ಮಹಿಳೆಯರ ಅಚ್ಚುಮೆಚ್ಚಿನ ಕಾರು ಬಗ್ಗೆ ತಿಳಿಯುವ ಕುತೂಹಲ ನಿಮ್ಮಲ್ಲೂ ಇದೆಯೇ..?
ಮಹಿಳೆಯರ ಅಚ್ಚು ಮೆಚ್ಚಿನ ಬಗ್ಗೆ ತಿಳಿಯುವ ಕುತೂಹಲ ಹಲವರಲ್ಲಿ ಇದ್ದೇ ಇರುತ್ತದೆ. ಆದರೆ ಇದನ್ನು ಗ್ರಹಿಸುವುದು ಅಷ್ಟು ಸುಲಭ ಮಾತಲ್ಲ. ಹಾಗಿದ್ದರೂ ಇಂತಹದೊಂದು ಸಾಹಸಕ್ಕೆ ಜಗತ್ತಿನ ವಾಹನ ತಯಾರಕರು ಮುಂದಾಗಿದ್ದಾರೆ.
ಅದರ ಪ್ರಮುಖ ಉದ್ದೇಶ ಮಹಳೆಯರ ಅಚ್ಚುಮೆಚ್ಚಿನ ಕಾರು ಯಾವುದು ಎಂಬುದು ತಿಳಿಯುವುದಾಗಿದೆ. ಇದಕ್ಕಾಗಿ ವೋಟಿಂಗ್ ಸಿಸ್ಟಮ್ ಕೂಡಾ ಏರ್ಪಡಿಸಲಾಗಿತ್ತು. ಅಂತಿಮವಾಗಿ ಜಗತ್ತಿನ 12 ದೇಶಗಳ ಮಹಿಳೆಯರು ಭಾಗವಹಿಸಿದ ಮತದಾನದಲ್ಲಿ ಆ ಅದೃಷ್ಟ ಕಾರನ್ನು ಆಯ್ಕೆ ಮಾಡಲಾಯಿತು.
ಇಷ್ಟೆಲ್ಲ ವಿವರಣೆ ನೀಡಿದ ಮೇಲಂತೂ ಆ ಸುಂದರಿ ಕಾರು ಯಾವುದು ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲೂ ಇರಬಹುದು. ಇನ್ಯಾಕೆ ತಡ 2012ರ ವಿಶ್ವ ಮಹಿಳೆಯರ ಅಚ್ಚುಮೆಚ್ಚಿನ ಕಾರೆಂಬ ಹೆಗ್ಗಳಿಕೆಯನ್ನು 'ರೇಂಜ್ ರೋವರ್ ಇವೊಕ್' ಪಡೆದಿದೆ.
ಮಹಿಳೆಯರ ಆಯ್ಕೆ ಯಾವತ್ತೂ ವಿಭಿನ್ನವಾಗಿರುತ್ತದೆ. ಇದರಂತೆ ಬೆಸ್ಟ್ ಫ್ಯಾಮಿಲಿ ಕಾರ್, ಐಷಾರಾಮಿ ಕಾರು, ಸ್ಫೋರ್ಟ್ಸ್ ಕಾರ್ ಹಾಗೂ ಎಕಾನಮಿ ಕಾರು ಎಂಬ ವಿಭಾಗಗಳಲ್ಲಿ ಕಾರುಗಳನ್ನು ಆಯ್ಕೆ ಮಾಡಲಾಗಿತ್ತು. ಇದರಂತೆ ವೋಟಿಂಗ್ ರೇಸ್‌ನಲ್ಲಿ ಎಲ್ಲ ಕಾರುಗಳನ್ನು ಹಿಮ್ಮೆಟ್ಟಿಸಿರುವ ರೇಂಜ್ ರೋವರ್ ಇವೊಕ್ ಅಗ್ರಸ್ಥಾನ ಗಿಟ್ಟಿಸಿದೆ.
ಪ್ರಸ್ತುತ ಪೋಲ್‌ನಲ್ಲಿ ಬಿಎಂಡಬ್ಲ್ಯುಂ ಸೇರಿದಂತೆ ಅನೇಕ ಜನಪ್ರಿಯ ಕಾರುಗಳು ಶಾಮೀಲಾಗಿದ್ದವು. ಆದರೆ ಮಹಿಳೆಯರನ್ನು ಸೆಳೆಯುವಲ್ಲಿ ಕ್ರಾಸೊವರ್ ಸ್ಫೋರ್ಟ್ ಯುಟಿಲಿಟಿ ವೆಹಿಕಲ್ ರೇಂಜ್ ರೋವರ್ ಇವೊಕ್ ಯಶಸ್ವಿಯಾಗಿದೆ. ಅಂದ ಹಾಗೆ ಬಿಎಂಬ್ಲ್ಯು 3 ಸಿರೀಸ್ ಹಾಗೂ ಆಡಿ ಕ್ಯೂ3 ಕಾರುಗಳು ಆನಂತರದ ಸ್ಥಾನ ಗಿಟ್ಟಿಸಿಕೊಂಡಿವೆ.

ಪ್ರಥಮ ಸ್ಥಾನ- ರೇಂಜ್ ರೋವರ್ ಇವೊಕ್
ಪ್ರಥಮ ಸ್ಥಾನ- ರೇಂಜ್ ರೋವರ್ ಇವೊಕ್
ದ್ವಿತೀಯ ಸ್ಥಾನ- ಬಿಎಂಡಬ್ಲ್ಯು 3-ಸಿರೀಸ್
ತೃತೀಯ ಸ್ಥಾನ- ಆಡಿ ಕ್ಯೂ3

ಫ್ಯಾಮಿಲಿ ಕಾರು ವಿಭಾಗ
ಪ್ರಥಮ ಸ್ಥಾನ- ಬಿಎಂಡಬ್ಲ್ಯು 3-ಸಿರೀಸ್
ದ್ವಿತೀಯ ಸ್ಥಾನ- ಆಡಿ ಕ್ಯೂ3
ತೃತೀಯ ಸ್ಥಾನ- ಫೋರ್ಡ್ ಫೋಕಸ್

ಐಷಾರಾಮಿ ಕಾರು ವಿಭಾಗ
ಪ್ರಥಮ ಸ್ಥಾನ- ರೇಂಜ್ ರೋವರ್ ಇವೊಕ್
ದ್ವಿತೀಯ ಸ್ಥಾನ- ಜಾಗ್ವಾರ್ ಎಕ್‌ಜೆ
ತೃತೀಯ ಸ್ಥಾನ- ಆಡಿ ಎ6

ಸ್ಫೋರ್ಟ್ಸ್ ಕಾರು ವಿಭಾಗ
ಪ್ರಥಮ ಸ್ಥಾನ- ಪೊರ್ಶೆ 911
ದ್ವಿತೀಯ ಸ್ಥಾನ- ಜಾಗ್ವಾರ್ ಎಕ್ಸ್‌ಕೆಆರ್
ತೃತೀಯ ಸ್ಥಾನ- ಮರ್ಸಿಡೀಸ್ ಬೆಂಝ್ ಎಸ್‌ಎಲ್‌ಕೆ

ಎಕಾನಮಿ ಕಾರು ವಿಭಾಗ
ಪ್ರಥಮ ಸ್ಥಾನ- ಹೊಂಡಾ ಸಿವಿಕ್
ದ್ವಿತೀಯ ಸ್ಥಾನ- ವಿಡಬ್ಲ್ಯು ಅಪ್
ತೃತೀಯ ಸ್ಥಾನ- ಫೋರ್ಡ್ ಫಿಯೆಸ್ಟಾ


Click it and Unblock the Notifications








