ತೆರಿಗೆ ದುಡ್ಡಿನಿಂದ ದುಬಾರಿ ಕಾರು ಖರೀದಿಸಿ ಎಂದ ಸಿಎಂ

ರಾಜ್ಯದ ಅಭಿವೃದ್ಧಿ ನಿಧಿಯಿಂದ ಸುಮಾರು 20 ಲಕ್ಷ ರುಪಾಯಿವರೆಗಿನ ಕಾರು ಖರೀದಿಸಲು ರಾಜ್ಯದ ಸಮಸ್ತ ಸಚಿವರು ಮತ್ತು ಸಂಸದರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅನುಮತಿ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ದುಬಾರಿ ಕಾರು ಖರೀದಿಗೆ ವಿನಿಯೋಗಿಸುವ ಪರ ಮತ್ತು ವಿರೋಧ ಚರ್ಚೆಗಳು ಬಿಸಿಯೇರುತ್ತಿವೆ. (ಇದೀಗ ಬಂದ ಸುದ್ದಿ: ಅಖಿಲೇಶ್ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ)

ಕಾಂಗ್ರೆಸ್, ಬಿಜೆಪಿ, ಬಿಎಸ್ ಪಿ ಮತ್ತು ರಾಷ್ಟ್ರೀಯ ಲೋಕ್ ದಳದ ಶಾಸಕರು ಮತ್ತು ಸಂಸದರು ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ನಿಧಿಯಿಂದ ಕಾರು ಖರೀದಿಸುವುದಿಲ್ಲವೆಂದು ಹೇಳಿದ್ದಾರೆ. ಎಲ್ಲಾದರೂ ರಾಜ್ಯದ 403 ಎಂಎಲ್ಎಗಳು ಮತ್ತು 100 ಎಂಎಲ್ ಸಿಗಳು 20 ಲಕ್ಷ ರುಪಾಯಿಯ ವಾಹನ ಖರೀದಿಸಿದರೆ ನೂರು ಕೋಟಿ ರುಪಾಯಿಗಳಿಗಿಂತಲೂ ಹೆಚ್ಚು ಹಣ ಬೇಕಾಗುತ್ತದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಸುತ್ತಾಡಿ ಪ್ರಗತಿ ಕಾರ್ಯ ನಡೆಸಲು ಕಾರು ಅಗತ್ಯವಿದೆ ಎನ್ನುವ ಮೂಲಕ ತನ್ನ ನಿರ್ಧಾರವನ್ನು ಅಖಿಲೇಶ್ ಸಮರ್ಥಿಸಿಕೊಂಡಿದ್ದಾರೆ. "ಇದರಿಂದ ಅವರ ದಕ್ಷತೆ ಹೆಚ್ಚಾಗಲಿದೆ. ಐದು ವರ್ಷದ ಅಧಿಕಾರವಧಿ ಮುಗಿದ ನಂತರ ಈ ಕಾರನ್ನು ಸರಕಾರಕ್ಕೆ ಹಿಂತುರುಗಿಸಬಹುದು ಅಥವಾ ಮರುಮಾರಾಟದ ಮೌಲ್ಯದಷ್ಟು ಹಣ ನೀಡಬಹುದು" ಎಂದು ಅಖಿಲೇಶ್ ಸ್ಪಷ್ಟಪಡಿಸಿದ್ದಾರೆ. ಕಾರಿನ ಮೇಂಟೆನ್ಸ್ ವೆಚ್ಚ ಸರಕಾರ ನೀಡುವುದಿಲ್ಲವೆಂದು ಅವರು ಹೇಳಿದ್ದಾರೆ.

ಅಭಿವೃದ್ಧಿಕಾರ್ಯಕ್ಕೆ ವಿನಿಯೋಗಿಸಬೇಕಾದ ಹಣವನ್ನು ದುಬಾರಿ ಕಾರು ಖರೀದಿಗೆ ಬಳಸುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷಮಿ ಕಾಂತ್ ಬಾಜ್ ಪೈ ವಿರೋಧಿಸಿದ್ದಾರೆ. "ಇದಕ್ಕಿಂತ ಕಾರು ಖರೀದಿಸಲು ಬಡ್ಡಿರಹಿತ ಸಾಲ ನೀಡುವುದು ಸೂಕ್ತ" ಎಂಬ ಐಡಿಯಾ ನೀಡಿದ್ದಾರೆ. "ಇದು ನ್ಯಾಯಸಮ್ಮತವಲ್ಲ"ವೆಂದು ಅಖಿಲೇಶ್ ನಿರ್ಧಾರವನ್ನು ಎಸ್ ಪಿ ನಾಯಕ ಅಜಂ ಖಾನ್ ವಿರೋಧಿಸಿದ್ದಾರೆ.

ಬಹುಶಃ ಉತ್ತರ ಪ್ರದೇಶ ಸರಕಾರದ ಈ ನಿರ್ಧಾರ ಮಾರಾಟ ಇಳಿಕೆಯಿಂದ ಕಂಗಲಾಗಿರುವ ದೇಶದ ಕಾರು ಕಂಪನಿಗಳಿಗೆ ಖುಷಿ ನೀಡಬಹುದು. ಅಖಿಲೇಶ್ ಸೂಚನೆಯನ್ನು ಸಮರ್ಥವಾಗಿ ಪಾಲಿಸುವ ಉತ್ತರ ಪ್ರದೇಶದ ಸಚಿವರು ಮತ್ತು ಸಂಸದರಿಗೆ 20 ಲಕ್ಷ ರುಪಾಯಿಗಿಂತ ಅಗ್ಗದ ಯಾವ ಕಾರು ಸೂಕ್ತ ಎಂಬ ಮಾಹಿತಿಯನ್ನು ಕನ್ನಡ ಡ್ರೈವ್ ಸ್ಪಾರ್ಕ್ ನೀಡುತ್ತಿದೆ.

ಉತ್ತರ ಪ್ರದೇಶದ ಸಚಿವ/ಸಂಸದರು ಮಾತ್ರವಲ್ಲದೇ ಈ ರೇಂಜಿನಲ್ಲಿ ಕಾರು ಖರೀದಿಸುವ ಸಮಸ್ತರಿಗೂ ಇದು ಅನುಕೂಲವಾದೀತು. ಮುಂದಿನ ಪುಟಕ್ಕೆ ಸುಸ್ವಾಗತ.

More from DriveSpark

Article Published On: Wednesday, July 4, 2012, 10:20 [IST]
English summary
UP CM Akhilesh Yadav made a daring proposal to utilise the Constituency Development Funds for buying personal vehicles for MLAs and MLCs. If all the 403 MLAs and 100 MLCs were to buy a car worth Rs 20 lakh it cost more than Rs 100 Crore. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+