ಆಗಸ್ಟ್ 14ರಂದು ಬೆಂಗಳೂರು-ಮೈಸೂರು ಫ್ಲೈ ಬಸ್ ಆರಂಭ
ಮೈಸೂರು ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಫ್ಲೈ ಬಸ್ ಸೇವೆ ಆಗಸ್ಟ್ 14ರಂದು ಆರಂಭವಾಗಲಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಫೇಸ್‌ಬುಕ್ ಅಧಿಕೃತ ಪೇಜ್‌ನಲ್ಲಿ ಮಾಹಿತಿ ದಾಖಲಾಗಿದೆ. ಬುಕ್ಕಿಂಗ್ ಪ್ರಕಿಯೆ ಸೋಮವಾರದ ಮೊದಲು ತೆರೆಯಲಿದ್ದು, ತಕ್ಷಣ ನಿಮ್ಮ ಟಿಕೆಟ್ ಕಾಯ್ದಿರಿಸುವಂತೆ ಕೋರಲಾಗಿದೆ. ಈ ಮೂಲಕ ಫ್ಲೈ ಬಸ್ಸಿನಲ್ಲಿ ಸಂಚರಿಸಿದ ಮೊದಲ ಪ್ರಯಾಣಿಕ ಎಂದೆನಿಸಿಕೊಳ್ಳಬಹುದಾಗಿದೆ.
ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಐರಾವತ್ ಕ್ಲಬ್ ಕ್ಲಾಸ್ (ವೋಲ್ವೋ ಮಲ್ಟಿ ಎಕ್ಸೆಲ್) ಬಸ್ಸುಗಳು ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಎಸಿ ಸುಖಾಸೀನ ಆಸನಗಳು ಇದರಲ್ಲಿ ಲಗತ್ತಿಸಲಾಗಿದೆ.
ಫ್ಲೈ ಬಸ್ ಸಮಯಗಳ ವಿವರ:
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ಕಡೆಗೆ
ಹೊರಡುವ ಸಮಯ ಬೆಳಗ್ಗೆ ಗಂಟೆ 9.45 ಹಾಗೂ ರಾತ್ರಿ ಗಂಟೆ 9.45
ತಲುಪುವ ಸಮಯ ಮಧ್ಯಾಹ್ನ ಗಂಟೆ 1.45 ಹಾಗೂ ಮಧ್ಯರಾತ್ರಿ ಗಂಟೆ 1.30
ಮೈಸೂರಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ
ಹೊರಡುವ ಸಮಯ ಮಧ್ಯರಾತ್ರಿ ಗಂಟೆ 2.00 ಹಾಗೂ ಮಧ್ಯಾಹ್ನ ಗಂಟೆ 2 ಗಂಟೆಗೆ
ತಲುಪುವ ಸಮಯ ಬೆಳಗ್ಗೆ ಗಂಟೆ 5.45 ಹಾಗೂ ಸಂಜೆ ಗಂಟೆ 6.00ಕ್ಕೆ
ಫ್ಲೈ ಬಸ್ ವೈಶಿಷ್ಟ್ಯಗಳೇನು?
- ಆರಾಮದಾಯಕ ಪಯಣ,
- ಪುಟ್ಟ ಅಡುಗೆ ಮನೆ,
- ರಾಸಾಯನಿಕ ಶೌಚಾಲಯ.
- ನೀರಿನ ಸರಬುರಾಜು
- ವಿಮಾನ ಹಾರಾಟ ಸಮಯಗಳ ನೇರ ಪ್ರದರ್ಶನ
- ನಾನ್ ಸ್ಟಾಪ್ ಬಸ್
- ದರ 1000 ರು. ಸಾಧ್ಯತೆ
- ಸಮಯ ಉಳಿತಾಯ
- ಮನರಂಜನೆಗಾಗಿ 70ಕ್ಕೂ ಅಧಿಕ ಚಾನೆಲ್
- ಲೆಥರ್ ಸೀಟು ಹಾಗೂ ಹೆಚ್ಚಿನ ಸ್ಥಳಾವಕಾಶ
- ಜಿಪಿಎಸ್ ಸಿಸ್ಟಂ
- ಬೆಂಗಳೂರು ಹಾಗೂ ಮೈಸೂರಿನಿಂದ ತಲಾ ಎರಡು ಬಸ್ಸುಗಳ ನಿರ್ಗಮನ
ಫ್ಲೈ ಬಸ್ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಭೇಟಿ ಕೊಡಿರಿ


Click it and Unblock the Notifications










