ರಿಕ್ಷಾಗಳಿಗೆ ಬದಲಿ ವ್ಯವಸ್ಥೆಯಾದಿತೇ ಬಜಾಜ್ ಆರ್‌ಇ60?

Written By:

ಕಾನೂನು ತೊಡಕಿನಿಂದಾಗಿ ಬಜಾಜ್ ಆರ್ ಇ60 ಹಗುರ ಭಾರ ವಾಹನದ (ಎಲ್‌ಸಿವಿ) ಬಿಡುಗಡೆ ವಿಳಂಬವಾಗುತ್ತಿದೆ. ಈ ನಡುವೆ ಆರ್ ಇ60 ರಫ್ತು ಕಾರ್ಯವನ್ನು ಸದ್ಯದಲ್ಲೇ ಆರಂಭಿಸುವುದಾಗಿ ಬಜಾಜ್ ಆಟೋ ತಿಳಿಸಿದೆ.

ಗಂಟೆಗೆ 60 ಕೀ.ಮೀ. ವೇಗದಲ್ಲಿ ಚಲಿಸಲು ಸಾಮರ್ಥ್ಯ ಹೊಂದಿರದ ಬಜಾಜ್ ಆರ್ ಇ60 ಕಾರು ವಿಭಾಗದಲ್ಲಿ ಗುರುತಿಸಿಕೊಳ್ಳಲು ವಿಫಲವಾಗಿದೆ. ಇದರಿಂದಾಗಿ ವೈಯಕ್ತಿಕ ಮಾರಾಟದಿಂದ ವಂಚಿತವಾಗಿದೆ. ಹಾಗಿದ್ದರೂ ವಾಣಿಜ್ಯ ವಾಹನ ವಿಭಾಗದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಕಾಯ್ದುಕೊಳ್ಳುವ ಸಾಧ್ಯತೆಯಿದೆ.

To Follow DriveSpark On Facebook, Click The Like Button
08. ಆಟೋಗೆ ಬದಲಿ ವ್ಯವಸ್ಥೆ

08. ಆಟೋಗೆ ಬದಲಿ ವ್ಯವಸ್ಥೆ

ಪರಿಪೂರ್ಣ ಸಿಟಿ ವಾಹನ ಎಂದೆನಿಸಿಕೊಳ್ಳಲಿರುವ ಬಜಾಜ್ ಆರ್‌ಇ60, ಪ್ರಮುಖವಾಗಿಯೂ ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ. ಇದು ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ತ್ರಿಚಕ್ರ ವಾಹನಗಳಿಗೆ ಬದಲಿಯಾಗುವ ಸಾಧ್ಯತೆಯಿದೆ.

07. ಎಂಜಿನ್

07. ಎಂಜಿನ್

216 ಸಿಸಿ ಲಿಕ್ವಿಡ್ ಕೂಲ್ಡ್ 4 ವಾಲ್ವೆ ಫ್ಯೂಯಲ್ ಇಂಜೆಕ್ಟಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಸಂಸ್ಥೆಯ ನೂತನ ಟ್ರಿಪಲ್ ಸ್ಪಾರ್ಕ್ ತಂತ್ರಗಾರಿಕೆಯ ಅಡಿಯಲ್ಲಿ ಕೆಲಸ ಮಾಡಲಿದೆ. ಪ್ರಸ್ತುತ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ.

06. ವೇಗ

06. ವೇಗ

ಸಂಸ್ಥೆಯ ಪ್ರಕಾರ ಬಜಾಜ್ ಆರ್‌ಇ60 ಪ್ರತಿ ಗಂಟೆಗೆ 70 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

05. ಇಂಧನ ವಿಧ

05. ಇಂಧನ ವಿಧ

ಒಟ್ಟು ಮೂರು ಎಂಜಿನ್ ವಿಧಗಳಲ್ಲಿ ಬಜಾಜ್ ಆರ್‌ಇ60 ಲಭ್ಯವಿರಲಿದೆ. ಅವುಗಳೆಂದರೆ ಸಾಮಾನ್ಯ ಪೆಟ್ರೋಲ್, ಎಲ್‌ಪಿಜಿ ಮತ್ತು ಸಿಎನ್‌ಜಿ ವರ್ಷನ್‌ಗಳಿರಲಿದೆ.

04. ಮೈಲೇಜ್

04. ಮೈಲೇಜ್

ಬಜಾಜ್ ಆರ್‌ಇ60 ಪ್ರತಿ ಲೀಟರ್‌ಗೆ 37 ಕೀ.ಮೀ.ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇನ್ನು ಪ್ರತಿ ಕೀ.ಮೀ. ಕೇವಲ 60 ಗ್ರಾಂಗಳಷ್ಟು ಕಾರ್ಬನ್ ಡೈಓಕ್ಸೈಡ್ ಹೊರಸೂಸಲಿದೆ.

03. ಬೆಲೆ

03. ಬೆಲೆ

ಬಜಾಜ್ ಆರ್ ಇ60 ಅಂದಾಜು 1.5 ಲಕ್ಷ ರು.ಗಳಿಂದ 2.5 ಲಕ್ಷ ರು.ಗಳ ವರೆಗಿನ ದರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

02. ಸುರಕ್ಷಿತ

02. ಸುರಕ್ಷಿತ

ತ್ರಿಚಕ್ರ ವಾಹನಗಳಿಗೆ ಹೋಲಿಸಿದಾಗ ಬಜಾಜ್ ಆರ್‌ಇ60 ಹೆಚ್ಚು ಸುರಕ್ಷಿತವಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.

01. ಏಕಮಾತ್ರ ವಾಹನ

01. ಏಕಮಾತ್ರ ವಾಹನ

ಪ್ರಸ್ತುತ ಕ್ವಾಡ್ರಾಸೈಕಲ್ ವಿಭಾಗದಲ್ಲಿ ಗುರುತಿಸಿಕೊಂಡಿರುವ ಏಕಮಾತ್ರ ವಾಹನ ಇದಾಗಿದೆ. ದೇಶದ ಇತರ ವಾಹನ ತಯಾರಕ ಸಂಸ್ಥೆಗಳು ಇನ್ನಷ್ಟೇ ಈ ವಿಭಾಗಕ್ಕೆ ಪ್ರವೇಶ ಪಡೆಯಬೇಕಾಗಿದೆ.

English summary
Indian manufacturer of the popular autorickshaw is planning on introducing their RE60 quadricycle. Bajaj Auto has showcased this vehicle at 2014 Auto Expo held in New Delhi.
Story first published: Thursday, April 23, 2015, 17:37 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark