2016ರ ವೇಳೆಗೆ ಬರಲಿದೆ ಆಡಿ ಸೂಪರ್ ಕಾರು
ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಆಡಿ, ಅತಿ ನೂತನ ಸೂಪರ್ ಕಾರೊಂದನ್ನು ಅಭಿವೃದ್ಧಿಪಡಿಸುತ್ತಿದ್ದು, 2016ರ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ. ಆರ್8 ಸ್ಪೋರ್ಟ್ಸ್ ಕಾರು ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಈ ಅತಿ ನೂತನ ಕಾರು 'ಆರ್20' ಎಂದು ಹೆಸರಿಸಲ್ಪಡಲಿದೆ.
ಹಲವಾರು ತಾಂತ್ರಿಕತೆಗಳನ್ನು ಆಳವಡಿಸಲಿರುವುದರಿಂದ ಈ ಬಹುನಿರೀಕ್ಷಿತ ಸೂಪರ್ ಕಾರು 2016ರ ವೇಳೆಗೆ ಅನಾವರಣಗೊಳ್ಳುವ ಸಾಧ್ಯತೆಯಿದೆ. ಇ-ಕ್ವಾರ್ಟ್ರೊ ಸಹಿತ ಅತ್ಯಾಧುನಿಕ ತಂತ್ರಜ್ಞಾನವನ್ನು ಆಡಿ20 ಕಾರಲ್ಲಿ ಬಳಕೆ ಮಾಡಲಾಗುವುದು.
ಈ ಮೂಲಕ ಸ್ಪೀಡ್, ತಂತ್ರಜ್ಞಾನ, ನಿರ್ವಹಣೆ ಹಾಗೂ ವಿನ್ಯಾಸದಲ್ಲಿ ಆಡಿ ನೂತನ ಮೈಲುಗಲ್ಲು ಸೃಷ್ಟಿಸಲಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಟ್ವಿನ್ ಟರ್ಬೊ ಚಾರ್ಜ್ಡ್ ವಿ6 ಡೀಸೆಲ್ ಎಂಜಿನ್ ಸೇರಿದಂತೆ ಎರಡು ಎಲೆಕ್ಟ್ರಿಕ್ ಮೋಟಾರ್ ಕೂಡಾ ಹೊಂದಿರಲಿದೆ. ಇದರಂತೆ 1000 ಎನ್‌ಎಂ ಜತೆ ಗರಿಷ್ಠ 700 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಪಡೆಯಲಿದೆ.
ಇವೆಲ್ಲದರ ಬೆಂಬಲದೊಂದಿಗೆ ಫೆರಾರಿ, ಲಂಬೊರ್ಗಿನಿ, ಪೋರ್ಶೆ ಹಾಗೂ ಕೊಯ್ನಿಂಗ್‌ಸೆಗ್ ಅಗೆರಾ ಕಾರುಗಳ ಸಾಲಿನಲ್ಲಿ ಆಡಿ ಕಾಣಿಸಿಕೊಳ್ಳಲಿದೆ. ಆರಂಭದಲ್ಲಿ 100ರಿಂದ 250 ಯುನಿಟ್ ಕಾರುಗಳ ನಿರ್ಮಾಣವಾಗುವ ಸಾಧ್ಯತೆಯಿದೆ.

ಆಡಿ R20 ಸೂಪರ್ ಕಾರು
Le Mans winning LMP1 ರೇಸ್ ಕಾರು ತಲಹದಿಯಲ್ಲಿ ಆಡಿ ಆರ್20 ಸೂಪರ್ ಕಾರು ನಿರ್ಮಾಣವಾಗಲಿದೆ.

ಆಡಿ R20 ಸೂಪರ್ ಕಾರು

ಆಡಿ R20 ಸೂಪರ್ ಕಾರು

ಆಡಿ R20 ಸೂಪರ್ ಕಾರು






Click it and Unblock the Notifications








