ಮಾರುತಿ, ಹ್ಯುಂಡೈ 800ಸಿಸಿ ಸೆಗ್ಮೆಂಟಿಗೆ ಹೊಸ ಕಂಪನಿ ಎಂಟ್ರಿ

Volkswagen Joins 800cc Race With Maruti, Hyundai
ದೇಶದ ಸಣ್ಣಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಮೋಟರ್ಸ್ ಪ್ರಾಬಲ್ಯ ಪಡೆದಿವೆ ಎನ್ನುವುದರಲ್ಲಿ ಸಂಶಯವಿಲ್ಲ. ಕಡಿಮೆ ದರ ಮತ್ತು ಅತ್ಯಧಿಕ ಕಾರ್ಯಕ್ಷಮತೆ ಕಾರಣದಿಂದ ಮಾರುತಿ ಆಲ್ಟೊ ಕಾರು ಮಾರುಕಟ್ಟೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಮಾರುತಿ 800 ಸೆಕೆಂಡ್ ಹ್ಯಾಂಡ್ ಕಾರಿಗೂ ಅತ್ಯಧಿಕ ಬೇಡಿಕೆಯಿದೆ.

800ಸಿಸಿ ಸೆಗ್ಮೆಂಟಿಗೆ ಇತ್ತೀಚೆಗೆ ಹ್ಯುಂಡೈ ಕಂಪನಿಯು ಇಯಾನ್ ಮೂಲಕ ಪ್ರವೇಶಿಸಿತ್ತು. ಆದರೆ ಇಯಾನ್ ದರ ಕೊಂಚ ಹೆಚ್ಚಿರುವುದರಿಂದ ಆಲ್ಟೊಗೆ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಆದರೆ ಆಲ್ಟೊಗೆ ಯಾವುದೇ ಪೈಪೋಟಿಯಿಲ್ಲವೆನ್ನುವ ಕಲ್ಪನೆ ಶೀಘ್ರದಲ್ಲಿ ಬದಲಾಗುವ ನಿರೀಕ್ಷೆಯಿದೆ.

ಯಾಕೆಂದ್ರೆ ಫೋಕ್ಸ್ ವ್ಯಾಗನ್ ಕಂಪನಿ ಕೂಡ ದೇಶದ 800ಸಿಸಿ ಸೆಗ್ಮೆಂಟಿಗೆ ಪ್ರವೇಶಿಸಲಿದೆ. ಈಗಾಗಲೇ ವೆಂಟೊ, ಪೊಲೊ ಕಾರುಗಳ ಮೂಲಕ ಜನಪ್ರಿಯಗೊಂಡಿರುವ ಕಂಪನಿಯು 800ಸಿಸಿಗೆ ಪ್ರವೇಶಿಸಲಿದೆ ಎಂದು ವರದಿಗಳು ಹೇಳಿವೆ. ಈ ಕುರಿತು ಕಂಪನಿಯಿಂದ ಅಧಿಕೃತವಾಗಿ ಪ್ರಕಟಣೆ ಹೊರಬಿದ್ದಿಲ್ಲ.

ಫೋಕ್ಸ್ ವ್ಯಾಗನ್ ಶೀಘ್ರದಲ್ಲಿ ಹೊರತರಲಿರುವ "ಅಪ್" ಕಾರು ಕೂಡ ಅತ್ಯಧಿಕ ಇಂಧನ ದಕ್ಷತೆಯ ಕಾರಾಗಳಿದೆ. ಈ ಕಾರು ಭಾರತ, ಚೀನಾ ಮತ್ತು ಬ್ರೆಝಿಲ್ ದೇಶಗಳ ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆ.

ಫೋಕ್ಸ್ ವ್ಯಾಗನ್ ಕಂಪನಿಯು 2018ನೇ ವರ್ಷಕ್ಕೆ ವಿಶ್ವದ ಬೃಹತ್ ಕಾರು ಕಂಪನಿಯಾಗುವ ಗುರಿ ಹೊಂದಿದೆ. ದೇಶದ ರಸ್ತೆಗೆ ಸಣ್ಣಕಾರುಗಳನ್ನು ಪರಿಚಯಿಸುವುದು ಕೂಡ ಕಂಪನಿಯು ಈ ಕಾರ್ಯತಂತ್ರದ ಒಂದು ಭಾಗವಾಗಿದೆ.

More from DriveSpark

Article Published On: Monday, February 20, 2012, 15:59 [IST]
English summary
The Indian small car market is no doubt dominated by Maruti Suzuki and Hyundai Motors. Maruti Suzuki's Alto has been the undisputed market leader thanks to its low price and efficient performance. Hyundai Motors has created a competitor of sorts in the form of the Eon. But the Eon's higher price has meant the Alto has no real competition. But the situation might change soon as German carmaker Volkswagen is planning to develop an 800cc car based on its Up small car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+