ಆಡಿ ವೈರ್‌ಲೆಸ್ ಮೌಸ್ ಖರೀದಿಸಿ ಕೇವಲ ರು. 5,599
ಜರ್ಮನಿಯ ಆಟೋಮೊಬೈಲ್ ದೈತ್ಯ ಕಂಪನಿ ಆಡಿ, ಕೇವಲ ವಾಹನ ಜಗತ್ತಿನಲ್ಲಿ ಮಾತ್ರವಲ್ಲ ತನ್ನ ಪ್ರಭಾವ ಬೀರಿರುವುದು. ಇದೀಗ ನೂತನ ವೈರ್‌ಲೆಸ್ ಮೌಸ್ ತಯಾರಿಸುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯ ಮೆರೆದಿದೆ.
ವಿಶೇಷವಾಗಿ ಭಾರತದ ಮಾರುಕಟ್ಟೆ ದೃಷ್ಟಿಯಲ್ಲಿಟ್ಟುಕೊಂಡು ಆಡಿ ನೂತನ ವೈರ್‌ಲೆಸ್ ಕಂಪ್ಯೂಟರ್ ಮೌಸ್ ಪರಿಚಯಿಸಿದೆ. ಇಲ್ಲಿ ಆಸಕ್ತಿದಾಯಕ ಅಂಶವೆಂದರೆ ಈ ವೈರ್‌ಲೆಸ್ ಮೌಸ್, ಐಷಾರಾಮಿ ಆಡಿ ಕಾರಿನ ವಿನ್ಯಾಸ ಪಡೆದುಕೊಂಡಿದೆ.
ಆಡಿ ವೈರ್‌ಲೆಸ್ ಮೌಸ್ ದರ 5,599 ರು.ಗಳಾಗಿದ್ದು, ವಿಷಯಾಸಕ್ತಿ, ತಂತ್ರಜ್ಞಾನ ಮತ್ತು ಪ್ರಗತಿಶೀಲತೆಯ ಸಂಕೇತ ನೀಡುತ್ತದೆ. ಇದೀಗ ಆಡಿ ಅಭಿಮಾನಿಗಳು ತಮ್ಮ ಆಫೀಸುಗಳಿಗೆ ಆಡಿ ಲಗ್ಷುರಿ ಕಾರಿನೊಂದಿಗೆ ತೆರಳುವುದರೊಂದಿಗೆ ಕಚೇರಿಗಳಲ್ಲೂ ಆಡಿ ಉತ್ಪನ್ನವನ್ನೇ ಖಾತ್ರಿಪಡಿಸಬಹುದಾಗಿದೆ. ಇದನ್ನು ನೀವು ಮನೆ, ಕಚೇರಿಗಳಲ್ಲಿ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಆಳವಡಿಸಬಹುದಾಗಿದೆ.
ಪ್ರಮುಖ ವೈಶಿಷ್ಟ್ಯ:
- 2.4 GHz ತಂತ್ರಜ್ಞಾನ,
- ಸ್ಕ್ರಾಲ್ ವೀಲ್,
- ಹೈ ರೆಸೊಲ್ಯೂಷನ್ 2000ಡಿಪಿಐ ಸೆನ್ಸಾರ್,
- ಕನಿಷ್ಠ ರೇಂಜ್ 6 ಮೀಟರ್
ಆಡಿ ಇಂಡಿಯಾ ದೇಶದಲ್ಲಿ ಕಾರುಗಳ ಜತೆ ಹೈ ಎಂಡ್ ಕ್ಲಾಸಿಕ್ ಕ್ರೋನೋಗ್ರಾಫ್ ವ್ಯಾಚ್, ಮೆಸೆಂಜರ್ ಬ್ಯಾಗ್, ಸ್ಪೋರ್ಟ್ಸ್ ಬ್ಯಾಗ್, ಟ್ರಾವೆಲ್ ಬ್ಯಾಗ್, ಬ್ಯಾಕ್‌ಪ್ಯಾಕ್, ಸ್ಟೈಲಿಷ್ ಗ್ರಾಮೆಂಟ್ ಬ್ಯಾಗ್ ಹಾಗೂ ಆಡಿ ಆರ್8 ಯುಎಸ್‌ಬಿ ಮೆಮರಿ ಸ್ಟಿಕ್ ಪ್ರದಾನ ಮಾಡುತ್ತಿದೆ.


Click it and Unblock the Notifications









