ಬೆಂಗ್ಳೂರಲ್ಲಿ ಭಾರಿ ಮಳೆ; ಸಂಚಾರ ಅಸ್ತವ್ಯಸ್ತ
ಕಳೆದ ರಾತ್ರಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬುಧವಾರ ಸಂಜೆ ಹೊತ್ತಿಗೆ ಆರಂಭವಾದ ಗುಡುಗು ಮಿಂಚಿತ ಸಹಿತ ಮಳೆಯ ಆರ್ಭಟ ಮೂರು ತಾಸಿಗೂ ಹೆಚ್ಚು ಹೊತ್ತು ಮಂದುವರಿದಿತ್ತು. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಅತಿ ಹೆಚ್ಚು ಪರದಾಡುವಂತಾಗಿತ್ತು.
ಮರಗಿಡಗಳು ಧರೆಗುರುಳಿದ್ದರಿಂದ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಪಾಲಿಕೆ ಸಿಬ್ಬಂದಿಗಳು ಇದೀಗ ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ವಿವಿಧ ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರಣಕ್ಕೆ ಅಡಚಣೆಯುಂಟಾಗಿತ್ತು. ನಗರದಲ್ಲಿ 35ರಿಂದ 40 ಮೀ.ಮೀ. ಮಳೆಯಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಜಯನಗರ ನಾಲ್ಕನೇ ಹಾಗೂ ಒಂಬತ್ತನೇ ಹಂತ ಸೇರಿದಂತೆ ಶಾಂತಿನಗರದಲ್ಲಿ ಮರದ ರೆಂಬೆ ಬಿದ್ದಿದ್ದರಿಂದ ಸಂಚಾರಕ್ಕೆ ತೊಡಕು ಸಂಭವಿಸಿತ್ತು. ಇನ್ನು ಶಾಂತಿನಗರ, ಹೊಂಗಸಂದ್ರ, ಕೆ.ಜಿ ರಸ್ತೆ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್‌ಗಳಲ್ಲಿ ರಸ್ತೆಯಲ್ಲಿ ನೀರು ತುಂಬಿದ್ದರಿಂದ ಸಂಚಾರಕ್ಕೆ ಅಡಿಯಾಗಿತ್ತು.
ಮಳೆ ಸಂದರ್ಭದಲ್ಲಿ ವಾಹನಗಳನ್ನು ನಿಧಾನವಾಗಿ ಚಲಿಸುವಂತೆ ಹಾಗೂ ಇಂಡಿಕೇಟರ್ ಬಳಸುವಂತೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮರದಡಿಗಳಲ್ಲಿ ವಾಹನ ಪಾರ್ಕಿಂಗ್ ಅಥವಾ ದ್ವಿಚಕ್ರ ವಾಹನ ಸವಾರರು ಆಶ್ರಯ ಪಡೆಯಬಾರದೆಂದು ಎಚ್ಚರಿಸಲಾಗಿದೆ.


Click it and Unblock the Notifications









