2015, 12:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark