ಅಗ್ಗದ XUV500 ಸ್ವಾಗತಕ್ಕೆ ತಳಿರುತೋರಣ
ಇದೀಗ ಕಂಪನಿಯು ಅಗ್ಗದ ಎಕ್ಸ್ ಯುವಿ5ಒಒ ಕಾರನ್ನು ಪರಿಚಯಿಸಲು ಯೋಜಿಸಿರುವುದಾಗಿ ವರದಿಗಳು ಹೇಳಿವೆ. ಅಂದರೆ ಕಂಪನಿಯು ಎಕ್ಸ್ ಯುವಿ ಕಾರಿನ ಡಬ್ಲ್ಯು6 ಆವೃತ್ತಿಯನ್ನು ಕಡಿಮೆ ಫೀಚರುಗಳೊಂದಿಗೆ ಹೊರತರುವ ನಿರೀಕ್ಷೆಯಿದೆ.
ಟಾಟಾ ಸಫಾರಿ ಸ್ಟ್ರೋಮ್ ಕಾರಿಗೆ ಪೈಪೋಟಿ ನೀಡಲು ಕಂಪನಿಯು ಎಕ್ಸ್ ಯುವಿ ಅಗ್ಗದ ಆವೃತ್ತಿ ಹೊರತರುವ ನಿರೀಕ್ಷೆಯಿದೆ. ಕಂಪನಿಯು XUV500 ಇಂಟಿರಿಯರಿಗೆ ಜೋಡಿಸಿರುವ ಹತ್ತು ಹಲವು ಫೀಚರುಗಳನ್ನು ಕಿತ್ತು ತೆಗೆದು ಅಗ್ಗದ ಕಾರು ಹೊರತರುವ ಸಾಧ್ಯತೆಯಿದೆ.
ಕಂಪನಿಯು ಈಗಿನ ಎಕ್ಸ್ ಯುವಿ ಕಾರಿಗೆ ಕೆಲವೇ ಕೆಲವು ದಿನಗಳ ಕಾಲ ಬುಕ್ಕಿಂಗ್ ಅವಕಾಶ ನೀಡಿದರೂ 25 ಸಾವಿರಕ್ಕೂ ಹೆಚ್ಚು ಜನರು ಈ ಕಾರಿಗಾಗಿ ಅರ್ಜಿ ಸಲ್ಲಿಸುತ್ತಾರೆ.
ಮಹೀಂದ್ರ XUV 500 ಪ್ರಪ್ರಥಮ ಬಾರಿಗೆ ಅನಾವರಣಗೊಂಡಾಗ ಇದು ದುಬಾರಿ ಕಾರೆಂದು ಊಹಿಸಲಾಗಿತ್ತು. ಆದರೆ ಊಹೆಗಳೆಲ್ಲ ತಲೆಕಳಗಾಗುವಂತೆ ಈ ಕಾರು ಪ್ರತಿಸ್ಪರ್ಧಿ ಕಾರುಗಳಿಗಿಂತ ಅಗ್ಗವಾಗಿತ್ತು.
ಮಹೀಂದ್ರ ಎಕ್ಸ್ ಯುವಿ 5ಒಒ ಕಾರಿಗೆ ಅತ್ಯಧಿಕ ಬೇಡಿಕೆಯಿದೆ. ಕಂಪನಿಯು ವೇಟಿಂಗ್ ಪಿರೆಯಿಡ್ ಕಡಿಮೆ ಮಾಡಲು ಕಷ್ಟಪಡುತ್ತಿದೆ. ಇಂತಿಪ್ಪ ಸಮಯದಲ್ಲಿ ಕಂಪನಿಯು ಅಗ್ಗದ ಕಾರನ್ನು ಹೊರತಂದರೆ ಅತ್ಯಧಿಕ ಬೇಡಿಕೆಗೆ ಸ್ಪಂಧಿಸಲು ಕಂಪನಿಗೆ ಸಾಧ್ಯವಿದೆಯೇ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









