ಇಪ್ಪತ್ತು ಲಕ್ಷ ರು.ಗಿಂತ ಅಗ್ಗದ ಐದು ಬೆಸ್ಟ್ ಕಾರುಗಳು

ಮಾರುತಿ ಸುಜುಕಿ ಗ್ರಾಂಡ್ ವಿಟರಾ: ದೇಶದ ಅಗ್ರ ಕಂಪನಿ ಮಾರುತಿ ಸುಜುಕಿಯ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಹುಡುಕುವರಿಗೆ ಗ್ರಾಂಡ್ ವಿಟಾರ ಸೂಕ್ತವಾಗಬಹುದು. ಇದರ ಎಕ್ಸ್ ಶೋರೂಂ ದರವು 16 ಲಕ್ಷ ರುಪಾಯಿಯಿಂದ 18 ಲಕ್ಷ ರುಪಾಯಿವರೆಗಿದೆ. ಇದು ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತದೆ. ಈ ಎಸ್ ಯುವಿ ವಿನ್ಯಾಸ ಸುಂದರವಾಗಿದ್ದು ಗಮನ ಸೆಳೆಯುತ್ತದೆ.

ಫೋರ್ಡ್ ಎಂಡೊವರ್: ಫೋರ್ಡ್ ಕಂಪನಿಯ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಎಂಡೊವರ್ ಆರಂಭಿಕ ಎಕ್ಸ್ ಶೋರೂಂ ದರ 18 ಲಕ್ಷ ರುಪಾಯಿ. ಇದು ಇತ್ತೀಚೆಗೆ ಪರಿಷ್ಕೃತ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ರಸ್ತೆಗಿಳಿದಿದೆ. ಇದು ಆಫ್ ರೋಡ್ ಸವಾರಿಗೂ ಸೂಕ್ತವಾದ ಕಾರು. . 2.5 ಲೀಟರ್ ಟಿಡಿಸಿಐ ಎಂಜಿನ್ ಇರುವ ಎಂಡೋವರ್ ಸುಮಾರು 143 ಅಶ್ವಶಕ್ತಿ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ

ಮಾರುತಿ ಸುಜುಕಿ ಕಿಝಾಷಿ: ಮಾರುತಿ ಸುಜುಕಿ ಕಿಝಾಷಿ ಸೆಡಾನ್ ಕಾರಿನ ಎಕ್ಸ್ ಶೋರೂಂ ದರ 16.84 ಲಕ್ಷ ರು.ನಿಂದ 17.86 ಲಕ್ಷ ರು.ವರೆಗಿದೆ. ಇದು 2.4 ಲೀಟರ್ ನ ಪೆಟ್ರೊಲ್ ಎಂಜಿನ್ ಹೊಂದಿರಲಿದ್ದು, ಮ್ಯಾನುಯಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ಎರಡು ಆಯ್ಕೆಯಲ್ಲೂ ದೊರಕುತ್ತದೆ. ನೂತನ ಕಾರ್ ಮ್ಯಾನುಯಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಹೊಂದಿದೆ. 2.4 ಲೀಟರ್ ಆಟೋಮ್ಯಾಟಿಕ್ ವರ್ಸನ್ ನಲ್ಲಿ ಕಿಝಾಷಿ ಸುಮಾರು ಪ್ರತಿಲೀಟರ್ ಗೆ 10.9 ಕಿ.ಮೀ. ಮೈಲೇಜ್ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಓದಿ.

ಟಾಟಾ ಆರಿಯಾ: ಟಾಟಾ ಮೋಟರ್ಸ್ ಕಂಪನಿಯ ಪ್ರಮುಖ ಮಲ್ಟಿಪರ್ಪೊಸ್ ವೆಹಿಕಲ್ ಟಾಟಾ ಆರಿಯಾ. ಇದರ ಕ್ಯಾಬಿನ್ ಸ್ಥಳಾವಕಾಶ ಜಾಸ್ತಿಯಾಗಿದ್ದು ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಆದರೆ ಇದರಲ್ಲಿ 4x4 ಆವೃತ್ತಿ ದುಬಾರಿ. ಆದರೆ 4x2 ಆರಿಯಾ ದರ ಕಡಿಮೆಯಿದೆ. ಟಾಟಾ ಆರಿಯಾ ದರ ಸುಮಾರು 13.52 ಲಕ್ಷ ರುಪಾಯಿಯಿಂದ 18.71 ಲಕ್ಷ ರುಪಾಯಿವರೆಗಿದೆ. ಆರಿಯಾ 4x4 ಮೈಲೇಜ್ ಪ್ರತಿಲೀಟರಿಗೆ 11.8 ಕಿ.ಮೀ. ಮತ್ತು ಆರಿಯಾ 4x2 ಮೈಲೇಜ್ ಪ್ರತಿಲೀಟರಿಗೆ 12 ಕಿ.ಮೀ. ನೀಡುತ್ತದೆ. ವಿಮರ್ಶೆ ಓದಿ.

ಟೊಯೊಟಾ ಕೊರೊಲಾ ಆಲ್ಟಿಸ್: ಟೊಯೊಟಾ ಕಂಪನಿಯ ಆಲ್ಟಿಸ್ ಎಕ್ಸ್ ಶೋರೂಂ ದರ 11.12 ಲಕ್ಷ ರು.ನಿಂದ 15.60 ಲಕ್ಷ ರು.ವರೆಗಿದೆ. ಇತ್ತೀಚೆಗೆ ಕಂಪನಿಯು ಕರೊಲ್ಲಾ ಆಲ್ಟಿಸ್ ಏರೊ ಕಾರನ್ನು ಪರಿಚಯಯಿಸಿದೆ. ನೂತನ ಸ್ಪೋರ್ಟಿ ವಿನ್ಯಾಸದ ಕರೊಲ್ಲಾ ಆಲ್ಟಿಸ್ ಪೆಟ್ರೋಲ್ ಆವೃತ್ತಿಯನ್ನೂ ಪರಿಚಯಿಸಿತ್ತು. ಕೊರೊಲಾ ಕಾರಿನ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ.

ಮುಂದಿನ ಪುಟಕ್ಕೆ ಬನ್ನಿ

Most Read Articles

Kannada
English summary
est Premium Car Under 20 Lakhs. Maruti suzuki grand vitara, Ford Endeavour, Maruti Suzuki Kizashi, Tata Aria, Toyota Altis. Read Best SUVs and Sedan Car Reviw.
Story first published: Wednesday, July 4, 2012, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X