ಕಾರು ತಂತ್ರಜ್ಞಾನದಲ್ಲೂ ರೇಂಜ್ ರೋವರ್ ಇವೋಕ್ ನಂ.1

Written By:

ಜಾಗತಿಕವಾಗಿ ಹಲವಾರು ಮನ್ನಣೆಗೆ ಪಾತ್ರವಾಗಿರುವ ರೇಂಜ್ ರೋವರ್ ಇವೋಕ್ ಮತ್ತೆ ಸದ್ದು ಮಾಡಿದೆ. ಈ ಬಾರಿ ಕಾರು ತಂತ್ರಜ್ಞಾನದಲ್ಲಿ ಅಗ್ರಪಟ್ಟ ಆಲಂಕರಿಸಿಕೊಂಡಿದೆ. ಈ ಹಿಂದೆ 2011ನೇ ಸಾಲಿನಲ್ಲಿ ಲಾಂಚ್ ಆಗಿದ್ದ ರೇಂಜ್ ರೋವರ್ ಇವೋಕ್ ಈಗಾಗಲೇ ಲೀಡಿಂಗ್ ಎಡ್ಜ್ ಡಿಸೈನ್, ಸ್ಟ್ರೈಕಿಂಗ್ ಇಂಟಿರಿಯರ್‌ಗಳಂತಹ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಈ ಎಲ್ಲದರ ಮೂಲಕ ಜಾಗತಿಕ ಪ್ರವೇಶ ಪಡೆದ ಮೂರು ವರ್ಷಗಳಲ್ಲೇ 161 ಪ್ರಶಸ್ತಿಗಳಿಗೆ ಪಾತ್ರವಾಗಿದೆ. ಇದೀಗ ಕಾರಿನೊಳಗ ತಂತ್ರಜ್ಞಾನಕ್ಕಾಗಿ ರೀಡರ್ ಅವಾರ್ಡ್ ಗೆದ್ದುಕೊಂಡಿದೆ. ಆಧುನಿಕ ತಂತ್ರಜ್ಞಾನದ ಜೊತೆಗೆ ಗರಿಷ್ಠ ಸುರಕ್ಷತೆಗೆ ಆದ್ಯತೆ ಕೊಟ್ಟಿರುವುದು ಜಾಗತಿಕವಾಗಿ ಇತರ ಕಾರುಗಳಿಗಿಂತ ರೇಂಜ್ ರೋವರ್ ಇವೋಕ್ ವಿಭಿನ್ನವಾಗಿಸಿದೆ.

To Follow DriveSpark On Facebook, Click The Like Button
ಕಾರಿನೊಳಗಿನ ತಂತ್ರಜ್ಞಾನದಲ್ಲೂ ರೇಂಜ್ ರೋವರ್ ಇವೋಕ್ ನಂ.1

ಅಷ್ಟೇ ಅಲ್ಲದೆ ವರ್ಷದ ಎಸ್‌ಯುವಿ ಅತ್ಯುತ್ತಮ ಪ್ರೀಮಿಯಂ ಎಸ್‌ಯುವಿ ಪ್ರಶಸ್ತಿಗಳಿಗೂ ಪಾತ್ರವಾಗಿದೆ. ಅಷ್ಟಕ್ಕೂ ರೇಂಜ್ ರೋವರ್ ಇವೋಕ್ ಕಾರಿನಲ್ಲಿರುವ ಪ್ರಮುಖ ತಂತ್ರಾಂಶಗಳು ಯಾವುವು? ವಿವರಗಳಿಗಾಗಿ ಮುಂದಿನ ಪುಟದತ್ತ ಕಣ್ಣಾಯಿರಿಸಿರಿ.

ಕಾರಿನೊಳಗಿನ ತಂತ್ರಜ್ಞಾನದಲ್ಲೂ ರೇಂಜ್ ರೋವರ್ ಇವೋಕ್ ನಂ.1

ಇದರಲ್ಲಿರುವ 4x4ಐ ಸಿಸ್ಟಂ ನಿರಂತರವಾಗಿ ವಾಹನದ ಡೈನಾಮಿಕ್ ಮೇಲೆ ನಿಗಾ ವಹಿಸುತ್ತಿದ್ದು, ಸೆಂಟ್ರಲ್ ಕನ್ಸೋಲ್‌ನಲ್ಲಿರುವ ಮಾಹಿತಿ ಮನರಂಜನಾ ಪರದೆಗೆ ನೇರವಾಗಿ ಮಾಹಿತಿ ರವಾನಿಸುತ್ತದೆ. ಇವೆಲ್ಲದರ ಜೊತೆಗೆ ಲ್ಯಾಂಡ್ ರೋವರ್ ಆಫ್ ರೋಡ್ ನೇವಿಗೇಷನ್ ಸಿಸ್ಟಂ ಮ್ಯಾಪಿಂಗ್ ಇಲ್ಲದ ಪ್ರದೇಶದ ಮಾಹಿತಿಯನ್ನು ಒದಗಿಸಲಿದೆ.

ಕಾರಿನೊಳಗಿನ ತಂತ್ರಜ್ಞಾನದಲ್ಲೂ ರೇಂಜ್ ರೋವರ್ ಇವೋಕ್ ನಂ.1

ಕನ್ನಡಿಯಲ್ಲಿ ಆಳವಡಿಸಲಾಗಿರುವ ಲ್ಯಾಂಡ್ ರೋವರ್ ವೇಡ್ ಸೆನ್ಸಿಂಗ್ ಸೆನ್ಸಾರುಗಳು ಚಾಲಕರಿಗೆ ನೀರಿನ ಮೇಲೆ ಸಂಚರಿಸುವ ಅಥವಾ ಗೋಚರತೆ ಕಡಿಮೆಯಿರುವ ರಾತ್ರಿಗಳಲ್ಲಿ ನೆರವಾಗಲಿದೆ. ಇದು ವಾಹನದ ಸಮೀಪದ ನೀರಿನ ಆಳದ ಮಟ್ಟ (500ಎಂಎಂ) ಏರಿಕೆಯಾದ್ದಲ್ಲಿ ಚಾಲಕರನ್ನು ತಕ್ಷಣ ಎಚ್ಚರಿಸಲಿದೆ.

ಕಾರಿನೊಳಗಿನ ತಂತ್ರಜ್ಞಾನದಲ್ಲೂ ರೇಂಜ್ ರೋವರ್ ಇವೋಕ್ ನಂ.1

ಕಾರಿನ ಸುತ್ತಲೂ ಆಳವಡಿಸಲಾಗಿರುವ ಐದು ಡಿಜಿಟಲ್ ಕ್ಯಾಮೆರಾದಿಂದ ಕಾರಿನ ಗೋಚರತೆಯು ವೃದ್ಧಿಸಿದೆ. ಈ ಮೂಲಕ ಸುತ್ತಲಿನ ಪ್ರದೇಶದ ಸರಿ ಸುಮಾರು 360 ಡಿಗ್ರಿ ರಿಯಲ್ ಟೈಮ್ ದರ್ಶನ ನೀಡುವ ಪ್ರಯತ್ನ ಮಾಡಿದೆ.

ಕಾರಿನೊಳಗಿನ ತಂತ್ರಜ್ಞಾನದಲ್ಲೂ ರೇಂಜ್ ರೋವರ್ ಇವೋಕ್ ನಂ.1

ಇದರಂತೆ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ವ್ಯವಸ್ಥೆಯು ಕಾರಿನ ಸುತ್ತಲಿನ ಪ್ರದೇಶದ ಬ್ಲೈಂಡ್ ಸ್ಪಾಟ್ ಪತ್ತೆ ಹಚ್ಚಲಿದೆ. ಈ ತಂತ್ರಜ್ಞಾನದ ಮೂಖಾಂತರ ಚಾಲಕರಿಗೆ ಕ್ಷಿಪ್ರ ಗತಿಯಲ್ಲಿ ಬ್ಲೈಂಡ್ ಸ್ಪಾಟ್ ವಾರ್ನಿಂಗ್ ಲೈಟ್ ಫ್ಲ್ಯಾಶ್ ಆಗಲಿದೆ.

ಕಾರಿನೊಳಗಿನ ತಂತ್ರಜ್ಞಾನದಲ್ಲೂ ರೇಂಜ್ ರೋವರ್ ಇವೋಕ್ ನಂ.1

ರಿವರ್ಸ್ ಟ್ರಾಫಿಕ್ ಡಿಟೆಕ್ಷನ್ ಮಗದೊಂದು ವೈಶಿಷ್ಟ್ಯವಾಗಿದ್ದು, ವಾಹನ ದಟ್ಟಣೆಯ ಪ್ರದೇಶದಲ್ಲಿ ರಿವರ್ಸ್ ಮಾಡುವಾಗ ಸಹಕಾರಿಯಾಗಲಿದೆ. ಈ ವೇಳೆ ಚಾಲಕರಿಗೆ ಎರಡು ಬದಿಗಳಿಂದ ಎಚ್ಚರಿಕೆ ರವಾನೆಯಾಗಲಿದೆ.

ಕಾರಿನೊಳಗಿನ ತಂತ್ರಜ್ಞಾನದಲ್ಲೂ ರೇಂಜ್ ರೋವರ್ ಇವೋಕ್ ನಂ.1

ಅಂತೆಯೇ ಇದರ ಇಕೊ ಡ್ರೈವ್ ತಂತ್ರಜ್ಞಾನವು ನಿರಂತರವಾಗಿ ಎಂಟು ಇಂಚಿನ ಪರದೆಯ ಮೂಲಕ ಮಾಹಿತಿ ರವಾನಿಸಲಿದೆ. ಇದರಲ್ಲಿ ಡ್ರೈವಿಂಗ್ ಸುಧಾರಿಸಲು ನಿಟ್ಟಿನಲ್ಲಿ ಟಿಪ್ಸ್ ಕೂಡಾ ನೀಡಲಿದ್ದು, ಸಂಪೂರ್ಣ ಹೊಸತನವೆನಿಸಿದೆ.

ಕಾರಿನೊಳಗಿನ ತಂತ್ರಜ್ಞಾನದಲ್ಲೂ ರೇಂಜ್ ರೋವರ್ ಇವೋಕ್ ನಂ.1

2011ನೇ ಇಸವಿಯಲ್ಲಿ ಲಾಂಚ್ ಆಗಿರುವ ರೇಂಜ್ ರೋವರ್ ಇವೋಕ್ ಈಗಾಗಲೇ 161 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದು ಶಕ್ತಿಶಾಲಿ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್‌ಗಳನ್ನು ಪಡೆದುಕೊಂಡಿದೆ. ಅಲ್ಲದೆ ರೇಂಜ್ ರೋವರ್ ಪೈಕಿ ಅತ್ಯಂತ ವೇಗದಲ್ಲಿ ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಇವೋಕ್ ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟ ಕಂಡಿದೆ.

English summary
Range Rover Evoque is known for its global haul of accolades. Since its launch in 2011, the Evoque has won awards for leading-edge design, striking interior, and now yet again for in-car technology.
Story first published: Tuesday, July 1, 2014, 17:15 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark