ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕೆಟಿಎಂ 790 ಬೈಕಿನ ವಿಶೇಷತೆ ಏನು.?

ನಮಗೆಲ್ಲರಿಗು ತಿಳಿದಿರುವ ಹಾಗೆ ಕೆಟಿಎಂ ದೇಶಿಯ ಮಾರುಕಟ್ಟೆಗೆ ತಮ್ಮ ಡ್ಯೂಕ್ 790 ಬೈಕ್ ಅನ್ನು ಪರಿಚಯುವ ಬಗ್ಗೆ ತಿಳಿದೇ ಇದೆ. ಇದೀಗ ಕೇಟಿಎಂ ಸಂಸ್ಥೆಯು ಹೊಸ ಕೆಟಿಎಂ ಡ್ಯೂಕ್ 790 ಪರ್ಫಾರ್ಮೆನ್ಸ್ ಬೈಕ್ ಅನ್ನು ಜೂನ್ 2019ರಂದು ಬಿಡುಗಡೆಗೊಳಿಸುವುದರ ಬಗ್ಗೆ ಸುಳುವು ನೀಡಿದ್ದು, ಈ ಬೈಕಿನ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ..

ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕೆಟಿಎಂ 790 ಬೈಕಿನ ವಿಶೇಷತೆ ಏನು.?

ಕೆಟಿಎಂ ಡ್ಯೂಕ್ 790 ಹೊಸ 799 ಸಿಸಿ ಲಿಕ್ವಿಡ್ ಕೂಲ್ ಪ್ಯಾರಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, 103 ಹೆಚ್‍ಪಿ ಮತ್ತು 87 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ್ದು, ಕ್ಲಚ್‍ಲೆಸ್ ಗೇರ್ ಶಿಫ್ಟ್ ನಲ್ಲಿ ವೇಗವಾಗಿ ಗೇರ್‍‍ಗಳನ್ನು ಶಿಫ್ಟ್ ಮಾಡಬಹುದು. ಈ ಬೈಕ್, ಸ್ಪೋರ್ಟ್ಸ್ ನೇಕೆಡ್ ಬಾಡಿ, ಶಾರ್ಪ್ ಫೀಚರ್ಸ್ ಮತ್ತು ಆಕರ್ಷಕ ಪೇಂಟ್ ಸ್ಕೀಮ್‍ಗಳನ್ನು ಒಳಗೊಂಡಿದೆ.

ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕೆಟಿಎಂ 790 ಬೈಕಿನ ವಿಶೇಷತೆ ಏನು.?

ಕೆಟಿಎಂ ಡ್ಯೂಕ್ 790 ಹೊಸ ಚಾಸೀಸ್ ಹೊಂದಿದ್ದು ಎಂಜಿನ್ ಅನ್ನು ಸ್ಟ್ರೆಸ್ ಮೆಂಬರ್ ನಂತೆ ಬಳಸುತ್ತದೆ. ಈ ಬೈಕಿನ ಮುಂಭಾಗದಲ್ಲಿ 43 ಎಂಎಂ ಡಬ್ಲ್ಯೂಪಿ ಅಪ್ ಸೈಡ್ ಡಾನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡಬ್ಲ್ಯೂಪಿ ಮೊನೋ ಶಾಕ್ ಗಳನ್ನು ನೀಡಲಾಗಿದೆ.

ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕೆಟಿಎಂ 790 ಬೈಕಿನ ವಿಶೇಷತೆ ಏನು.?

ಬ್ರೇಕ್ ಗಳ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಸಿಂಗಲ್ ಡಿಸ್ಕ್ ಇದೆ. ಬಾಷ್ 9 ಎಂಪಿ 2 ಚಾನೆಲ್ ನಲ್ಲಿ ಸ್ಟಾಂಡರ್ಡ್ ಎಬಿಎಸ್ ಲಭ್ಯವಿದ್ದು. ಸೂಪರ್ ಮೊಟೋ ರೈಡ್ ಮೋಡ್ ನಲ್ಲಿ ಹಿಂದಿನ ವ್ಹೀಲ್ ನ ಎಬಿಎಸ್ ಟರ್ನ್ ಆಫ್ ಮಾಡಬಹುದು.

ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕೆಟಿಎಂ 790 ಬೈಕಿನ ವಿಶೇಷತೆ ಏನು.?

ಮೋಟಾರ್ ಸೈಕಲ್ 14 ಲೀಟರ್ ಫ್ಯೂಯೆಲ್ ಟ್ಯಾಂಕ್ ಹೊಂದಿದ್ದು, ಕೆಟಿಎಂ ಪ್ರಕಾರ ಪ್ರತಿ ಲೀಟರಿಗೆ 23 ಕಿ.ಮೀ ನಷ್ಟು ಮೈಲೇಜ್ ನೀಡಲಿದೆ. ಡ್ಯೂಕ್ 790 ನ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಇರದಿದ್ದರೂ ಅದರ ಬೆಲೆಯು ರೂ 6 ಲಕ್ಷಗಳಿಂದ ರೂ 7 ಲಕ್ಷಗಳವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಕೆಟಿಎಂ ಡ್ಯೂಕ್ ಗಳು ಸಿಕೆಡಿ ಯೂನಿಟ್ ಗಳಿಗೆ ಬಂದ ನಂತರ ಅವುಗಳನ್ನು ಪುಣೆಯ ಚಕಾನ್ ನಲ್ಲಿರುವ ಬಜಾಜ್ ಕೆಟಿಎಂ ಘಟಕದಲ್ಲಿ ಅಸ್ಸೆಂಬಲ್ ಮಾಡಲಾಗುತ್ತದೆ.

ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕೆಟಿಎಂ 790 ಬೈಕಿನ ವಿಶೇಷತೆ ಏನು.?

ಕೆಟಿಎಂ ಭಾರತದಲ್ಲಿ ಹೆಚ್ಚು ಮಾರಾಟವಾಗುವ ದ್ವಿಚಕ್ರವಾಹನಗಳಲ್ಲಿ ಒಂದಾಗಿದೆ. ಕೆಟಿಎಂ ಎರಡು ಮಾದರಿಯ ಬೈಕುಗಳನ್ನು ಅನೇಕ ವೆರಿಯಂಟ್ ಗಳಲ್ಲಿ ನೀಡುತ್ತಿದೆ. ಮೊದಲ ಮಾದರಿಯಾದ ಡ್ಯೂಕ್ ಅನ್ನು - 125, 200, 250 ಮತ್ತು 390 ಎಂಬ ವಿವಿಧ ಎಂಜಿನ್ ಕೆಪಾಸಿಟಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕೆಟಿಎಂ 790 ಬೈಕಿನ ವಿಶೇಷತೆ ಏನು.?

ಎರಡನೇ ಮಾದರಿಯಾದ ಆರ್‍‍ಸಿ ಅನ್ನು - 200 ಮತ್ತು 390 - ಎಂಬ ಎರಡು ಎಂಜಿನ್ ಕೆಪಾಸಿಟಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳ ಬೆಲೆ ಭಾರತದ ಎಕ್ಸ್ ಶೋ ರೂಂ ದರದಲ್ಲಿರುವಂತೆ 1.24 ಲಕ್ಷಗಳಿಂದ ರೂ 2.44 ಲಕ್ಷಗಳಾಗಿರುತ್ತವೆ ಎಂದು ಅಂದಾಜಿಸಲಾಗಿದೆ.

ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕೆಟಿಎಂ 790 ಬೈಕಿನ ವಿಶೇಷತೆ ಏನು.?

ಕೆಟಿಎಂ ಡ್ಯೂಕ್ 790 ಹೊರತಾಗಿ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಗ್ಗೆ ಸುದ್ದಿಗಳಿದ್ದು, ಆ ಬೈಕ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ. ಕೆಟಿಎಂ 390 ಅಡ್ವೆಂಚರ್ ಬೈಕನ್ನು ಕಳೆದ ವರ್ಷ ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು ಆದರೆ 2019ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಈಗ ಈ ಅಡ್ವೆಂಚರ್ ಸಿರೀಸ್ ಬೈಕಿನ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ.

Souce: gaadiwaadi

More from DriveSpark

Article Published On: Monday, May 6, 2019, 8:55 [IST]
English summary
Ktm To Launch Their Duke 790 Bike In June 2019. Read In Kannada
Read more on ಕೆಟಿಎಂ ktm duke
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+