ಪ್ರಾಡೊ ಕಾರಲ್ಲಿ ಬಿಎಸ್‌ವೈ ರೋಡ್ ಶೋ

ನೂತನ ಪಕ್ಷ ಸ್ಥಾಪನೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟಿರುವ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ತಮ್ಮ ರಾಜ್ಯ ಪ್ರವಾಸಕ್ಕಾಗಿ ಅತಿ ನೂತನ ಕಾರೊಂದನ್ನು ಖರೀದಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಪ್ರೀಮಿಯಂ ಎಸ್‌ಯುವಿ ಕಾರನ್ನು ಯಡ್ಡಿ ತಮ್ಮ ಚುನಾವಣೆ ಪ್ರಚಾರ ವೇಳೆ ರೋಡ್ ಶೋಗಳಿಗೆ ಬಳಸಿಕೊಳ್ಳಲಿದ್ದಾರೆ.

ಈಗಾಗಲೇ ಕುಣಿಗಲ್ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ಸಂದರ್ಭದಲ್ಲಿ ತಮ್ಮ ಕೋಟಿ ಬೆಲೆ ಬಾಳುವ ನೂತನ ಕಾರಿಗೆ ಪೂಜೆ ಸಲ್ಲಿಸಲಾಗಿದೆ. ಆ ಬಳಿಕ ಅದೇ ಕಾರಿನಲ್ಲಿ ಯಡ್ಡಿ ರೋಡ್ ಪ್ರವಾಸ ಆರಂಭಿಸಿದರು.

ನವೆಂಬರ್ 30ರಂದು ಬಿಜೆಪಿ ಶಾಸಕ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿರುವ ಯಡಿಯೂರಪ್ಪ ಹಾವೇರಿಯಲ್ಲಿ ನಡೆಯಲಿರುವ ಕರ್ನಾಟಕ ಜನತಾ ಪಕ್ಷದ ಉದ್ಘಾಟನಾ ಸಮಾವೇಶದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನದ ಅಧಿಕೃತ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಡಿಸೆಂಬರ್ 9ರ ಹಾವೇರಿ ಬೃಹತ್ ಸಮಾವೇಶದ ಬಳಿಕ ಯಡಿಯೂರಪ್ಪ ಮತ್ತೊಂದು ಸುತ್ತಿನ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಈಗಾಗಲೇ ತಮ್ಮ ವಿರೋಧಿಗಳ ವಿರುದ್ಧ ಗುಡುಗಿರುವ ಯಡಿಯೂರಪ್ಪ ಅವರಿಗೆ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಸಾಥ್ ನೀಡಲಿದೆ.

ಹಾಗಿದ್ದರೆ ಬನ್ನಿ ಯಡ್ಡಿ ನೂತನ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರಿನ ವಿಶೇಷತೆ ಬಗ್ಗೆ ಅರಿಯೋಣ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ವಿಶೇಷವಾಗಿಯೂ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅನುಕೂಲವಾಗುವಂತೆ ಅನೇಕ ಫೀಚರ್‌ಗಳನ್ನು ಟೊಯೊಟಾ ಲ್ಯಾಂಡ್ ಕ್ರೂಸ್ ಪ್ರಾಡೊ ಕಾರಿನಲ್ಲಿ ಆಳವಡಿಸಲಾಗಿದೆ. ಅಲ್ಲದೆ ಜನರನ್ನುದ್ದೇಶಿಸಿ ಮಾತನಾಡಲು ಅನುಕೂಲವಾಗುವಂತೆ ಸ್ಪೀಕರ್‌, ಮೈಕ್‌ ವ್ಯವಸ್ಥೆ ಕಾರಿನಲ್ಲಿ ಆಳವಡಿಸಲಾಗಿದೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ರಾಜ್ಯ ಪ್ರವಾಸದ ಸಂದರ್ಭದಲ್ಲಿ ರೋಡ್ ಷೋ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಲು ಕಾರಿನ ನಾಲ್ಕು ಮೂಲೆಗಳಲ್ಲೂ ಪ್ರಚಾರ ಮೈಕ್ ಜೋಡಿಸಲಾಗಿದೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಯುಡಿಯೂರಪ್ಪ ಅತಿ ದುಬಾರಿ ಕಾರಿನಲ್ಲಿ ಓಪನ್ ಟಾಪ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಇದರೊಂದಿಗೆ ಕಾರಿನಲ್ಲಿ ಇದ್ದುಕೊಂಡೆ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಬಹುದಾಗಿದೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ವಿಶ್ರಾಂತಿಗಾಗಿ ಫೋಲ್ಡಿಂಗ್ ಚೇರ್ ವ್ಯವಸ್ಥೆ ಮಾಡಲಾಗಿದ್ದು, ಆಟೋಮ್ಯಾಟಿಕ್ ಸೀಟ್ ಪುಲ್ಲಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕುಳಿತುಕೊಂಡೇ ಭಾಷಣ ಮಾಡಲು ನೆರವಾಗಲಿದೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಟಾಪ್ ವೆರಿಯಂಟ್ ಪ್ರೀಮಿಯಂ ಎಸ್‌ಯುವಿ ಕಾರು ಆಗಿದ್ದು, ಉತ್ತಮ ಇಂಧನ ಕ್ಷಮತೆ ನೀಡಲಿದೆ. ಕಾರಿನ ಒಳಗಡೆ ಯಡ್ಡಿಗೆ ನೆರವಾಗುವ ರೀತಿಯಲ್ಲಿ ಅನೇಕ ಸೌಲಭ್ಯಗಳನ್ನು ಆಳವಡಿಸಲಾಗಿದೆ.

Image source: Deccan Chronicle
ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ದರ ಮಾಹಿತಿ

ಇದು ನಗರದ ರಸ್ತೆಗಳಲ್ಲಿ, ದುರ್ಗಮ ಮತ್ತು ಒರಟು ಭೂಪ್ರದೇಶದಲ್ಲಿಯೂ ಬಳಸಲು ಯೋಗ್ಯವಾಗಿದೆ. ಇದರ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 62. 14 ಲಕ್ಷ ರೂಪಾಯಿಗಳಾಗಿವೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಕಲರ್ ವೆರಿಯಂಟ್

ಕ್ರೈಸ್ಟಲ್ ಪಿಯರ್ಲ್

ಸಿಲ್ವರ್ ಪಿಯರ್ಲ್

ಗ್ರಾಫೈಟ್

ಮೆಟಲ್ ಸ್ಟ್ರೋಮ್

ಇಬೊನಿ

ಡಾರ್ಕ್ ಫರ್ನಾನ್ಸ್

ಸ್ಯಾಂಡ್‌ಸ್ಟೋನ್

ಬ್ಲ್ಯೂ ಸ್ಟ್ರೋಮ್

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟೊ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರು ಫೈವ್ ಡೋರ್ (ಜಿಎಕ್ಸ್, ಜಿಎಕ್ಸ್‌ಎಲ್, ವಿಎಕ್ಸ್, ಕಕಡು) ಹಾಗೂ ತ್ರಿ ಡೋರ್ (ಎಕ್ಸ್ ಹಾಗೂ ಝಡ್‌ಆರ್) ವೆರೆಯಂಟ್‌ಗಳಲ್ಲಿ ಲಭ್ಯವಿದೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟೊ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರಿನ ಎಲ್ಲ ಮಾದರಿಗಳಲ್ಲಿಯೂ ಪ್ರಯಾಣಿಕರಿಗೆ ಚಾಲಕರಿಗೆ ಅನುಕೂಲವಾಗುವಂತೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಈ ಹೊಸ ವಿನ್ಯಾಸದ ಪ್ರಾಡೊ ವಾಹನದ ಒಳ ಭಾಗದ ವಿಶಾಲವಾದ ಶ್ರೀಮಂತಿಕೆಗೆ ಇನ್ನಷ್ಟು ಮೆರುಗು ನೀಡಲಾಗಿದೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಸುರಕ್ಷಾ ವ್ಯವಸ್ಥೆ

ವಿಶ್ವ ದರ್ಜೆಯ ಸುರಕ್ಷಾ ವ್ಯವಸ್ಥೆಯನ್ನು ಪ್ರಾಡೊ ಕಾರಿಗೆ ಕಲ್ಪಿಸಲಾಗಿದೆ. ಇದು ಎಸ್‌ಆರ್‌ಎಸ್ ಏರ್‌ಬ್ಯಾಗ್, ಎಬಿ-ಐ (ಆಕ್ಟಿವ್ ಬ್ರೇಕಿಂಗ್ ವಿತ್ ಇಂಟೆಲಿಜೆನ್ಸ್), ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿಎಸ್‌ಸಿ) ಮತ್ತು ಟ್ರಾಕ್ಷನ್ ಕಂಟ್ರೋಲ್ (ಟಿಆರ್‌ಸಿ) ಹೊಂದಿದೆ. ಅಲ್ಲದೆ ಸೆಕ್ಯೂರಿಟಿ ಗಾರ್ಡ್‌ಗಳಿಗೂ ನಿಲ್ಲುವಂತೆ ಅವಕಾಶ ಕಲ್ಪಿಸಲಾಗಿದೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ವಿನ್ಯಾಸ

ಕೇವಲ ಹೊಂರಗಣ ಮಾತ್ರವಲ್ಲದೇ ಪ್ರಾಡೊ ಒಳಾಂಗಣ ವಿನ್ಯಾಸ ಕೂಡಾ ವಿಶ್ವ ದರ್ಜೆಯದ್ದಾಗಿದೆ. ಕಾರಿನ ಕೀ ನಿಮ್ಮ ಜೇಬಿನಿಂದ ಹೊರತೆಗೆಯದ ಹೊರತಾಗಿಯೂ ಅಲಾಯ್ ವೀಲ್ ಲಾಕ್ ಅಥವಾ ಅನ್ ಲಾಕ್ ಮಾಡುವ ವ್ಯವಸ್ಥೆ ಹೊಂದಿದೆ. ಇದರ ಟಚ್ ಸೆನ್ಸಾರ್ ನೆರವಿನಿಂದ ಚಾಲಕ ಹತ್ತಿಕ ಬಂದಾಗಲೇ ಡೋರ್ ಹ್ಯಾಂಡಲ್ ಆಟೋಮ್ಯಾಟಿಕ್ ಆಗಿ ಅನ್‌ ಲಾಕ್ ಆಗುತ್ತದೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಹೊಸ ವಿನ್ಯಾಸದ ಕಾರಿನಲ್ಲಿ ಯಡಿಯೂರಪ್ಪ ಅದೃಷ್ಟ ಖುಲಾಯಿಸಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Saturday, November 24, 2012, 13:56 [IST]
English summary
Karnataka's former chief minister Yedyurappa who will be launching a new political party has bought himself a Toyota Land Cruiser Prado premium SUV. The Prado has been added with public address system and a sun rood to help in during his election campaigns.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+