ಚಿತ್ರನಟಿ ರಂಜಿತಾಳ ಸ್ಕೋಡಾ ಲಾರಾ ಕಥೆ

Posted By:

ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದ ನಟಿ ರಂಜಿತಾ ಕೆಲವು ಸಮಯದ ಹಿಂದೆ ಹೆಚ್ಚು ಸುದ್ದಿಯಲ್ಲಿದ್ದರು. ಆಕೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. ಕನ್ನಡದ ಅಗ್ನಿ ಐಪಿಎಸ್ ಚಿತ್ರದಲ್ಲೂ ನಟಿಸಿದ್ದರು. ನಟಿ ರಂಜಿತಾ ಬಳಿ ಇರುವ ಕಾರು ಸ್ಕೋಡಾ ಲಾರಾ. ಈ ನೆಪದಲ್ಲಿ ಸ್ಕೋಡಾ ಲಾರಾ ಕಾರಿನ ಪುಟ್ಟ ವಿಮರ್ಶೆ ಇಲ್ಲಿದೆ ಓದಿ.

ಸ್ಕೋಡಾ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಲಾರಾ ಪ್ರಮುಖ. ಇದು ಐದು ಸೀಟಿನ ಸೆಡಾನ್ ಕಾರ್. ದೇಶದಲ್ಲಿ ಸ್ಕೋಡಾ ಲಾರಾ ಎಂಟು ಆವೃತ್ತಿಗಳಲ್ಲಿ ದೊರಕುತ್ತದೆ. ಇದರ ಆರಂಭಿಕ ಎಕ್ಸ್ ಶೋರೂಂ ದರ ಸುಮಾರು 13 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ.

ಲಾರಾ ಆವೃತ್ತಿಗಳು: ಸ್ಕೋಡಾ ಲಾರಾ ಕ್ಲಾಸಿಕ್ 1.8 ಟಿಎಸ್‌ಐ, ಲೌರಾ ಆ್ಯಂಬಿಟ್ 1.8 ಟಿಎಸ್ಐ, ಆ್ಯಂಬಿಷನ್ 2.0 ಟಿಡಿಐ ಎಂಟಿ, ಆ್ಯಂಬಿಷನ್ 2.0 ಟಿಡಿಐ ಆಟೋಮ್ಯಾಟಿಕ್, ಎಲೆಗೆನ್ಸ್ 2.0 ಟಿಡಿಐ ಎಂಟಿ, ಎಲೆಗೆನ್ಸ್ 2.0 ಟಿಡಿಐ ಎಟಿ ಮತ್ತು 2.0 ಟಿಡಿಐ ಎಲ್ & ಕೆ ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ದೊರಕುತ್ತದೆ.

ಎಂಜಿನ್: ಲಾರಾ 5 ಅಥವಾ 6 ಸ್ಪೀಡ್ ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ದೊರಕುತ್ತದೆ. ಸ್ಕೋಡಾ ಲಾರಾ ಮೂರು ಭಿನ್ನ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಇದರಲ್ಲಿ 1.8 ಟಿಎಸ್ಐ 4 ಕವಾಟದ 1798ಸಿಸಿ ಎಂಜಿನ್ ಹೊಂದಿದೆ. ಈ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ 4,500ರಿಂದ 6,200 ಆವರ್ತನಕ್ಕೆ 160 ಅಶ್ವಶಕ್ತಿ ನೀಡುತ್ತದೆ. 2,500- 4,200 ಆವರ್ತನಕ್ಕೆ 250ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಸ್ಕೋಡಾ ಲಾರಾ ಡೀಸೆಲ್ ಆವೃತ್ತಿಯು 2.0 ಟಿಡಿಐ 4 ಕವಾಟಟದ 1,986 ಸಿಸಿ ಎಂಜಿನ್ ಹೊಂದಿದೆ. ಈ ಟರ್ಬೊಚಾರ್ಜ್ಡ್ ಎಂಜಿನ್ ಆ್ಯಂಬಿಷನ್ ಮತ್ತು ಎಲೆಜೆನ್ಸ್ ಆವೃತ್ತಿಗಳಿಗೆ ಅಳವಡಿಸಲಾಗಿದೆ. ಇದು 4,200 ಆವರ್ತನಕ್ಕೆ 110 ಅಶ್ವಶಕ್ತಿ ಮತ್ತು 1,500-2,500 ಆವರ್ತನಕ್ಕೆ 250ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಸ್ಕೋಡಾ ಲಾರಾ ಆವೃತ್ತಿಗಳಲ್ಲಿಯೇ ಅತ್ಯಧಿಕ ಶಕ್ತಿಶಾಲಿ ಆವೃತ್ತಿಗಳಾದ ಎಲ್ ಮತ್ತು ಕೆ ಆಟೋಮ್ಯಾಟಿಕ್ ಆವೃತ್ತಿಗಳು 2.0 ಲೀಟರಿನ 1,968 ಸಿಸಿ 4 ಕವಾಟದ ಡೀಸೆಲ್ ಎಂಜಿನ್ ಹೊಂದಿದೆ. ಇದು 4 ಸಾವಿರ ಆವರ್ತನಕ್ಕೆ 140 ಅಶ್ವಶಕ್ತಿ ಮತ್ತು 1750-2,500 ಆವರ್ತನಕ್ಕೆ 320 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಆಕ್ಸಿಲರೇಷನ್: ಈ ಎಲ್ಲಾ ಆವೃತ್ತಿಗಳಲ್ಲಿ 8.17 ಸೆಕೆಂಡಿನಲ್ಲಿ ಪ್ರತಿಗಂಟೆಗೆ 100 ಕಿ.ಮೀ. ವೇಗ ಪಡೆಯಬಹುದು ಮತ್ತು ಗಂಟೆಗೆ ಗರಿಷ್ಠ 220 ಕಿ.ಮೀ. ವೇಗದಲ್ಲಿ ಪ್ರಯಾಣಿಸಬಹುದು. ಆದರೆ 2.0 ಟಿಡಿಐ ಆಟೋಮ್ಯಾಟಿಕ್ ಎಲ್ ಮತ್ತು ಕೆ ಆವೃತ್ತಿಗಳಲ್ಲಿ 11.07 ಸೆಕೆಂಡಿಗೆ 0-100 ಕಿ.ಮೀ. ಆಕ್ಸಿಲರೇಷನ್ ಪಡೆಯಬಹುದು ಮತ್ತು ಗಂಟೆಗೆ 207 ಕಿ.ಮೀ. ವೇಗದಲ್ಲಿ ಸಾಗಬಹುದು. ನೂತನ ಸ್ಕೋಡಾ ಲಾರಾ ಆರ್‌ಎಸ್ ಆವೃತ್ತಿಯಲ್ಲಿ 11.8 ಸೆಕೆಂಡಿಗೆ 0-100 ಕಿ.ಮೀ. ವೇಗ ಪಡೆಯಬಹುದಾಗಿದೆ.

ಸ್ಕೋಡಾ ಲಾರಾ ಕಾರಿನ ಗ್ರೌಂಡ್ ಕ್ಲಿಯರೆನ್ಸ್ 164 ಮಿ.ಮೀ. ಮತ್ತು ಒಟ್ಟು ತೂಕ 1,965 ಕೆಜಿ. ಕೆಲವು ಆವೃತ್ತಿಗಳ ತೂಕ 2,015 ಕೆ.ಜಿ.ವರೆಗಿದೆ. 15 ಇಂಚಿನ ಅಲಾಯ್ ವೀಲ್ ಸ್ಕೋಡಾ ಲಾರಾ ಕಾರಿನ ಅಂದ ಹೆಚ್ಚಿಸಿದೆ.

ಸುರಕ್ಷತೆ: ಈ ಕಾರಲ್ಲಿ ಎಬಿಎಸ್, ಇಬಿಡಿ(ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಎಂಬಿಎ(ಮೆಕಾನಿಕಲ್ ಬ್ರೇಕ್ ಅಸಿಸ್ಟ್), ಎಚ್‌ಬಿಎ(ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್, ಎಎಸ್ಆರ್(ಆ್ಯಂಟಿ ಸ್ಲಿಪ್ ರೆಗ್ಯುಲೇಷನ್) ಮತ್ತು ಟಿಸಿಎಸ್(ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್) ಇತ್ಯಾದಿ ಸುರಕ್ಷತೆಯ ಫೀಚರುಗಳಿವೆ. ನೂತನ ಲಾರಾ ಆರ್‌ಎಸ್ ಕಾರಲ್ಲಿ ಟೈರ್ ಪ್ರೆಷರ್ ಮೊನಿಟರಿಂಗ್ ಫೀಚರ್ ಕೂಡ ಇದೆ. ಮುಂಭಾಗದಲ್ಲಿ ಡ್ಯೂಯಲ್ ಏರ್ ಬ್ಯಾಗ್ ಇದೆ.

ಬೆಂಗಳೂರಿನಲ್ಲಿ ಸ್ಕೋಡಾ ಲಾರಾ ಎಕ್ಸ್ ಶೋರೂಂ ದರ
 ಆವೃತ್ತಿ  ಇಂಧನ  ಗೇರ್  ದರ
 ಆಕ್ಟಿವ್ 1.8 ಟಿಎಸ್ಐ  ಪೆಟ್ರೋಲ್  ಮ್ಯಾನುಯಲ್  13,08,200 ರುಪಾಯಿ
 ಆಂಬಿಷನ್ 1.8 ಟಿಎಸ್ಐ  ಡೀಸೆಲ್  ಮ್ಯಾನುಯಲ್  14,19,403 ರು.
 ಆಂಬಿಷನ್ 2.0 ಟಿಡಿಐ ಸಿಆರ್  ಡೀಸೆಲ್  ಮ್ಯಾನುಯಲ್  14,68,037 ರು.
 ಆಂಬಿಷನ್ 2.0 ಟಿಡಿಐ ಸಿಆರ್  ಡೀಸೆಲ್  ಆಟೋಮ್ಯಾಟಿಕ್  15,85,981 ರು.
 ಎಲೆಗೆನ್ಸ್ 2.0 ಟಿಡಿಐ ಸಿಆರ್  ಡೀಸೆಲ್  ಮ್ಯಾನುಯಲ್  16,27,070 ರು.
 ಎಲೆಗೆನ್ಸ್ 2.0 ಟಿಡಿಐ ಸಿಆರ್  ಡೀಸೆಲ್  ಆಟೋಮ್ಯಾಟಿಕ್  17,33,356 ರು.
 ಎಲ್ಆಂಡ್ ಕೆ 2.0 ಟಿಡಿಐ  ಡೀಸೆಲ್  ಆಟೋಮ್ಯಾಟಿಕ್  19,23,007 ರು.

English summary
Skoda Laura comes with new design features that hint at its sporty side. A strong shoulder line optically lifts the car, highlighting its broad shoulders. Here are given some features and specifications of Laura sedan. Read Skoda Laura Special review.
Story first published: Saturday, May 26, 2012, 15:23 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark