ಈ ಸಣ್ಣ ಕಾರು ನೀಡಲಿದೆ 34.5 ಮೈಲೇಜ್

By Nagaraja

ವಿಶ್ವದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ಯುರೋಪ್ ಮಾರುಕಟ್ಟೆಗೆ ಸಿಎನ್‌ಜಿಯಿಂದ ಚಾಲನೆಯಾಗಲಿರುವ ಸಣ್ಣ ಕಾರೊಂದನ್ನು ಬಿಡುಗಡೆಗೊಳಿಸಿದೆ. ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಎಂದು ಅರಿಯಲ್ಪಡುವ ಈ ಕಾರು ಉತ್ತಮ ಇಂಧನ ಕ್ಷಮತೆಯನ್ನು ನೀಡಲಿದೆ.

ಕಂಪನಿಯ ಪ್ರಕಾರ ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಪ್ರತಿ ಲೀಟರ್‌ಗೆ 34.5 ಕಿಲೋ ಮೀಟರ್ ಮೈಲೇಜ್ ಒದಗಿಸಲಿದೆ. ಹಾಗಾಗಿ ಭಾರತೀಯ ಕಾರು ಪ್ರಿಯರು ಸಹ ಈ ಬಹುನಿರೀಕ್ಷಿತ ಕಾರು ದೇಶದಲ್ಲಿ ಬಿಡುಗಡೆಯಾಗುವುದಕ್ಕಾಗಿ ಕಾತರದದಿಂದ ಕಾಯುತ್ತಿದ್ದಾರೆ.

ಉದಯೋನ್ಮುಖ ಮಾರುಕಟ್ಟೆಯನ್ನು ಗುರಿಯಿರಿಸಿಕೊಂಡು ಫೋಕ್ಸ್‌ವ್ಯಾಗನ್ ಅಪ್ ಸಣ್ಣ ಕಾರನ್ನು ಬಿಡುಗಡೆಗೊಳಿಸಲಾಗಿದೆ. ಆದರೆ ಅಚ್ಚರಿಯೆಂಬಂತೆ ಭಾರತದಲ್ಲಿ ಅತೀವ ಬೇಡಿಕೆಯಿದ್ದರೂ ದೇಶದಲ್ಲಿ ಈ ಸಣ್ಣ ಕಾರನ್ನು ಬಿಡುಗಡೆ ಮಾಡಿಲ್ಲ. ಹಾಗಿದ್ದರೂ ಫೋಕ್ಸ್‌ವ್ಯಾಗನ್ ಭಾರತೀಯ ಗ್ರಾಹಕರಿಗೆ ಹೊಂದಿಕೆಯಾಗುವ ರೀತಿಯಲ್ಲಿ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನದಲ್ಲಿದೆ.

ಒಂದು ವೇಳೆ ದೇಶದಲ್ಲಿ ಫೋಕ್ಸ್‌ವ್ಯಾಗನ್ ಅಪ್ ಬಿಡುಗಡೆಯಾದ್ದಲ್ಲಿ ಭಾರಿ ಬೇಡಿಕೆ ಕಂಡುಬರಲಿದೆ. ಯಾಕೆಂದರೆ ಇದು ಗ್ರಾಮೀಣ ಪ್ರದೇಶದಲ್ಲೂ ದೊರಕುವ ಬಯೋಗ್ಯಾಸ್ ಅಥವಾ ಮಿಥೇನ್‌ನಿಂದಲೂ ಚಾಲನೆಯಾಗಲಿದೆ. ಪೆಟ್ರೋಲ್ ಅಥವಾ ಡೀಸೆಲ್ ರೀತಿಯಲ್ಲಿ ಸಿಎನ್‌ಜಿ ಲಭ್ಯವಿಲ್ಲದಿದ್ದರೂ ಭಾರತದ ತೈಲ ಕಂಪನಿಗಳು ನಿಧಾನವಾಗಿ ಸಿಎನ್‌ಜಿ ಜಾಲವನ್ನು ವ್ಯಾಪಕಗೊಳಿಸುತ್ತಿದೆ.

ಹಾಗಿದ್ದರೂ ಈ ಸಣ್ಣ ಕಾರನ್ನು ದೇಶದಲ್ಲಿ ಬಿಡುಗಡೆಗೊಳಿಸುವ ಯಾವುದೇ ಸಂಕೇತವನ್ನು ಫೋಕ್ಸ್‌ವ್ಯಾಗನ್ ನೀಡಿಲ್ಲ. ಕಳೆದ ದೆಹಲಿ ಆಟೋ ಎಕ್ಸ್‌ಪೋದಲ್ಲೂ ಪ್ರದರ್ಶನಗೊಳ್ಳುವ ನಿರೀಕ್ಷೆಯಿದ್ದರೂ ಹಿನ್ನಡೆಯುಂಟಾಗಿತ್ತು. ಪ್ರಸ್ತುತ ಯುರೋಪ್‌ನಲ್ಲಿ ಬಿಡುಗಡೆಯಾಗಿರುವ ಫೋಕ್ಸ್‌ವ್ಯಾಗನ್ ಅಪ್ ಸ್ಮಾಲ್ ಕಾರು ಒಂದು ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಪೆಟ್ರೋಲ್ ಎಂಜಿನ್ ಆಯ್ಕೆಯು ಲಭ್ಯವಿರಲಿದೆ.

ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಸಣ್ಣ ಕಾರು

ಅತ್ಯುತ್ತಮ ಇಂಧನ ಕ್ಷಮತೆಯ ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ವೆರಿಯಂಟ್ ಕಾರುಗಳನ್ನು ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಸಣ್ಣ ಕಾರು

ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಎಂಜಿನ್ ಪ್ರತಿ ಲೀಟರ್‌ಗೆ ಗರಿಷ್ಠ 34.5 ಕಿಲೋ ಮೀಟರ್ ಮೈಲೇಜ್ ಒದಗಿಸಲಿದೆ.

ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಸಣ್ಣ ಕಾರು

ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಸಣ್ಣ ಕಾರುಗಳು ಮಿಥೇನ್ ಅಥವಾ ಬಯೋಗ್ಯಾಸ್‌ನಿಂದಲೂ ಚಾಲನೆಯಾಗಲಿದೆ.

ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಸಣ್ಣ ಕಾರು

ಪ್ರಸ್ತುತ ದೇಶದ ಮಾರುಕಟ್ಟೆಗೆ ಫೋಕ್ಸ್‌ವ್ಯಾಗನ್ ಅಪ್ ಬಿಡುಗಡೆಯಾಗಿಲ್ಲ. ಆದರೆ 2013 ಸಾಲಿನಲ್ಲಿ ದೇಶದ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯಿದೆ.

ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಸಣ್ಣ ಕಾರು

ದೇಶದಲ್ಲಿನ ಸಿಎನ್‌ಜಿ ಕಾರುಗಳನ್ನು ಪರಿಗಣಿಸಿ ಫೋಕ್ಸ್‌ವ್ಯಾಗನ್ ಅಪ್ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಪ್ರವೇಶಿಸುವ ಸಾಧ್ಯತೆಯಿದೆ.

ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಸಣ್ಣ ಕಾರು

ಅಪ್ ಸಣ್ಣ ಕಾರುಗಳನ್ನು ಲಾಂಚ್ ಆದ ಬೆನ್ನಲ್ಲೇ ದೇಶದಲ್ಲಿನ ಮಾರುಕಟ್ಟೆ ಕುದುರಿಸುವ ಇರಾದೆಯನ್ನು ಫೋಕ್ಸ್‌ವ್ಯಾಗನ್ ಹೊಂದಿದೆ.

ಫೋಕ್ಸ್‌ವ್ಯಾಗನ್ ಅಪ್ ಸಿಎನ್‌ಜಿ ಸಣ್ಣ ಕಾರು

ಫೋಕ್ಸ್‌ವ್ಯಾಗನ್ ಅಪ್ ಸ್ಮಾಲ್ ಕಾರಿನ ರಿಯರ್ ವ್ಯೂ

More from DriveSpark

Article Published On: Tuesday, December 11, 2012, 12:49 [IST]
English summary
Volkswagen has launched a CNG powered version of its Up small car in Europe. The VW UP CNG delivers an incredible mileage of 34.5 kmpl. The Up's mileage will be the one single reason for it to succeed in India if it is launched here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+