ಬೆಂಝ್ ಜಿ63 ಲಾಂಚ್; ದರ ಜಸ್ಟ್ 1.46 ಕೋಟಿ
ಜರ್ಮನಿಯ ಪ್ರೀಮಿಯ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್, ಭಾರತದಲ್ಲಿ ಬಹುನಿರೀಕ್ಷಿತ ಜಿ63 ಎಎಂಜಿ ಕಾರನ್ನು ಲಾಂಚ್ ಮಾಡಿದೆ. ಅಂದ ಹಾಗೆ ನಿಮ್ಮಿಂದ ಈ ಅದ್ದೂರಿ ಕಾರಿನ ದರ ಎಷ್ಟೆಂದು ಅಂದಾಜಿಸಬಹುದೇ?
ನೀವು ಆಫ್ ರೋಡಿಂಗ್ ಡ್ರೈವಿಂಗ್‌ಗಾಗಿ ಎಷ್ಟೇ ದುಡ್ಡು ಖರ್ಚು ಮಾಡಲು ತಯಾರಿದ್ದರೆ ಕಣ್ಣು ಮುಚ್ಚಿಕೊಂಡು ಈ ಕಾರನ್ನು ಖರೀದಿಸಬಹುದಾಗಿದೆ. ಯಾಕೆಂದರೆ ಇದರ ದರ 1. 46 ಕೋಟಿ ರುಪಾಯಿಗಳಾಗಿವೆ.
ಜಿ ಕ್ಲಾಸ್ ಎಸ್‌ಯುವಿಯಲ್ಲಿ ಬಹುನಿರೀಕ್ಷಿತ ಕಾರಾಗಿದೆ ಜಿ-63. ಪ್ರಸ್ತುತ 2013 ಜಿ63 ಎಎಂಜಿ ಕಾರು, ಜಿ55 ಎಎಂಜಿ ಆವೃತ್ತಿಯ ಮುಂದುವರಿದ ವರ್ಷನ್ ಆಗಿದೆ. ಕೆಳಗಡೆ ಕೊಡಲಾಗಿರುವ ಫೋಟೊ ಫೀಚರ್ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಪ್ರಯತ್ನಿಸಿರಿ...

ಪ್ರಾರಂಭದಲ್ಲಿ ಮಿಲಿಟರಿ, ಸಾರ್ವಜನಿಕ ಹಾಗೂ ಜನಸಾಮಾನ್ಯರ ಸೇವೆಗಾಗಿ ಜಿ ಕ್ಲಾಸ್ ಎಸ್‌ಯುವಿ ಕಾರನ್ನು ಅಭಿವೃದ್ಧಿಪಡಿಸಲಾಗಿತ್ತು. 1979ನೇ ಇಸವಿಯಲ್ಲಿ ಜಿ ಕ್ಲಾಸ್ ಏಜ್ ಲೆಸ್ ವಿನ್ಯಾಸ ಪಡೆದಿತ್ತು.

ಬೆಂಝ್ ಎಎಂಜಿ ಯೂನಿಕ್ ವಿನ್ಯಾಸವನ್ನು ಹೊಂದಿದೆ. ಇದರ ಸ್ಟೈನ್‌ಲೆಸ್ ಸ್ಟೀಲ್ ರನ್ನಿಂಗ್ ಬೋರ್ಡ್ ಆಕರ್ಷಕವಾಗಿದೆ.

ಜಿ 63 ಎಎಂಜಿ ಫೈವ್ ಸಿಟ್ಟಿಂಗ್ ವ್ಯವಸ್ಥೆ ಹೊಂದಿದೆ. ನಿಮಗೆ ಇದರ ನಿರ್ವಹಣೆ ಬಗ್ಗೆ ಹೆಚ್ಚು ತಿಳಿಯಬೇಕೆಂದರೆ ಮುಂದಿನ ಸ್ಲೈಡರ್‌ಗೆ ಮುಂದುವರಿಯಿರಿ...

ಬೆಂಝ್ ಜಿ 63, ಎಎಂಜಿ 5.5 ಲೀಟರ್ ಬೈಟರ್ಬೊ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 544 ಹಾರ್ಸ್‌ಪವರ್ ಉಥ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ 5.3 ಸೆಕೆಂಡುಗಳಲ್ಲಿ 0-100 ಕೀ.ಮೀ ತನಕ ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ ವೇಗತೆ 210 ಕೀ.ಮೀ. ಆಗಿದೆ.

ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ ಜಿ-63 ಎಎಂಜಿ ಕಾರಿನ ಪ್ರಮುಖ ಫೀಚರ್ ಆಗಿದೆ.

ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಇಂಟಿರಿಯರ್ ಆಂಬಿಯಂಟ್ ಲೈಟಿಂಗ್, ಹೀಟಡ್ ಆಂಡ್ ಆಕ್ಟಿವ್ ವೆಂಟಿಲೇಟಡ್ ಫ್ರಂಟ್ ಸೀಟ್ ಹಾಗೂ ಎಲೆಕ್ಟ್ರಿಕಲಿ ಹೀಟಡ್ ವಿಂಡ್ ಶೀಲ್ಡ್ ಹೊಂದಿದೆ.

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63



Click it and Unblock the Notifications