ಬಜಾಜ್ ನ್ಯೂ ಇಯರ್ ಗಿಫ್ಟ್ ಇದೆನಾ?
ದೇಶದ ವಾಣಿಜ್ಯ ಸೆಗ್ಮೆಂಟ್‌ನಲ್ಲಿ ಆಟೋರಿಕ್ಷಾಗಳಿಗೆ ಪ್ರಮುಖ ಬದಲಾವಣೆ ವ್ಯವಸ್ಥೆ ಎಂದೇ ಪರಿಗಣಿಸಲಾಗುತ್ತಿರುವ ಬಜಾಜ್ ಆರ್‌ಇ60 ಮತ್ತೊಮ್ಮೆ ಟೆಸ್ಟಿಂಗ್ ವೇಳೆ ರೆಡ್ ಹ್ಯಾಂಡ್ ಆಗಿ ಪತ್ತೆಹಚ್ಚಲಾಗಿದೆ. ಈ ಮೂಲಕ ಹೊಸ ವರ್ಷಕ್ಕೆ ಉಡುಗೊರೆ ನೀಡಲು ಬಜಾಜ್ ಸಿದ್ಧವಾಗುತ್ತಿದೆ.
ದೇಶದ ಮಾರುಕಟ್ಟೆಯಲ್ಲಿ ಬಜಾಜ್ ಆರ್ಇ60 ಎಷ್ಟು ಯಶ ಸಾಧಿಸಲಿದೆ ಎಂಬುದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಉತ್ತಮ ನಿರ್ವಹಣೆ ಜತೆ ಗರಿಷ್ಠ ಇಂಧನ ಕ್ಷಮತೆ ಬಜಾಜ್ ಆರ್‌ಇ60 ವಿಶೇಷತೆಯಾಗಿದೆ.
ಅಂದ ಹಾಗೆ ಬಜಾಜ್ ಆರ್60 200ಸಿಸಿ ಡಿಟಿಎಸ್-ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ನೈಜ ಪಲ್ಸರ್ 200 ಮೋಟಾರ್‌ಸೈಕಲ್‌ಗೆ ಸಮಾನವಾಗಿದೆ. ಇದು 20 ಬಿಎಚ್‌ಪಿ ಉತ್ಪಾದಿಸಲಿದ್ದು ಪ್ರತಿ ಗಂಟೆಗೆ 70 ಕೀ.ಮೀ ಗರಿಷ್ಠ ವೇಗವನ್ನು ನೀಡಲಿದೆ.
ಅದೇ ರೀತಿ ಪ್ರತಿ ಲೀಟರ್‌ಗೆ 35 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಮಿನಿ ಕಾರು ಸೆಂಟ್ರಲ್ ಸ್ಪೀಡೋಮೀಟರ್ ಕ್ಲಸ್ಟರ್, ಡ್ಯಾಶ್‌ಬೋರ್ಡ್ ಮೌಂಟೆಡ್ ಶಿಫ್ಟರ್, ಫೋಲ್ಡಿಂಗ್ ಫ್ರಂಟ್ ವಿಂಡೋ ಹಾಗೂ 44 ಲೀಟರ್ ಬೂಟ್ ಸ್ಪೇಸ್‌ಗಳಂತಹ ಸೌಲಭ್ಯಗಳನ್ನು ಹೊಂದಿದೆ.
ಸಂಚಾರ ದಟ್ಟಣೆಯ ನಗರ ಪ್ರದೇಶಗಳಲ್ಲಿ ಟ್ರಾಫಿಕ್ ನಿಭಾಯಿಸಲು ಹಾಗೂ ಸಣ್ಣ ಪಾರ್ಕಿಂಗ್ ಜಾಗ ಸಾಕಾಗುವುದರಿಂದ ಬಜಾಜ್ ಆರ್‌ಇ60 ಜನಮೆಚ್ಚುಗೆಗೆ ಪಾತ್ರವಾಗಲಿದೆ. ದೇಶದ ಅತಿ ಅಗ್ಗದ ನ್ಯಾನೋ ಕಾರುಗಳಿಗೂ ಇದರಿಂದ ಪೈಪೋಟಿ ನಿರೀಕ್ಷಿಸಬಹುದಾಗಿದೆ.
ಅಂದ ಹಾಗೆ ಬಜಾಜ್ ಆರ್‌ಇ60 ಆಟೋಗಳಿಗಿಂತ ಹೇಗೆ ಭಿನ್ನ? ಇಲ್ಲಿ ಕ್ಲಿಕ್ಕಿಸಿರಿ...

ಬಜಾಜ್ ಆರ್‌ಇ60
ಬಜಾಜ್ ಆರ್‌ಇ 60 ಆಗಮನದೊಂದಿಗೆ ದೇಶದಲ್ಲಿ ಸಾರಿಗೆ ಸಂಚಾರಕ್ಕೆ ಪರಿಹಾರ ದೊರಕುವ ನಿರೀಕ್ಷೆಯಿದ್ದು, ಕಳೆದ ಕೆಲವು ದಶಕಗಳಿಂದಲೂ ಚಾಲ್ತಿಯಲ್ಲಿರುವ ಆಟೋರಿಕ್ಷಾಗಳಿಗೆ ಬದಲಿ ವ್ಯವಸ್ಥೆಯಾಗಲಿದೆ

ಬಜಾಜ್ ಆರ್‌ಇ60
ಆಟೋಗಳಿಗಿಂತ ಹೇಗೆ ಭಿನ್ನ?

ಬಜಾಜ್ ಆರ್‌ಇ60
ಸೈಡ್ ವ್ಯೂ

ಬಜಾಜ್ ಆರ್‌ಇ60
ಆಟೋಗಳಿಗಿಂತ ಹೇಗೆ ಭಿನ್ನ?

ಬಜಾಜ್ ಆರ್‌ಇ60
ನಾಲ್ಕು ಚಕ್ರದ ಬಜಾಜ್ ಆರ್‌ಇ60 ಕ್ವಾಡ್ರಾಸೈಕಲ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ.

ಬಜಾಜ್ ಆರ್‌ಇ60
ಇಂಟಿರಿಯರ್ ವ್ಯೂ

ಬಜಾಜ್ ಆರ್‌ಇ60
ಬಜಾಜ್‌ನ ಈ ಮಿನಿ ಕಾರು ವಿಶ್ವದ ಅತಿ ಅಗ್ಗದ ಟಾಟಾ ನ್ಯಾನೋಗೂ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ.

ಬಜಾಜ್ ಆರ್‌ಇ60
ಫ್ರಂಟ್ ವ್ಯೂ
image source: indianautosblog


Click it and Unblock the Notifications








