ವೆಂಟೊ ಕಾರು ಬೆಂಕಿಗಾಹುತಿ, ಸಿಕ್ಕಿಹಾಕಿಕೊಂಡಿದ್ದ ಚಾಲಕ..

ಟಾಟಾ ಮೋಟರ್ಸ್ ಕಂಪನಿಯ ನ್ಯಾನೊ ಕಾರುಗಳು ಬೆಂಕಿಗಾಹುತಿಯಾಗುವುದು ನಿಂತಿದೆ. ಇದೀಗ ಫೋಕ್ಸ್ ವ್ಯಾಗನ್ ಕಂಪನಿಯ ವೆಂಟೊ ಕಾರೊಂದು ಪುಣೆಯಲ್ಲಿ ಬೆಂಕಿಗಾಹುತಿಯಾಗಿದೆ. ಬೆಂಕಿಗಾಹುತಿಯಾಗುತ್ತಿದ್ದ ಕಾರಿನೊಳಗೆ ಸಿಕ್ಕಿಹಾಕಿಕೊಂಡಿದ್ದ ಕಾರು ಮಾಲಿಕನನ್ನು ದಾರಿಹೋಕರು ಪಾರುಮಾಡಿದ್ದಾರೆ.

ಕೈಲಾಸ್ ಸುರೇಶ್ ಗುಪ್ತಾ(40) ಪುಣೆ ನಗರದ ವೈಶಾಲಿ ರೆಸ್ಟೂರೆಂಟ್ ಸಮೀಪ ಕಾರು ನಿಲ್ಲಿಸಿದ್ದರು. ಮುಂಜಾನೆ ಕಾರು ಸ್ಟಾರ್ಟ್ ಮಾಡಿದ ಸಂದರ್ಭದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸೀಟ್ ಬೆಲ್ಟ್ ಧರಿಸಿದ ಗುಪ್ತಾ ಹೊರಗೆ ಬರಲು ಸಾಧ್ಯವಾಗದೇ ಒದ್ದಾಡುತ್ತಿದ್ದರು.

ತಕ್ಷಣ ಅಲ್ಲಿ ಸಾಗುತ್ತಿದ್ದ ದಾರಿಹೋಕರು ಕಾರಿನ ಕಿಟಕಿ ಹೊಡೆದು ಕೈಲಾಶ್ ಸುರೇಶರನ್ನು ಹೊರಗೆಳೆದಿದ್ದಾರೆ. ನಂತರ ಪೊಲೀಸರ ನೆರವಿನಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸುರೇಶ್ ಸಹೋದರರು ನೀಡಿದ ಮಾಹಿತಿ ಪ್ರಕಾರ ಬೆಂಕಿಗಾಹುತಿಯಾದ ವೆಂಟೊ ಕಾರು ಖರೀದಿಸಿ ಒಂದು ವರ್ಷವೂ ಆಗಿಲ್ಲವಂತೆ.

ಈ ಬೆಂಕಿಗಾಹುತಿ ಪ್ರಕರಣದ ಕುರಿತು ಫೋಕ್ಸ್ ವ್ಯಾಗನ್ ಕಂಪನಿಯಿಂದ ಯಾವುದೇ ಸ್ಪಷ್ಟಣೆ ಇನ್ನೂ ದೊರಕಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Wednesday, February 1, 2012, 15:25 [IST]
English summary
Volkswagen Vento Car Caught Fire in Pune. When Mr Kailash Suresh Gupta(40) tried to start the vechicle caught fire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+