ಕಾಯುವಿಕೆ ಅಂತ್ಯ; ಸೆ.25ರಂದು ಬಜಾಜ್ ಆರ್‌ಇ60 ಬಿಡುಗಡೆ
ವಾಹನ ಮಾರುಕಟ್ಟೆಯ ಮಹತ್ತರ ಬೆಳವಣಿಗೆಯೊಂದರಲ್ಲಿ ಸಾಂಪ್ರಾದಾಯಿಕ ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆ ಪರಿಗಣಿಸಲಾಗುವ ಬಜಾಜ್ ಆರ್‌ಇ60 ಇದೇ ಬರುವ ಸೆಪ್ಟೆಂಬರ್ 25ರಂದು ಭರ್ಜರಿ ಬಿಡುಗಡೆ ಕಾಣಲಿದೆ. ಈ ಮೂಲಕ ತನಗೆ ಎದುರಾಗಿದ್ದ ಎಲ್ಲ ರೀತಿಯ ಕಾನೂನು ತೊಡಕುಗಳನ್ನು ನೀಗಿಸಿಕೊಂಡಿದೆ.
ಮುಖ್ಯಾಂಶಗಳು:
- 216 ಸಿಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಪೆಟ್ರೋಲ್ ಎಂಜಿನ್
- 17ರಿಂದ 20 ಅಶ್ವಶಕ್ತಿ ಸಾಧ್ಯತೆ
- ಪೆಟ್ರೋಲ್, ಸಿಎನ್‌ಜಿ ಹಾಗೂ ಎಲ್‌ಪಿಜಿ ಮಾದರಿಗಳಲ್ಲಿ ಬಿಡುಗಡೆ
- ಮೈಲೇಜ್ 37
- ಪ್ರತಿ ಕೀ.ಮೀ.ಗೆ 60 ಗ್ರಾಂ ಕಾರ್ಬನ್ ಡೈಓಕ್ಸೈಡ್ (CO2) ವಾತಾವರಣಕ್ಕೆ ಬಿಡುಗಡೆ
- ಅಂದಾಜು ಬೆಲೆ: 2 ಲಕ್ಷ ರು.

ಆಟೋ ರಿಕ್ಷಾಗಳಿಗೆ ಹೋಲಿಸಿದಾಗ ನಾಲ್ಕು ಚಕ್ರಗಳ ಬಜಾಜ್ ಆರ್‌ಇ60 ಹೆಚ್ಚು ಸುರಕ್ಷಿತವೆನಿಸಿಕೊಳ್ಳಲಿದೆ. ಇದಕ್ಕಾಗಿ ಬಜಾಜ್ ಆಟೋ ಬರೋಬ್ಬರಿ 550 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿತ್ತು. ಅಲ್ಲದೆ ವಾರ್ಷಿಕವಾಗಿ 60,000 ಯುನಿಟ್ ಗಳಷ್ಟು ನಿರ್ಮಿಸುವ ಸಾಮರ್ಥ್ಯ ಹೊಂದಿರಲಿದೆ.
ಬಜಾಜ್ ಆರ್ ಇ60 ವಿಶಿಷ್ಟತೆಗಳೇನು ?
ರಿಕ್ಷಾಗಳಿಗೆ ಬದಲಿಯಾದಿತೇ ಬಜಾಜ್ ಆರ್ ಇ60 ?
ಬಜಾಜ್ ಆರ್ ಇ60 ಇತರ ಆಟೋಗಿಂತ ಹೇಗೆ ಭಿನ್ನ ?


Click it and Unblock the Notifications








