ಅಖಿಲೇಶ್ ಬಳಗಕ್ಕೆ ಸೂಕ್ತವಾದ ಹದಿನೈದು ಕಾರುಗಳು

ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಭಿವೃದ್ಧಿ ನಿಧಿಯಿಂದ ಸುಮಾರು 20 ಲಕ್ಷ ರುಪಾಯಿವರೆಗಿನ ಕಾರು ಖರೀದಿಸಲು ಸಚಿವರು ಮತ್ತು ಸಂಸದರಿಗೆ ಅನುಮತಿ ನೀಡಿದ್ದಾರೆ. ಬಹುಶಃ ಹೆಚ್ಚಿನ ಸಚಿವ ಮತ್ತು ಸಂಸದರು ಯಾವ ಕಾರು ಖರೀದಿಸಲಿ ಎಂಬ ಸಂದಿಗ್ಧತೆಯಲ್ಲಿರಬಹುದು. ಅವರಿಗೆ ಮತ್ತು ಈ ರೇಂಜಿನ ಕಾರು ಖರೀದಿಸಲು ನಿರ್ಧರಿಸಿರುವ ಸಮಸ್ತರಿಗೆ ಅನುಕೂಲವಾಗುವಂತೆ ಹದಿನೈದು ಲಕ್ಷ ರು.ನಿಂದ 20 ಲಕ್ಷ ರು.ವರೆಗಿನ ಅತ್ಯುತ್ತಮ ಕಾರುಗಳ ಪಟ್ಟಿಯನ್ನು ಕನ್ನಡ ಡ್ರೈವ್ ಸ್ಪಾರ್ಕ್ ಇಲ್ಲಿ ನೀಡಿದೆ.

ಸ್ಕೋಡಾ ಸೂಪರ್ಬ್: ಈ ಸೆಡಾನ್ ಕಾರಿನ ಆರಂಭಿಕ ದರ 18,90,201 ರುಪಾಯಿ. ಎಂಎಲ್ಎಗಳು ಸ್ಕೋಡಾ ಸೂಪರ್ಬ್ ಆಂಬಿಷನ್ ಪೆಟ್ರೋಲ್ ಆವೃತ್ತಿ ಮಾತ್ರ ಖರೀದಿಸಬಹುದಾಗಿದೆ. ಯಾಕೆಂದರೆ ಉಳಿದ ಆವೃತ್ತಿಗಳ ದರ 20 ಲಕ್ಷ ರು.ಗಿಂತ ಹೆಚ್ಚಿದೆ. ಇದರಲ್ಲಿ 1.8 ಲೀಟರ್ ಪೆಟ್ರೋಲ್ ಎಂಜಿನ್ ಸೂಪರ್ಬ್ ಕಾರು 8ರಿಂದ 12 ಕಿ.ಮೀ. ಮೈಲೇಜ್ ನೀಡುತ್ತದೆ. 3.6 ಲೀಟರಿನ ಪೆಟ್ರೋಲ್ ಎಂಜಿನ್ 6-11 ಕಿ.ಮೀ. ಮೈಲೇಜ್ ನೀಡುತ್ತದೆ. ವಿಮರ್ಶೆ ಓದಿ

ಷೆವರ್ಲೆ ಕ್ಯಾಪ್ಟಿವಾ: ಇತ್ತೀಚೆಗೆ ಜನರಲ್ ಮೋಟರ್ಸ್ ಕಂಪನಿಯು ಪರಿಷ್ಕೃತ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‌ಯುವಿ) ಕ್ಯಾಪ್ಟಿವಾ ಆವೃತ್ತಿಯನ್ನು ಪರಿಚಯಿಸಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ ಸುಮಾರು 18.74 ಲಕ್ಷ ರುಪಾಯಿ ಆಗಿದೆ. ಸಾಕಷ್ಟು ಸುರಕ್ಷತೆ ಮತ್ತು ಆರಾಮದಾಯಕತೆಯ ಫೀಚರುಗಳಿರುವ ಕ್ಯಾಪ್ಟಿವಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ನೂತನ ಷೆವರ್ಲೆ ಕ್ಯಾಪ್ಟಿವಾ ಎಸ್‌ಯುವಿ ವಿಮರ್ಶೆ ಓದಿ.

ಹ್ಯುಂಡೈ ನೂತನ ಸೊನಾಟಾ: ಇದು ಹ್ಯುಂಡೈ ಇತ್ತೀಚೆಗೆ ಪರಿಚಯಿಸಿದ ಸೆಡಾನ್ ಕಾರು. ಇದರ ಆರಂಭಿಕ ಎಕ್ಸ್ ಶೋರೂಂ ದರ 18.52 ಲಕ್ಷ ರುಪಾಯಿ. ನೂತನ ಫ್ಲೂಡಿಕ್ ಸೊನಾಟಾ 2.4 ಲೀಟರಿನ ಜಿಡಿಐ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 200 ಹಾರ್ಸ್ ಪವರ್ ಮತ್ತು 255ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಪ್ರವೇಶಿಸಿ.

ಫೋಕ್ಸ್ ವ್ಯಾಗನ್ ಹೊಸ ಜೆಟ್ಟಾ: 20 ಲಕ್ಷ ರು.ಗಿಂತ ಅಗ್ಗದ ಕಾರುಗಳಲ್ಲಿ ಜೆಟ್ಟಾ ಪ್ರಮುಖ. ಇದರ ಎಕ್ಸ್ ಶೋರೂಂ ದರ 15 ಲಕ್ಷ ರು.ನಿಂದ 19.15 ಲಕ್ಷ ರು.ವರೆಗಿದೆ. ನೂತನ ಜೆಟ್ಟಾ "ಟ್ರೆಂಡ್ ಲೈನ್" ಮತ್ತು ಟಾಪ್ ಎಂಡ್ "ಹೈಲೈನ್" ಆವೃತ್ತಿಗಳಲ್ಲಿ ದೊರಕುತ್ತಿದೆ. ನೂತನ ಜೆಟ್ಟಾದ ಹೈಎಂಡ್ ಆವೃತ್ತಿ ಕೊಂಚ ದುಬಾರಿ. ಎಂಟು ಏರ್ ಬ್ಯಾಗ್ ಹೊಂದಿರುವ ಹೈಲೈನ್ ಆವೃತ್ತಿದರ 18 ಲಕ್ಷ ರುಪಾಯಿ ಇದೆ. ವಿಮರ್ಶೆ ಓದಿ.

ಮುಂದಿನ ಪುಟದಲ್ಲಿ ಇನ್ನೈದು ಕಾರುಗಳಿವೆ. ಓದು ಮುಂದುವರೆಸಿ

More from DriveSpark

Article Published On: Wednesday, July 4, 2012, 12:14 [IST]
English summary
Top 15 Best Premium Sedan and SUVs under 20 Lacs. Kannada Drivespark suggesting best Sedan and SUVs for UP MLAs and MLCs. Skoda Superb, Chevrolet Captiva, Hyundai New Sonata, Volkswagen New Jetta is Ultimate cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+