ಸದ್ಯದಲ್ಲೇ ಬೆಂಗಳೂರು-ಮೈಸೂರು ನಡುವೆ ಫ್ಲೈ ಬಸ್ ಸೇವೆ

Written By:

ಮೈಸೂರು ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಫ್ಲೈ ಬಸ್ ಸೇವೆಯನ್ನು ಇನ್ನು ಒಂದೆರಡು ತಿಂಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಆರಂಭಿಸಲಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಆಗಸ್ಟ್ 1ರಿಂದ ಆರಂಭವಾಗಲಿದೆ.

ಈ ಬಗ್ಗೆ ಕಳೆದ ಭಾನುವಾರ ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮೊದಲ ಹಂತವಾಗಿ ಕೆಲವು ಬಸ್‌ಗಳು ಸಂಚರಿಸಲಿದ್ದು, ಬಳಿಕ ಯೋಜನೆ ವಿಸ್ತರಣೆಯಾಗಲಿದೆ ಎಂದು ತಿಳಿಸಿದ್ದರು.

ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಐರಾವತ್ ಕ್ಲಬ್ ಕ್ಲಾಸ್ (ವೋಲ್ವೋ ಮಲ್ಟಿ ಎಕ್ಸೆಲ್) ಬಸ್ಸುಗಳು ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಎಸಿ ಸುಖಾಸೀನ ಆಸನಗಳು ಇರಲಿದೆ.

'ಫ್ಲೈ ಬಸ್‌'ನಲ್ಲಿ ಏನೆಲ್ಲ ಇರಲಿದೆ? ಮಾಹಿತಿಗಾಗಿ ಫೋಟೊ ಫೀಚರ್ ತಿರುವಿರಿ...

To Follow DriveSpark On Facebook, Click The Like Button
ಆರಾಮದಾಯಕ ಪಯಣ

ಆರಾಮದಾಯಕ ಪಯಣ

ಫ್ಲೈ ಬಸ್‌ನಲ್ಲಿ ಪುಟ್ಟ ಅಡುಗೆ ಮನೆ, ರಾಸಾಯನಿಕ ಶೌಚಾಲಯಗಳನ್ನು ಹೊಂದಿರಲಿದೆ. ಪ್ರತಿ ಸೀಟಿನ ಹಿಂದುಗಡೆ ಸೀಟಿನ ವ್ಯವಸ್ಥೆ ಇರಲಿದೆ. ಪ್ರಯಾಣಿಕರಿಗೆ ಕುಳಿತಲ್ಲಿಗೆ ನೀರಿಗೆ ಸರಬುರಾಜು ಆಗಲಿದೆ. ಹಾಗೆಯೇ ವಿಮಾನ ಟೈಮಿಂಗ್ಸ್ ಮಾಹಿತಿ ಲಭಿಸಲಿದೆ.

ನಾನ್ ಸ್ಟಾಪ್ ಬಸ್

ನಾನ್ ಸ್ಟಾಪ್ ಬಸ್

ಫ್ಲೈ ಬಸ್ ಮೈಸೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ನಿಲ್ಲಲಿದೆ. ಕೆಂಗೇರಿ, ನೆಲಮಂಗಲ, ಹೆಬ್ಬಾಳ ಮೂಲಕ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದೆ.

ದರ ಎಷ್ಟು?

ದರ ಎಷ್ಟು?

ಸದ್ಯ ಫ್ಲೈ ಬಸ್ ಸ್ವಲ್ಪ ದುಬಾರಿಯಾಗಿದ್ದು, 1000 ರು. ಎಂದು ನಿಗದಿಪಡಿಸಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ಬಳಿಕ ದರ ಪರಿಷ್ಕರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಯೋಜನೆ ವಿಸ್ತರಣೆ

ಯೋಜನೆ ವಿಸ್ತರಣೆ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳೂರು, ಕೊಡಗು ಮತ್ತು ಮೈಸೂರಿನಿಂದ ಹೆಚ್ಚಿನ ಪ್ರಯಾಣಿಕರು ಆಗಮಿಸುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದ್ದರಿಂದ ಸೆಪ್ಟೆಂಬರ್ ತಿಂಗಳಿನಿಂದ ಫ್ಲೈ ಬಸ್ ಯೋಜನೆಯನ್ನು ಇತರ ನಗರಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ.

ಸಮಯ ಉಳಿತಾಯ

ಸಮಯ ಉಳಿತಾಯ

ಮೈಸೂರಿನಿಂದ ಬೆಂಗಳೂರಿನ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಸಂಚರಿಸಬೇಕಾಗಿತ್ತು. ಆದರೆ ಫ್ಲೈ ಬಸ್ ಸೇವೆಯಿಂದಾಗಿ ಸಮಯದ ಉಳಿತಾಯವಾಗಲಿದೆ. ಹಾಗೂ ಜನರು ನೇರವಾಗಿ ವಿಮಾನ ನಿಲ್ದಾಣ ತಲುಪಬಹುದಾಗಿದೆ. ಒಟ್ಟಾರೆ ಮೈಸೂರಿನ ಜನರ ಬಹುದಿನಗಳ ಕನಸು ಆಗಸ್ಟ್ ನಲ್ಲಿ ನನಸಾಗಲಿದೆ. ಜನರು ಕೆಎಸ್ಆರ್ ಟಿಸಿಯ ಈ ಫ್ಲೈ ಬಸ್ ಸೇವೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕು.

English summary
Travelling from Mysore to catch a flight at the Bangalore Airport will no longer be a hassle as the KSRTC and the airport authorities will soon start a ‘Fly-bus’ service that will connect the two destinations
Story first published: Wednesday, June 5, 2013, 14:50 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark