ರಾಜಕಾರಣಿಗಳಿಗೆ ಇಷ್ಟದ ಐದು ಅತ್ಯುತ್ತಮ ಕಾರುಗಳು

ರೆನೊ ಫ್ಲೂಯೆನ್ಸ್: ಕಾರಿನೊಳಗೆ ಸಾಕಷ್ಟು ಸ್ಥಳಾವಕಾಶ ಮತ್ತು ಆರಾಮದಾಯಕತೆ ಇಷ್ಟಪಡುವರಿಗೆ ರೆನೊ ಫ್ಲೂಯೆನ್ಸ್ ಸೂಕ್ತ ಕಾರು. ಇತ್ತೀಚೆಗೆ ಕಂಪನಿಯು ಇ4 ಫ್ಲೂಯೆನ್ಸ್ ಎಂಬ ಡೀಸೆಲ್ ಆವೃತ್ತಿಯನ್ನು ಪರಿಚಯಿಸಿದೆ. ಇದು ಆರು ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಹೊಂದಿದೆ. ಈ ಕಾರಿನ ಒಟ್ಟಾರೆ ಮೈಲೇಜ್ ಪ್ರತಿಲೀಟರ್ ಡೀಸೆಲ್‌ಗೆ 20.4 ಕಿ.ಮೀ. ಇದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಪ್ರವೇಶಿಸಿರಿ.

ಷೆವರ್ಲೆ ಕ್ರೂಝ್: ನೂತನ ಷೆವರ್ಲೆ ಕ್ರೂಝ್ ಕಾರು 2.2 ಲೀಟರಿನ ವಿಸಿಡಿಐ ಎಂಜಿನ್ ಹೊಂದಿದೆ. ಇದು ಟರ್ಬೊ ಚಾರ್ಜರ್ ತಂತ್ರಜ್ಞಾನ ಹೊಂದಿದ್ದು, 3,800 ಆವರ್ತನಕ್ಕೆ 186.5 ಅಶ್ವಶಕ್ತಿ ಮತ್ತು 2 ಸಾವಿರ ಆವರ್ತನಕ್ಕೆ 424 ಟಾರ್ಕ್ ಪವರ್ ನೀಡುತ್ತದೆ. ಇದು ಎಲ್ ಟಿ, ಎಲ್ ಟಿ ಝಡ್ ಮತತ್ತು ಎಲ್ ಟಿಝಡ್ ಆಟೋಮ್ಯಾಟಿಕ್ ಎಂಬ ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. ದರ 14 ಲಕ್ಷ ರು.ನಿಂದ 16 ಲಕ್ಷ ರು.ವರೆಗಿದೆ. ವಿಮರ್ಶೆ ಓದಿ.

ಹೋಂಡಾ ಸಿವಿಕ್: 20 ಲಕ್ಷ ರುಪಾಯಿಗಿಂತ ಕಡಿಮೆ ದರದ ಕಾರುಗಳಲ್ಲಿ ಹೋಂಡಾ ಸಿವಿಕ್ ಗಮನ ಸೆಳೆಯುತ್ತದೆ. ಇದರ ಎಕ್ಸ್ ಶೋರೂಂ ದರ 12.86 ಲಕ್ಷ ರು.ನಿಂದ 15.18 ಲಕ್ಷ ರು.ವರೆಗಿದೆ. ಇದು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ದೊರಕುತ್ತದೆ. ನೂತನ ಸಿವಿಕ್ 1.8 ಲೀಟರ್ ನ ಐ-ವಿಟಿಇಸಿ ಎಂಜಿನ್ ಹೊಂದಿದೆ. ಇದರಲ್ಲಿ ಆಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಡಿಸ್ಟ್ರಿಬ್ಯೂಷನ್, ಎರಡು ಏರ್ ಬ್ಯಾಗ್ ಮತ್ತು ಜಿ-ಕಾನ್ ಇತ್ಯಾದಿ ಸೇಫ್ಟಿ ಫೀಚರ್ ಗಳಿವೆ. ಹೆಚ್ಚಿನ ಮಾಹಿತಿಗಾಗಿ.

ಸ್ಕೋಡಾ ಲಾರಾ: ಸ್ಕೋಡಾ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಲಾರಾ ಪ್ರಮುಖ. ಇದು ಐದು ಸೀಟಿನ ಸೆಡಾನ್ ಕಾರ್. ಸ್ಕೋಡಾ ಲಾರಾ ಕ್ಲಾಸಿಕ್ 1.8 ಟಿಎಸ್‌ಐ, ಲೌರಾ ಆ್ಯಂಬಿಟ್ 1.8 ಟಿಎಸ್ಐ, ಆ್ಯಂಬಿಷನ್ 2.0 ಟಿಡಿಐ ಎಂಟಿ, ಆ್ಯಂಬಿಷನ್ 2.0 ಟಿಡಿಐ ಆಟೋಮ್ಯಾಟಿಕ್, ಎಲೆಗೆನ್ಸ್ 2.0 ಟಿಡಿಐ ಎಂಟಿ, ಎಲೆಗೆನ್ಸ್ 2.0 ಟಿಡಿಐ ಎಟಿ ಮತ್ತು 2.0 ಟಿಡಿಐ ಎಲ್ & ಕೆ ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ದೊರಕುತ್ತದೆ. ಇದರ ಎಕ್ಸ್ ಶೋರೂಂ ದರ 14 ಲಕ್ಷ ರು.ನಿಂದ 19.23 ಲಕ್ಷ ರು.ವರೆಗಿದೆ. ಸಂಪೂರ್ಣ ವಿಮರ್ಶೆ ಓದಿ.

ಸ್ಕೋಡಾ ಯೆಟಿ: 20 ಲಕ್ಷ ರು.ಗಿಂತ ಅಗ್ಗದ ಕಾರುಗಳಲ್ಲಿ ಸ್ಕೋಡಾ ಯೆಟಿ ಕೂಡ ಪ್ರಮುಖ. ಇದರ ಎಕ್ಸ್ ಶೋರೂಂ ದರ 14 ಲಕ್ಷ ರು.ನಿಂದ 17.73 ಲಕ್ಷ ರು.ವರೆಗಿದೆ. ಇತ್ತೀಚೆಗೆ ಕಂಪನಿಯು ನೂತನ ಯೆಟಿ ಎಂಟ್ರಿ ಲೆವೆಲ್ ಆವೃತ್ತಿಯೊಂದನ್ನು ಪರಿಚಯಿಸಿದೆ. ಹಳೆಯ ಯೆಟಿ 4X4 ಹೆಚ್ಚು ಶಕ್ತಿಶಾಲಿಯಾದ 2 ಲೀಟರಿನ ಟಿಡಿಐ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದರ ದರ ಕಡಿಮೆ ಎನಿಸಿದರೆ ಯೆಟಿ ಹೈ ಎಂಡ್ ಆವೃತ್ತಿ ಖರೀದಿಸಬಹುದು. ಹೊಸ ಯೆಟಿ ವಿಮರ್ಶೆ ಓದಿ.

ರಾಜಕಾರಣಿಗಳು ರಾಜ್ಯ ಸುತ್ತಲು ಗ್ರೌಂಡ್ ಕ್ಲೀಯರೆನ್ಸ್ ಹೆಚ್ಚಿರುವ ಕಾರು ಖರೀದಿಸಲಿ ಎನ್ನುವುದು ಕನ್ನಡ ಡ್ರೈವ್ ಸ್ಪಾರ್ಕ್ ಕಡೆಯಿಂದ ಪುಕ್ಕಟೆ ಸಲಹೆ.

More from DriveSpark

Article Published On: Wednesday, July 4, 2012, 12:31 [IST]
English summary
Best SUV Under 20 Lakhs, Renault fluence, Skoda Yeti, Skoda Laura, Honda Civic, chevrolet cruze, Car Review, Price, Mileage, ಅತ್ಯುತ್ತಮ ಕಾರುಗಳು, ರೆನೊ ಫ್ಲೂಯೆನ್ಸ್, ಸ್ಕೋಡಾ ಯೆಟಿ, ಸ್ಕೋಡಾ ಲಾರಾ, ಹೋಂಡಾ ಸಿವಿಕ್, ಷೆವರ್ಲೆ ಕ್ರೂಝ್, ಕಾರು ವಿಮರ್ಶೆ, ದರ, ಮೈಲೇಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+