ವಿತರಣೆ ಶುರು ಮಾಡಿದ ಬಜಾಜ್ ಅವೆಂಜರ್ 160 ಎಬಿಎಸ್

ಬಜಾಜ್ ಅವೆಂಜರ್ 180 ವಾಹನಕ್ಕೆ ಪರ್ಯಾಯವಾಗಿ ರಸ್ತೆಗಿಳಿದಿರುವ ಬಜಾಜ್ ಅವೆಂಜರ್ 160 ಎಬಿಎಸ್ ಈಗಾಗಲೇ ಡೀಲರ್ ಶಿಪ್ ಗಳನ್ನು ಪಡೆದಿದ್ದು, ಕೆಲವು ವಾಹನಗಳನ್ನು ಈಗಾಗಲೇ ಗ್ರಾಹಕರಿಗೆ ತಲುಪಿಸಲಾಗಿದೆ. ಈ ವಾಹನದ ಬೆಲೆಯನ್ನು ಹಳೆ ಮಾದರಿಯ ವಾಹನಕ್ಕಿಂತ ರೂ.7,000 ಕಡಿತಗೊಳಿಸಿ, ಎಕ್ಸ್ ಶೋರೂಂ ದರದಂತೆ ರೂ.81,037 ಎಂದು ನಿಗದಿ ಪಡಿಸಲಾಗಿದೆ.

ವಿತರಣೆ ಶುರು ಮಾಡಿದ ಬಜಾಜ್ ಅವೆಂಜರ್ 160 ಎಬಿಎಸ್

ಈ ಬೆಲೆಯಿಂದಾಗಿ 160 ದ್ವಿಚಕ್ರ ವಾಹನಗಳ ಸೆಗ್ ಮೆಂಟಿನಲ್ಲಿ ಅವೆಂಜರ್ 160 ಎಬಿಎಸ್ ಕೈ ಗೆಟುಕುವ ಬೆಲೆಯಲ್ಲಿ ದೊರೆಯಲಿದೆ. ಈಗಾಗಲೇ ವರದಿಯಾಗಿರುವಂತೆ ಈ 160 ಸಿಸಿ ವಾಹನವು ತನ್ನ ಹಳೆ ಮಾದರಿಯ ಅವೆಂಜರ್ 180 ಡಿಸೈನ್ ಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಅವೆಂಜರ್ 160, ಸ್ಟ್ರೀಟ್ ಅವತಾರ್ ನಲ್ಲಿ ದೊರೆಯಲಿದ್ದು, ಗೇರ್ ನ ಸುತ್ತಲೂ ಡಾರ್ಕ್ ಬಣ್ಣವನ್ನು ಹೊಂದಿದೆ. ಈ ವಾಹನವು ಫ್ಲಾಟ್ ಹ್ಯಾಂಡಲ್ ಬಾರ್ ಹೊಂದಿದ್ದು, ಸಿಟಿಯಲ್ಲಿ ಅನುಕೂಲವಾಗುವಂತಹ ರೈಡಿಂಗ್ ಪೊಸಿಶನ್ ಗಳನ್ನು ನೀಡಲಿದೆ.

ವಿತರಣೆ ಶುರು ಮಾಡಿದ ಬಜಾಜ್ ಅವೆಂಜರ್ 160 ಎಬಿಎಸ್

ಈ ಬೈಕ್ 160.3 ಸಿಸಿ ಸಿಂಗಲ್ ಸಿಲಿಂಡರ್ ಏರ್ - ಕೂಲ್ಡ್ ಎಂಜಿನ್ ಹೊಂದಿದ್ದು, ಈ ಟೆಕ್ನಾಲಜಿಯನ್ನು ಪಲ್ಸರ್ 160 ಎನ್ಎಸ್ ನಿಂದ ಪಡೆಯಲಾಗಿದೆ. ಈ ಎಂಜಿನ್ 15.5 ಹೆಚ್‍ಪಿ ಮತ್ತು 14.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 180 ಮಾದರಿಯ ವಾಹನವು 13.7 ಎನ್ಎಂ ಉತ್ಪಾದಿಸುತ್ತಿತ್ತು.

ವಿತರಣೆ ಶುರು ಮಾಡಿದ ಬಜಾಜ್ ಅವೆಂಜರ್ 160 ಎಬಿಎಸ್

ಬಜಾಜ್ ಅವೆಂಜರ್ 160ನಲ್ಲಿ 5 ಸ್ಪೀಡ್ ನ ಯೂನಿಟ್ ಇದೆ. ಅವೆಂಜರ್ 180 ಯ ಉತ್ಪಾದನೆಯನ್ನು ನಿಲ್ಲಿಸಲಾಗಿರುವ ಕಾರಣ , ಈ ಎಂಜಿನ್ ಅನ್ನು ಹೊಂದಿರುವ ಏಕೈಕ ವಾಹನವೆಂದರೆ ಅದು ಪಲ್ಸರ್ 180 ಎಫ್. ಈ ಬೈಕ್ ನಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕಂನ್ಸೊಲ್ ಅಳವಡಿಸಲಾಗಿದೆ.

ವಿತರಣೆ ಶುರು ಮಾಡಿದ ಬಜಾಜ್ ಅವೆಂಜರ್ 160 ಎಬಿಎಸ್

ಈ ಮೋಟಾರ್ ಸೈಕಲ್ ನಲ್ಲಿ ಅಲಾಯ್ ವ್ಹೀಲ್ ಗಳು, ಟ್ಯೂಬ್ ಲೆಸ್ ಟಯರ್ ಗಳು ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಗಳಿವೆ. ಅವೆಂಜರ್ ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಬಜಾಜ್ ಅವೆಂಜರ್ 160 ಎಬಿಎಸ್, ಸುಜುಕಿ ಇನ್‍ಟ್ರೂಡರ್ ಗೆ ಪೈಪೋಟಿ ನೀಡಲಿದ್ದು, ಬೆಲೆಯನ್ನು ರೂ. 1.03 ಲಕ್ಷಗಳೆಂದು ನಿಗದಿಪಡಿಸಲಾಗಿದೆ. ಆರಂಭಿಕ ಬೆಲೆಯು ಈ ಮುಂಚೆ ಇದ್ದ ಬೈಕ್ ಗಳ ಬೆಲೆಗಳಿಗಿಂತ ಕಡಿಮೆ ಇರುವ ಕಾರಣ ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿಒಳ್ಳೆಯ ಹೆಸರಿರುವ ಕಾರಣ ಈ ವಾಹನವು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

ವಿತರಣೆ ಶುರು ಮಾಡಿದ ಬಜಾಜ್ ಅವೆಂಜರ್ 160 ಎಬಿಎಸ್

ಬಹುತೇಕ ದ್ವಿಚಕ್ರ ವಾಹನ ಕಂಪನಿಗಳು ಮಾರಾಟದಲ್ಲಿ ಕುಸಿತ ಕಂಡಿದ್ದರೂ ಬಜಾಜ್ ಆಟೋ ಮಾರಾಟ ಪ್ರಮಾಣದಲ್ಲಿ ಯಾವುದೇ ಕುಸಿತ ಕಾಣದೇ ಹಾಗೆಯೇ ಯಥಾಸ್ಥಿತಿ ಯಲ್ಲಿದೆ. ಪ್ರತಿಸ್ಪರ್ಧಿ ಕಂಪನಿಗಳು ಉತ್ಪಾದನಾ ವೆಚ್ಚವನ್ನು ಕಡಿತ ಮಾಡುವ ಚಿಂತನೆಯಲ್ಲಿದ್ದರೆ ಬಜಾಜ್ ಈ ಮುಂಗಾರು ಹಂಗಾಮಿನಲ್ಲೂ ಮಾರಾಟದಲ್ಲಿ ಏರಿಕೆ ಕಾಣುವ ನಿರೀಕ್ಷೆಯಲ್ಲಿದೆ.

MOST READ: ಆಕಾಶ್ ಅಂಬಾನಿಯ ಲ್ಯಾಂಬೋರ್ಗಿನಿ ಉರುಸ್ ಕಾರು ಚಲಾಯಿಸಿದ ರಣಬೀರ್ ಕಪೂರ್

ವಿತರಣೆ ಶುರು ಮಾಡಿದ ಬಜಾಜ್ ಅವೆಂಜರ್ 160 ಎಬಿಎಸ್

ಪುಣೆ ಮೂಲದ ದ್ವಿ ಚಕ್ರ ವಾಹನ ತಯಾರಕ ಕಂಪನಿಯು ತನ್ನ ಎಲ್ಲಾ 125 ಸಿಸಿ ಮೇಲ್ಪಟ್ಟ ಮಾದರಿಗಳಲ್ಲೂ ಹೊಸ ಸುರಕ್ಷತಾ ನಿಯಮಗಳಿಗೆ ಅನುಸಾರವಾಗಿ ಎಬಿಎಸ್ ಅನ್ನು ಅಳವಡಿಸಿದೆ. ಇದಿಷ್ಟೇ ಅಲ್ಲದೇ ಬಜಾಜ್ ಶೀಘ್ರದಲ್ಲೇ ಅರ್ಬನೈಟ್ ಬ್ರಾಂಡ್ ನಡಿ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

Source: Autocarindia

Most Read Articles

Kannada
Read more on ಬಜಾಜ್
English summary
Bajaj Avenger 160 ABS delivery starts - Read in Kannada
Story first published: Friday, May 3, 2019, 18:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X