ಬಿಎಂಡಬ್ಲ್ಯು ಬೆನ್ನಲ್ಲೇ ಆಡಿ ಬೆಲೆಯೇರಿಕೆ ಬಿಸಿ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಗಳು ಒಂದರ ಬಳಿಕ ಒಂದರಂತೆ ಬೆಲೆಯೇರಿಕೆ ಬಿಸಿ ಮುಟ್ಟಿಸಿದೆ. ಹೊಸ ವರ್ಷ ಆಗಮನವಾಗುತ್ತಿರುವಂತೆಯೇ ವಾಹನ ತಯಾರಕ ಸಂಸ್ಥೆಗಳು ದರ ಏರಿಕೆ ನೀತಿ ಅನುಸರಿಸುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇದಕ್ಕೆ ಪೂರಕವೆಂಬಂತೆ ಬಿಎಂಡಬ್ಲ್ಯು ಬೆನ್ನಲ್ಲೇ ದೇಶದ ಜನಪ್ರಿಯ ಲಗ್ಷುರಿ ಕಂಪನಿಯಾಗಿರುವ ಆಡಿ ಸಹ ಬೆಲೆಯೇರಿಕೆ ಘೋಷಿಸಿದೆ. ತನ್ನೆಲ್ಲ ರೇಂಜ್ ಕಾರುಗಳಿಗೂ ಶೇಕಡಾ ಮೂರರಿಂದ ಐದರ ವರೆಗೆ ಬೆಲೆಯೇರಿಕೆಗೊಳಿಸಿರುವ ಆಡಿಯ ಹೊಸ ದರ ನೀತಿಯ 2014 ಜನವರಿಯಿಂದಲೇ ಜಾರಿಗೆ ಬರಲಿದೆ.

Audi India

ಒಟ್ಟಾರೆಯಾಗಿ 2013ನೇ ಮಾರುಕಟ್ಟೆ ಪರಿಸ್ಥಿತಿ ಸವಾಲಿನಿಂದ ಕೂಡಿತ್ತು. ಇದೀಗ ದರ ಏರಿಕೆಗೊಳಿಸುವುದು ಅನಿವಾರ್ಯವಾಗಿದೆ ಎಂದು ಆಡಿ ಪ್ರತಿನಿಧಿಗಳು ತಿಳಿಸಿದ್ದಾರೆ. ಹಾಗಿದ್ದರೂ ಗ್ರಾಹಕರಿಗೆ ಕಾರು ಸಾಲದ ವ್ಯವಸ್ಥೆ ಒದಗಿಸುಲಾಗುತ್ತದೆ ಎಂದು ತಿಳಿಸಿದೆ.

ದೇಶದಲ್ಲಿ ಆಡಿ ಕಾರುಗಳು 27.93 ಲಕ್ಷ ರು.ಗಳಿಂದ ಆರಂಭವಾಗಿ 2.14 ಕೋಟಿ ರು.ಗಳ ವರೆಗೆ ಲಭ್ಯವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2013 ಅಕ್ಟೋಬರ್ ತಿಂಗಳಲ್ಲಿ 1002 ಯುನಿಟ್ ಮಾರಾಟ ದಾಖಲಿಸಿರುವ ಆಡಿ ಶೇಕಡಾ ಭರ್ಜರಿ ಪ್ರಗತಿ ಸಾಧಿಸಿತ್ತು. ಕಳೆದ ಸಾಲಿನಲ್ಲಿ ಇದೇ ಸಂದರ್ಭದಲ್ಲಿ 850 ಯುನಿಟ್ ಮಾತ್ರ ಸೇಲಾಗಿತ್ತು.

ಒಟ್ಟಾರೆಯಾಗಿ 2013 ಜನವರಿಯಿಂದ ಅಕ್ಟೋಬರ್ ವರೆಗೆ 8393 ಯುನಿಟ್ ಮಾರಾಟ ಕಂಡುಕೊಂಡಿರುವ ಆಡಿ ಶೇಕಡಾ 15.4ರಷ್ಟು ವೃದ್ಧಿ ದಾಖಲಿಸಿತ್ತು.

Article Published On: Friday, November 29, 2013, 13:59 [IST]
English summary
Audi India has announced it will hike prices across its product lineup starting from January 2014. The price will range from three to five percent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+