2013 ಟಾಟಾ ನ್ಯಾನೋ ಬರಮಾಡಿಕೊಳ್ಳಲು ಸಿದ್ಧರಾಗಿರಿ
ಕಳೆಗುಂದಿರುವ ಮಾರಾಟವನ್ನು ಕುದುರಿಸಲು ಹೊಸ ನ್ಯಾನೋ ಕಾರಿನ ಆಗಮನವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಜಗತ್ತಿನ ಅತಿ ಅಗ್ಗದ ಕಾರು ಪರಿಚಯಿಸಿದ ಟಾಟಾ ಮೋಟಾರ್ಸ್, ಇದೀಗ ನ್ಯಾನೋ 2013 ವರ್ಷನ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಇದರಂತೆ ಕಾರಿನ ಎಕ್ಸ್‌ಕ್ಲೂಸಿವ್ ಚಿತ್ರಗಳು ಈಗಾಗಲೇ ಬಿಡುಗಡೆಗೊಂಡಿವೆ. ಇದು ಮಾರುಕಟ್ಟೆಯಲ್ಲಿ ಹೇಗೆ ತನ್ನ ಪ್ರಾಬಲ್ಯ ಬೀರಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.
ಹೊಸ ನ್ಯಾನೋ ಕಾರಿನಲ್ಲಿ ಎರಡು ಹೆಡ್‌ಲ್ಯಾಂಪ್ ನಡುವೆ ಕ್ರೋಮ್ ಸ್ಟ್ರಿಪ್ ಇದೆ. ಹಾಗಿದ್ದರೂ ಫಿನಿಶಿಂಗ್ ಟಚ್ ಐಷಾರಾಮಿ ಲುಕ್ ನೀಡುವಲ್ಲಿ ವಿಫಲವಾಗಿದೆ. ಹಿಂಭಾಗದಲ್ಲಿ ಪರಿಷ್ಕೃತ ಬಂಪರ್ ಮೇಲ್ಗಡೆಯು ಕ್ರೋಮ್ ಸ್ಟ್ರಿಪ್ ಇದೆ.
ಈ ಹಿಂದಿನ ನ್ಯಾನೋಗೆ ಹೋಲಿಸಿದರೆ ಹೊಸ ಆವೃತ್ತಿಯಲ್ಲಿ ಸ್ಟೋರೆಜ್ ಸ್ಪೇಸ್ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ. ವೀಲ್ ಕವರ್‌ಗಳಂತಹ ಹೆಚ್ಚುವರಿ ಫೀಚರ್‌ಗಳಿವೆ. ಇನ್ನು ಆಂತರಿಕ ಭಾಗಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.
ನಿಕಟ ಭವಿಷ್ಯದಲ್ಲಿ ಟಾಟಾ ನ್ಯಾನೋ ಡೀಸೆಲ್ ಹಾಗೂ ಸಿಎನ್‌ಜಿ ವರ್ಷನ್ ಆಗಮನವಾಗಲಿದೆ. ನ್ಯಾನೋ ಡೀಸೆಲ್ ಎಂಜಿನ್ 0.8 ಲೀಟರ್ ಕಾಮನ್ ರೈಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 40 ಪಿಎಸ್ ಪವರ್ ಉತ್ಪಾದಿಸಲಿದೆ.


Click it and Unblock the Notifications









