ಟೈಮ್ಸ್ ಆಫ್ ಇಂಡಿಯಾ ತೆರೆದಾಗ ವೈಬ್ರೆಷನ್!

ದಿನಪತ್ರಿಕೆ ತೆರೆದಾಗ ದಿನನಿತ್ಯ ನಡುಕ ಹುಟ್ಟುವ ಸುದ್ದಿಗಳನ್ನು ಓದಿರಬಹುದು. ಆದರೆ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಇಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ತೆರೆದವರಿಗೆ ವೈಬ್ರೆಷನ್ ಅನುಭವವಾಗಿರಬಹುದು. ಯಾಕೆಂದರೆ ಪತ್ರಿಕೆಯೊಂದಿಗೆ ವೈಬ್ರೆಷನ್ ಸಾಧನವೊಂದು ಅಂಟಿಕೊಂಡಿತ್ತು.

ಅದು ಫೋಕ್ಸ್ ವ್ಯಾಗನ್ ಕಂಪನಿಯ ನೂತನ ಇನ್ನೋವೇಟಿವ್ ಜಾಹೀರಾತು. ಪತ್ರಿಕೆಗಳಲ್ಲಿ ಇಂತಹ ಎಲೆಕ್ಟ್ರಾನಿಕ್ ಪುಟ್ಟ ಸಾಧನವನ್ನು ಅಳವಡಿಸಿ ಪ್ರಚಾರ ಪಡೆಯುವ ತಂತ್ರವಿದು. ಈ ವೈಬ್ರೆಟರ್ ಎರಡು ಸಣ್ಣ ಬ್ಯಾಟರಿ ಮತ್ತೊಂದು ಸೆನ್ಸಾರ್ ಸ್ವಿಚ್ ಹೊಂದಿತ್ತು.

ಇಂತಹ ವಿಚಿತ್ರ ಜಾಹೀರಾತು ತಂತ್ರವನ್ನು ಫೋಕ್ಸ್ ವ್ಯಾಗನ್ ಪರಿಚಯಿಸಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್ 21ರಂದು ಮಾತನಾಡುವ ಪುಟ್ಟ ಸಾಧನವೊಂದನ್ನು ಪ್ರಮುಖ ಪತ್ರಿಕೆಗಳಿಗೆ ಅಂಟಿಸಿತ್ತು.

ಕಳೆದ ವರ್ಷ ನೀಡಿದ ಪುಟ್ಟ ಸಾಧನದಲ್ಲಿ ವೆಂಟೊ ಕಾರಿನ ಬಗ್ಗೆ ಮುದ್ರಿತ ಧ್ವನಿಗಳಿದ್ದವು. ಆದರೆ ಈ ಸಲ ಕೇವಲ ವೈಬ್ರೆಟರ್ ಅಳವಡಿಸಿದೆ. ಬಹುಶಃ ಮುಂದಿನ ವರ್ಷ ಫೋಕ್ಸ್ ವ್ಯಾಗನ್ ಕಂಪನಿಯು ಇನ್ಯಾವ ಇನ್ನೋವೆಟಿವ್ ಜಾಹೀರಾತು ನೀಡುವುದೋ ಕಾದುನೋಡಬೇಕಿದೆ.

ಸದ್ಯ ಕಂಪನಿಯು ನೂತನ ಪೊಲೊ ಮತ್ತು ವೆಂಟೊ ಕಾರುಗಳ ಪ್ರಚಾರಕ್ಕೆ ವೈಬ್ರೆಟರ್ ಜಾಹೀರಾತು ತಂತ್ರ ಅನುಸರಿಸಿದೆ. ಯಾವುದಕ್ಕೂ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಪೇಪರ್ ಪುಟ ಬಿಡಿಸುವ ಮುನ್ನ ತುಸು ಎಚ್ಚರದಿಂದ ಇರುವುದು ಒಳ್ಳೆಯದು.

ಏನಂತೀರಿ?

Most Read Articles

Kannada
English summary
Volkswagen Vibrating ad on Newspapers. New Ad campaign slogon "Feel the shiver of excitement?. Volkswagen Vibrating ad trying to prompte upgraded variants of the Polo and Vento cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X