ಸದ್ದಿಲ್ಲದೆ ಷೆವರ್ಲೆ ಕ್ರೂಜ್ ಫೇಸ್‌ಲಿಫ್ಟ್ ಲಾಂಚ್
ಅಮೆರಿಕ ಮೂಲದ ಷೆವರ್ಲೆ ಇಂಡಿಯಾ ಸದ್ದಿಲ್ಲದೆ ಕ್ರೂಜ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಿದೆ. ಈ ಮೂಲಕ ದೀಪಾವಳಿ ಹಬ್ಬಕ್ಕೆ ಇನ್ನಷ್ಟು ಮೆರಗು ತುಂಬುವ ಪ್ರಯತ್ನ ಮಾಡಲಾಗಿದೆ.
ನೂತನ ಕ್ರೂಜ್ ಫೇಸ್‌ಲಿಫ್ಟ್ ವರ್ಷನ್ ದರ 13.75 ಲಕ್ಷ ರು.ಗಳಾಗಿದೆ. ಈ ಬಗ್ಗೆ ಫೇಸ್‌ಬುಕ್ ಹಾಗೂ ಅಧಿಕೃತ ವೆಬ್‌ಸೈಟ್‌ನಲ್ಲಿ ಷೆವರ್ಲೆ ಉಲ್ಲೇಖಿಸಿದೆ.
ಕೆಲವೊಂದು ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿದರೆ ಷೆವರ್ಲೆ ಕ್ರೂಜ್‌ನಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಇದರ ಆಕ್ರಮಣಕಾರಿ ಲುಕ್ ಹೊಂದಿರುವ ಹೊಸತಾದ ಬಂಪರ್ ಹಾಗೂ 16 ಇಂಚು ಅಲಾಯ್ ವೀಲ್ ಪ್ರಮುಖ ಆಕರ್ಷಣೆಯಾಗಿದೆ.
ಹಾಗಿದ್ದರೂ ಕಾರಿನ ಆಂತರಿಕ ಹಾಗೂ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈ ಎಲ್ಲದರ ಮೂಲಕ ಕಳೆಗುಂದಿದ್ದ ಮಾರುಕಟ್ಟೆಗೆ ಉತ್ತೇಜನ ನೀಡುವ ಪ್ರಯತ್ನವನ್ನು ಷೆವರ್ಲೆ ಹೊಂದಿದೆ.
ಇದೇ ಸಂದರ್ಭದಲ್ಲಿ ಷೆವರ್ಲೆ ಸೈಲ್ ಯು-ವಿಎ ಹ್ಯಾಚ್‌ಬ್ಯಾಕ್ ಕಾರಿಗೆ ಐದು ವರ್ಷಗಳ ವಾರಂಟಿಯನ್ನು ಜನರಲ್ ಮೋಟಾರ್ಸ್ ಘೋಷಿಸಿದೆ. ಅಲ್ಲದೆ 10 ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅದೃಷ್ಟವಕಾಶವು ಇದೆ.


Click it and Unblock the Notifications









