ಫೋಕ್ಸ್ ವ್ಯಾಗನ್ ಹೊಸ ಜೆಟ್ಟಾ, ದರ 14 ಲಕ್ಷ ರು.

Volkswagen new Jetta launched
ಫೋಕ್ಸ್ ವ್ಯಾಗನ್ ಇಂಡಿಯಾ ನೂತನ ಜೆಟ್ಟಾ ಸೆಡಾನ್ ಕಾರನ್ನು ಹೊರತಂದಿದೆ. ಇದರ ನವದೆಹಲಿ ಎಕ್ಸ್ ಶೋರೂಂ ದರ 14.12 ಲಕ್ಷ ರುಪಾಯಿ. ಕಂಪನಿಯು ಈಗ ಹಳೆಯ ಜೆಟ್ಟಾ ಕಾರನ್ನು ಸುಮಾರು 75 ಸಾವಿರ ರು. ವಿನಾಯಿತಿ ದರದಲ್ಲಿ ನೀಡುತ್ತಿದೆ. ನೂತನ ಜೆಟ್ಟಾ ಬುಕ್ಕಿಂಗ್ ಕೂಡ ಆರಂಭವಾಗಿದೆ.

ಫೋಕ್ಸ್ ವ್ಯಾಗನ್ ಇಂಡಿಯಾ ಕೇವಲ ಜೆಟ್ಟಾದ ಡೀಸೆಲ್ ಆವೃತ್ತಿಯನ್ನು ಮಾತ್ರ ಹೊರತಂದಿದೆ. ಇತ್ತೀಚೆಗೆ ಕಂಪನಿಯು ಸೆಡಾನ್ ಕಾರು ಪಸ್ಸಾಟ್ ನ ಡೀಸಲ್ ಆವೃತ್ತಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನೂತನ ಜೆಟ್ಟಾ ಮೂಲ "ಟ್ರೆಂಡ್ ಲೈನ್" ಮತ್ತು ಟಾಪ್ ಎಂಡ್ "ಹೈಲೈನ್" ಆವೃತ್ತಿಗಳಲ್ಲಿ ದೊರಕುತ್ತಿದೆ.

ನೂತನ ಜೆಟ್ಟಾ 2 ಲೀಟರಿನ ಸಾಮಾನ್ಯ ರೈಲು ಟರ್ಬೊ ಡೀಸಲ್ ಎಂಜಿನ್ ಹೊಂದಿದೆ. ಇದು 320 ಎನ್ಎಂ ಟಾರ್ಕ್ ಮತ್ತು 140 ಹಾರ್ಸ್ ಪವರ್ ನೀಡುತ್ತದೆ. ಟ್ರೆಂಡ್ ಲೈನ್ ಆವೃತ್ತಿಯಲ್ಲಿ 6 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಹೈಲೈನ್ ಆವೃತ್ತಿಯು 6 ಸ್ಪೀಡ್ ಆಟೋಮ್ಯಾಟಿಕ್ ಡಿಎಸ್ ಜಿ ಗೇರ್ ಬಾಕ್ಸ್ ಹೊಂದಿದೆ. ಇದೇ ಎಂಜಿನ್ ಸ್ಕೋಡಾ ಲಾರಾ, ಸ್ಕೋಡಾ ಸೂಪರ್ಬ್ ಮತ್ತು ಫೋಕ್ಸ್ ವ್ಯಾಗನ್ ಪಸ್ಸಾಟ್ ಕಾರುಗಳಲ್ಲಿ ಇದೆ.

ಫೋಕ್ಸ್ ವ್ಯಾಗನ್ ಇತ್ತೀಚೆಗೆ ಇಂಧನ ದಕ್ಷತೆಯ ಬ್ಲೂಮೋಷನ್ ತಂತ್ರಜ್ಞಾನವನ್ನು ಪರಿಚಯಿಸಿದೆ. ಆದರೆ ಈ ತಂತ್ರಜ್ಞಾನ ನೂತನ ಜೆಟ್ಟಾದಲ್ಲಿ ಮಿಸ್ ಆಗಿದೆ. ನೂತನ ಜೆಟ್ಟಾದಲ್ಲಿ ಎಬಿಎಸ್, ಇಬಿಡಿ, ಹಿಲ್ ಹೋಲ್ಡ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ(ಇಎಸ್ ಪಿ) ಇತ್ಯಾದಿ ಸುರಕ್ಷತೆಯ ಫೀಚರ್ ಗಳಿವೆ.

ನೂತನ ಜೆಟ್ಟಾದ ಹೈಎಂಡ್ ಆವೃತ್ತಿ ಕೊಂಚ ದುಬಾರಿ. ಎಂಟು ಏರ್ ಬ್ಯಾಗ್ ಹೊಂದಿರುವ ಹೈಲೈನ್ ಆವೃತ್ತಿದರ 18 ಲಕ್ಷ ರುಪಾಯಿ. ಇದರ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೇಡವೆಂದಲ್ಲಿ ಮ್ಯಾನುಯಲ್ ಗೇರ್ ಬಾಕ್ಸ್ ನಲ್ಲೂ ದೊರಕುತ್ತದೆ. ಇವೆರಡು ಬೇಡವೆಂದರೆ ನೂತನ ಟ್ರೆಂಡ್ ಲೈನ್ ಜೆಟ್ಟಾ ಕಾರನ್ನು ನೋಡಬಹುದು. ಇದರ ದರ 14.12 ಲಕ್ಷ ರುಪಾಯಿ.

Most Read Articles

Kannada
English summary
Volkswagen India has launched the new Jetta sedan at Rs.14.12 lakhs. Volkswagen India has launched just the diesel version of the new Jetta. The new car will be available in two variants – the base Trendline and the top end Highline variant. The new car will be available in two variants – the base Trendline and the top end Highline variant.
Story first published: Wednesday, June 20, 2012, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X