ಆಡಿ ಕ್ಯೂ ಕ್ರಾಸೋವರ್ ಕಾನ್ಸೆಪ್ಟ್ ಟೀಸರ್ ರಿಲೀಸ್
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಬಹುನಿರೀಕ್ಷಿತ ಕ್ಯೂ1 ಕ್ರಾಸೋವರ್ ಕಾರಿನ ಉತ್ಪಾದನೆ 2016ರಲ್ಲಿ ಆರಂಭಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಈ ಸಂದರ್ಭದಲ್ಲಿ ಆಡಿ ಕ್ಯೂ1 ಕ್ರಾಸೋವರ್ ಕಾನ್ಸೆಪ್ಟ್ ಕಾರಿನ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಆಡಿ ಕ್ಯೂ1 ನಮ್ಮ ಎಸ್‌ಯುವಿ ಯೋಜನೆಯ ಭಾಗವಾಗಿದೆ. ಈ ನೂತನ ಕಾನ್ಸೆಪ್ಟ್ ಕಂಪನಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಡಿ ಕ್ಯೂ ಎಸ್‌ಯುವಿ ಫ್ಯಾಮಿಲಿಯ ಆರನೇ ಅವತರಣಿಕೆಯಾಗಿರಲಿದೆ ಕ್ಯೂ1 ಕ್ರಾಸೋವರ್. ಇದು ಫೋಕ್ಸ್‌ವ್ಯಾಗನ್ ಎಂಕ್ಯೂಬಿ ಮೊಡುಲ್ಯರ್ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ. ಅಂದರೆ ಆಡಿ ಎ1 ಜತೆಗೂ ಫ್ಲ್ಯಾಟ್‌ಫಾರ್ಮ್ ಹಂಚಿಕೊಳ್ಳಲಿದೆ.
ಸದ್ಯ ಕ್ಯೂ ಸಿರೀಸ್‌ನಲ್ಲಿ ಆಡಿ ಕ್ಯೂ3, ಆರ್‌ಎಸ್ ಕ್ಯೂ3, ಕ್ಯೂ5, ಎಸ್‌ಕ್ಯೂ5 ಮತ್ತು ಕ್ಯೂ7 ಮಾರುಕಟ್ಟೆಯಲ್ಲಿದೆ. ಮುಂಬರುವ ಬಿ ಸೆಗ್ಮೆಂಟ್ ಕ್ರಾಸೋವರ್ ಕಾರು 1.4 ಟಿಎಫ್‌ಎಸ್‌ಐ ಪೆಟ್ರೋಲ್, 1.4 ಲೀಟರ್ ಟಿಡಿಐ 3 ಸಿಲಿಂಡರ್ ಡೀಸೆಲ್ ಮತ್ತು 2.0 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆಗಳಿವೆ. ಈ ಎಲ್ಲ ಮೂರು ಎಂಜಿನ್‌ಗಳು ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.



Click it and Unblock the Notifications