ಫೋಕ್ಸ್‌ವ್ಯಾಗನ್ ಟೆಸ್ಟ್ ಡ್ರೈವ್‌; ಈಗಲೇ ಬುಕ್ ಮಾಡಿ..!

Posted By:

ದೇಶದ ಕಾರು ಖರೀದಿ ಗ್ರಾಹಕರಿಗಾಗಿ ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಟೆಸ್ಟ್ ಡ್ರೈವ್ ಆಫರ್ ಮುಂದಿರಿಸಿದೆ. ಈ ಲಿಮಿಟೆಡ್ ಅವಧಿಯ ಆಫರ್‌ನಲ್ಲಿ ಭಾಗವಹಿಸಿದವರಿಗೆ ಫೋಕ್ಸ್‌ವ್ಯಾಗನ್ ಪೊಲೊ ಅಥವಾ ವೆಂಟೊ ಕಾರುಗಳನ್ನು ಗೆಲ್ಲುವ ಅವಕಾಶವೂ ಇದೆ.

ನಿಮಗೆ ಫೋಕ್ಸ್‌ವ್ಯಾಗನ್ ಟೆಸ್ಟ್ ಡ್ರೈವ್‌ನಲ್ಲಿ ಭಾಗವಹಿಸಲು ಆಸಕ್ತಿಯಿದ್ದರೆ ಭಾಗವಹಿಸಬಹುದು. ಅದೇ ರೀತಿ ನವೆಂಬರ್ 30ರೊಳಗೆ ಬುಕ್ಕಿಂಗ್ ಮಾಡಿದ ಅದೃಷ್ಟವಂತ ಗ್ರಾಹಕನಿಗೆ ಫೋಕ್ಸ್‌ವ್ಯಾಗನ್ ಪೊಲೊ ಅಥವಾ ವೆಂಟೊ ಆವೃತ್ತಿ ಗೆಲ್ಲುವ ಅವಕಾಶವಿದೆ.

ಅಂದ ಹಾಗೆ ಮುಂದಿನ ವರ್ಷ ಫೋಕ್ಸ್‌ವ್ಯಾಗನ್‌ನಿಂದ ಪೊಲೊ ಜಿಟಿಡಿ ಕಾರು ಆಗಮನವಾಗಲಿದೆ. ಉತ್ತಮ ನಿರ್ವಹಣೆ, ಮೈಲೇಜ್ ಹಾಗೂ ಆಕರ್ಷಕ ಫೀಚರ್ಸ್‌ಗಳು ನೂತನ ಕಾರಿನ ಪ್ರಮುಖ ಫೀಚರ್ಸ್ ಆಗಿದೆ.

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಡಿ

ಸಾಮಾನ್ಯವಾಗಿ ಹ್ಯಾಚ್‌ಬ್ಯಾಕ್ ಕಾರುಗಳು ಬೃಹತ್ ಎಂಜಿನ್ ಹೊಂದಿರುತ್ತದೆ. ಅಂತೆಯೇ ಫೋಕ್ಸ್‌ವ್ಯಾಗನ್ ಇಂಡಿಯಾ ಕೂಡಾ ನೂತನ ಪೊಲೊ ಜಿಟಿಡಿ ಆವೃತ್ತಿಗೆ 1.6 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಿದೆ. ಇದರೊಂದಿಗೆ ಮೈಲೇಜ್ ಕಡಿಮೆಯಾಗದಂತೆ ನೋಡಿಕೊಳ್ಳಲಿದೆ.

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಡಿ

ಇತರ ಮಾದರಿಗಳಿಗೆ ಹೋಲಿಕೆ ಮಾಡಿದಾಗ ಸ್ವಲ್ಪ ಹಗುರವಾಗಲಿರುವ ಪೊಲೊ ಜಿಟಿಡಿ ಡ್ರೈವಿಂಗ್ ಆರಾಮದಾಯಕವಾಗಿಲಿದೆ.

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಡಿ

1.6 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಪೊಲೊ ಜಿಟಿಡಿ 105 ಹಾರ್ಸ್ ಪವರ್ ಉತ್ಪಾದಿಸಲಿದ್ದು, ಮ್ಯಾಕ್ಸಿಮಮ್ ಟರ್ಕ್ಯೂ 250 ಎನ್‌ಎಂ ಆಗಿದೆ.

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಡಿ

2013ರಲ್ಲಿ ಆಗಮನವಾಗಲಿರುವ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಡಿ ಟರ್ಬೊ ಡೀಸೆಲ್ ಎಂಜಿನ್‌ಗಳನ್ನು ಈಗಾಗಲೇ ಫೋಕ್ಸ್‌ವ್ಯಾಗನ್ ವೆಂಟೊ ಹಾಗೂ ಸ್ಕೋಡಾ ರ‌್ಯಾಪಿಡ್ ಆವೃತ್ತಿಗಳಲ್ಲಿ ಬಳಕೆ ಮಾಡಲಾಗಿದೆ.

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಡಿ

ಹೊಸ ಪೊಲೊ ಜಿಟಿಡಿ ಸದ್ಯ ಲಭ್ಯವಿರುವ ಪೊಲೊ ಮಾದರಿಗಿಂತಲೂ ದುಬಾರಿಯಾಗಲಿರಿದೆ. ಸದ್ಯ ಲಭ್ಯವಿರುವ ಮಾಹಿತಿಯಂತೆ ಟಾಪ್ ಎಂಡ್ ಪೊಲೊ ಮಾಡೆಲ್‌ಗಿಂತಲೂ ಕನಿಷ್ಠ 50 ಸಾವಿರದಷ್ಟು ದುಬಾರಿಯಾಗಲಿದೆ. ಆದರೆ ಇತರ ತೆರಿಗೆ ಪರಿಗಣಿಸಿದಾಗ ಇನ್ನಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಡಿ

ಭಾರತೀಯ ಸರಕಾರು ಕಾಂಪ್ಯಾಕ್ಟ್ ಕಾರುಗಳಿಗೆ ಹೆಚ್ಚಿನ ತೆರಿಗೆ ವಿಧಿಸುತ್ತದೆ. ಸ್ವಾಭಾವಿಕವಾಗಿ 2013 ಪೊಲೊ ಜಿಟಿಡಿ ಕಾರು ಖರೀದಿ ಗ್ರಾಹಕರು ಹೆಚ್ಚಿನ ದುಡ್ಡು ಖರ್ಚು ಮಾಡಬೇಕಾಗುತ್ತದೆ.

ಇನ್ನು ವಿನ್ಯಾಸದ ಬಗ್ಗೆ ಚರ್ಚಿಸಿದರೆ ಫೋಕ್ಸ್‌ವ್ಯಾಗನ್ ನೂತನ ಪೊಲೊ ಜಿಟಿಡಿ ಕಾರು ಹೊಸ ಬಾಡಿ ಕಿಟ್, ಲೊ ಪ್ರೊಫೈಲ್ ಟಯರ್ ಹಾಗೂ ಸ್ಫೋರ್ಟಿ ಬಿಟ್‌ಗಳನ್ನು ಹೊಂದಿರಬಹುದು.

English summary
Volkswagen is set to launch a new Polo variant come 2013. The 2013 Volkswagen Polo GTD, is considered as a hot hatch that delivers performance but not at the cost of mileage. Drivespark is running a free test drive campaign with Volkswagen. What are you waiting for?

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more