ಸ್ಕೋಡಾ ಭಾಗ್ಯರೇಖೆ ಬದಲಾಯಿಸಿತೇ 2014 ಯೆಟಿ?

By Nagaraja

ಚೆಕ್ ಗಣರಾಜ್ಯದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಸ್ಕೋಡಾ ಭಾರತಕ್ಕೆ ಹೊಸ 2014 ಯೆಟಿ ಮಾದರಿಯನ್ನು ಸದ್ಯದಲ್ಲೇ ಪರಿಚಯಿಸಲಿದೆ. ಹೌದು, 2014 ಸ್ಕೋಡಾ ಯೆಟಿ ಸೆಪ್ಟೆಂಬರ್ 10ರಂದು ಬಿಡುಗಡೆಯಾಗಲಿದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ 2014 ಸ್ಕೋಡಾ ಯೆಟಿ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ), ಹಿಂದಿನ ಮಾದರಿಗಿಂತಲೂ ಹೆಚ್ಚು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದುವೇ ಇತರ ಮಾದರಿಗಳಿಂದ ಸ್ಕೋಡಾವನ್ನು ಭಿನ್ನವಾಗಿಸಲಿದೆ. ಭಾರತದಲ್ಲಿ ಸ್ಕೋಡಾ ಇದುವರೆಗೆ ನಿರೀಕ್ಷಿಸಿದಷ್ಟು ಯಶ ಸಾಧಿಸಿಲ್ಲ. ಹಾಗಾಗಿ ಹೊಸ ಯೆಟಿ ದೇಶದಲ್ಲಿ ಸ್ಕೋಡಾ ಭಾಗ್ಯರೇಖೆಯನ್ನು ಬದಲಾಯಿಸಿತೇ ಎಂಬುದನ್ನು ಕಾದು ನೋಡಬೇಕಾಗಿದೆ.


ಹೊಸ ಯೆಟಿ ಪರಿಷ್ಕೃತ ಹೊರಮೈ ಹಾಗೂ ಒಳಮೈ ಭಾಗಗಳವನ್ನು ಪಡೆದುಕೊಳ್ಳಲಿದೆ. ಹಾಗಿದ್ದರೂ ತಾಂತ್ರಿಕವಾಗಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ. ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಕಲ್ಪಿಸಿರುವುದು ಹೊಸ ಯೆಟಿಯ ವಿಶಿಷ್ಟತೆಯಾಗಿರಲಿದೆ. ಪರಿಷ್ಕೃತ ಫ್ರಂಟ್ ಬಂಪರ್ ಮತ್ತು ಆಯತಾಕಾರದ ಫಾಗ್ ಲ್ಯಾಂಪ್ ಇರಲಿದೆ. ಇವೆಲ್ಲದರ ಜೊತೆಗೆ ಫ್ರಂಟ್ ಗ್ರಿಲ್ ಕ್ರೋಮ್ ಸ್ಪರ್ಶ ಪಡೆಯಲಿದೆ. ಅಂತೆಯೇ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೌಲಭ್ಯವಿರಲಿದೆ.

ಇನ್ನು ಕಾರಿನೊಳಗೆ ಪ್ರಯಾಣಿಕರ ಅನುಕೂಲತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದರಲ್ಲಿ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ ಜೊತೆಗೆ ಸ್ಟಾಂಡರ್ಡ್ ಏರ್ ಬ್ಯಾಗ್, ಫುಶ್ ಸ್ಟಾರ್ಟ್/ಸ್ಟಾಪ್, ರಿಯರ್ ಎಸಿ ವೆಂಟ್ಸ್ ಮತ್ತು ಕೀಲೆಸ್ ಎಂಟ್ರಿ ಸೌಲಭ್ಯವಿರಲಿದೆ.

2014 Skoda Yeti

ಅಂದ ಹಾಗೆ 2014 ಯೆಟಿ ಡೀಸೆಲ್ ಮಾದರಿಗಳಲ್ಲಿ ಮಾತ್ರ ಲಭ್ಯವಿರಲಿದೆ. ಇದರ 2.0 ಲೀಟರ್ ಮಿಲ್, 103.52 ಅಶ್ವಶಕ್ತಿ ಉತ್ಪಾದಿಸಲಿದೆ. ಇದರ ಮಗದೊಂದು ಅಡ್ವೆಂಚರ್ ವೆರಿಯಂಟ್ ಗರಿಷ್ಠ 138 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇವೆಲ್ಲದರ ನಡುವೆ ಸೆಪ್ಟೆಂಬರ್ 10ರಂದು ಭಾರತ ಪ್ರವೇಶ ಪಡೆಯುತ್ತಿರುವ 2014 ಸ್ಕೋಡಾ ಯೆಟಿ 15ರಿಂದ 19 ಲಕ್ಷ ರು.ಗಳ ದರಗಳ ರೇಂಜ್‌ನಲ್ಲಿ ಆಗಮನವಾಗಲಿದೆ.

More from DriveSpark

Article Published On: Friday, September 5, 2014, 11:08 [IST]
English summary
The Czech manufacturer has now confirmed to launch its refreshed vehicle on 10th September, 2014. They have recently revamped their entire model portfolio and now its the Yeti's turn.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+