ಸದ್ಯದಲ್ಲೇ ಬಜಾಜ್ ಆರ್‌ಇ60 ಉತ್ಪಾದನಾ ವರ್ಷನ್ ಆಗಮನ
ಸದ್ಯ ಬಂದಿರುವ ಮಾಹಿತಿಯ ಪ್ರಕಾರ 2013 ಅಕ್ಟೋಬರ್‌ನಿಂದ ಹಿಡಿದು 2014 ಮಾರ್ಚ್ ತಿಂಗಳೊಳಗೆ ಯಾವ ಕ್ಷಣದಲ್ಲಾದರೂ ಬಜಾಜ್ ಆರ್‌ಇ60 ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.
ಅಂದ ಹಾಗೆ ಬಜಾಜ್ ಆರ್‌ಇ60 ಮೊದಲ ಬಾರಿಗೆ 2012 ಜನವರಿಯಲ್ಲಿ ಅನಾವರಣಗೊಳಿಸಲಾಗಿತ್ತು. ಅಲ್ಲದೆ ಈಗಿರುವ ವಾಹನ ವಿಭಾಗದ ಹೊರತಾಗಿ ನೂತನ ಕ್ವಾಡ್ರಾಸೈಕಲ್ ಸೃಷ್ಟಿ ಮಾಡಲಾಗಿತ್ತು. ಇದೀಗ ಹೊಸ ವಿಭಾಗಕ್ಕೆ ಸರಕಾರದ ಮಾನ್ಯತೆ ದೊರಕಿರುವ ಹಿನ್ನಲೆಯಲ್ಲಿ ಇನ್ನಷ್ಟು ಕಂಪನಿಗಳು ಕ್ವಾಡ್ರಾಸೈಕಲ್ ವಾಹನಗಳನ್ನು ಉತ್ಪಾದಿಸುವ ಸಾಧ್ಯತೆಗಳಿವೆ.
ಕುತೂಹಲಕಾರಿಯೆಂಬಂತೆ ಬಜಾಜ್ ಕ್ವಾಡ್ರಾಸೈಕಲ್ ವಿಭಾಗಕ್ಕೆ ಟಾಟಾ ನ್ಯಾನೋ ವಿರೋಧ ವ್ಯಕ್ತಪಡಿಸಿತ್ತು. ಸುರಕ್ಷತಾ ಕಾರಣಗಳಿಂದಾಗಿ ಇದನ್ನು ಕಡೆಗಣಿಸಬೇಕೆಂಬ ವಾದ ಮಂಡಿಸಿತ್ತು. ಬಜಾಜ್ ಆರ್‌ಇ60 ಪ್ರಸ್ತುತ ರಸ್ತೆಯಲ್ಲಿ ಓಡಾಡುತ್ತಿರುವ ಆಟೋ ರಿಕ್ಷಾಗಳಿಗೆ ಪ್ರಮುಖ ಬದಲಿ ವ್ಯವಸ್ಥೆಯಾಗಿರಲಿದೆ. ತ್ರಿಚಕ್ರ ವಾಹನಗಳಿಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ ಮಾನದಂಡಗಳನ್ನು ಆರ್‌ಇ60 ಹೊಂದಿರಲಿದೆ. ಇದು ದೇಶದ ವಾಹನ ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಹೇತುವಾಗಲಿದೆ.
ಬಜಾಜ್ ಆರ್‌ಇ 60 ಡಿಟಿಎಸ್‌ಐ 200ಸಿ, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 20 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.


Click it and Unblock the Notifications









