ಲಗ್ಷುರಿ ಸೆಗ್ಮೆಂಟ್; ಬಿಎಂಡಬ್ಲ್ಯು ಹಿಂದಿಕ್ಕಿತೇ ಆಡಿ?
ಮರ್ಸಿಡಿಸ್ ಬೆಂಝ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಹಿಂದಿಕ್ಕಿದ ಆಡಿ ದೇಶದ ಶ್ರೀಮಂತ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯತೆಗೆ ಕಾರಣವಾಗಿದೆ. ಮತ್ತೊಂದೆಡೆ ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಫೇವರಿಟ್ ಎನಿಸಿಕೊಂಡಿರುವ ಬಿಎಂಡಬ್ಲ್ಯು ತನ್ನ ಮಾರಾಟ ಅಂಕಿಅಂಶವನ್ನು ಇನ್ನಷ್ಟೇ ಬಿಡುಗಡೆಗೊಳಿಸಬೇಕಾಗಿದೆ.
ತನ್ನ ಫೇಸ್‌ಬುಕ್ ಫ್ಯಾನ್ ಪೇಜ್‌ನಲ್ಲಿ ಈ ಬಗ್ಗೆ ಬರೆದಿಕೊಂಡಿರುವ ಆಡಿ ಇಂಡಿಯಾ ಅಭಿಮಾನಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದ್ದು, ಹೊಸ ವರ್ಷದ ಶುಭ ಹಾರೈಸಿದೆ.
2012ನೇ ಸಾಲಿನಲ್ಲಿ 7,138 ಕಾರುಗಳನ್ನು ಮಾರಾಟ ಮಾಡಿರುವುದಾಗಿ ಮರ್ಸಿಡಿಸ್ ಬೆಂಝ್ ಹೇಳಿಕೊಂಡಿತ್ತು. ಮತ್ತೊಂದೆಡೆ ಜನವರಿಯಿಂದ ಅಕ್ಟೋಬರ್ ಅವಧಿಯಲ್ಲಿ ಬಿಎಂಡಬ್ಲ್ಯು 7389 ಕಾರುಗಳನ್ನು ಮಾರಾಟ ಮಾಡಿವೆ. ಆದರೆ ಕೇವಲ ಒಂಬತ್ತು ತಿಂಗಳುಗಳಾಗುವ ವೇಳೆಯಲ್ಲಿ ಮಾರಾಟದಲ್ಲಿ ಆಡಿ 122 ಯುನಿಟ್‌ಗಳಷ್ಟು ಮಾತ್ರ ಹಿಂದಿತ್ತು. ಆಡಿ ಕೂಡಾ ಈ ಸಾಲಿನಲ್ಲಿ ಮಾರಾಟವಾದ ಒಟ್ಟು ಕಾರುಗಳ ಸಂಖ್ಯೆಯನ್ನು ಇನ್ನಷ್ಟೇ ಬಿಡುಗಡೆಗೊಳಿಸಬೇಕಾಗಿದೆ.
ಆಡಿ ಮಾರಾಟವು ಗಣನೀಯ ವರ್ಧಿಸಿರುತ್ತವಂತೆಯೇ ದೇಶದ ಲಗ್ಷುರಿ ಸೆಗ್ಮೆಂಟ್‌ನಲ್ಲಿ ಮೂರು ಜರ್ಮನಿಯ ಕಾರು ತಯಾರಕ ಕಂಪನಿಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ಮರ್ಸಿಡಿಸ್ ಬೆಂಝ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರೆ ಆಡಿ ಹಾಗೂ ಬಿಎಂಡಬ್ಲ್ಯು ನಡುವೆ ಪ್ರಥಮ ಸ್ಥಾನಕ್ಕಾಗಿ ನಿಕಟ ಸ್ಪರ್ಧೆ ಏರ್ಪಟ್ಟಿತ್ತು.


Click it and Unblock the Notifications
