ಸಂಸ್ಥೆಯ ಬಸ್ ಖರೀದಿಸಲು ಶಾಲೆಗಳಿಗೆ ಬಿಎಂಟಿಸಿ ಸೂಚನೆ

By Nagaraja

ಶಾಲಾ ವಾಹನಗಳ ಸುರಕ್ಷತೆಯ ಮಾರ್ಗಸೂಚಿ ಜಾರಿ ಸಂಬಂಧ ಪೊಲೀಸರ ಕಿರುಕುಳ ಹೆಚ್ಚಾಗಿದೆಯೆಂಬ ಆರೋಪ ನೀಡಿರುವ ರಾಜ್ಯ ಸಂಯುಕ್ತ ಶಾಲಾ ಹಾಗೂ ಲಘ ವಾಹನ ಚಾಲಕರ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, ಶಾಲಾ ಮಕ್ಕಳು ತೀರಾ ಪರದಾಡುವಂತಾಗಿದೆ.

ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಸಂಸ್ಥೆಯ ಬಸ್‌ಗಳನ್ನು ಖರೀದಿಸುವಂತೆ ಶಾಲೆಗಳಿಗೆ ಸೂಚನೆ ರವಾನಿಸಿದೆ.

ಮಳೆ ಪ್ರಭಾವ ಹೆಚ್ಚಾಗಿರುವಂತೆಯೇ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಹರಸಾಹಸ ಪಡುವಂತಾಗಿದೆ. ಈ ನಡುವೆ ಚಾಲಕರ ಸಂಘದವರೊಂದಿಗೆ ಸರ್ಕಾರ ಮಾತುಕತೆ ನಡೆಸಿ ಮುಷ್ಕರ ಕೈಬಿಡುವಂತೆ ಮನವೊಲಿಸಬೇಕಾಗಿ ಪೋಷಕರಿಂದ ಕೂಗು ಕೇಳಿ ಬಂದಿದೆ. ಒಟ್ಟಿನಲ್ಲಿ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟುಬಿಡುವುದು ಹಾಗೂ ಸಂಜೆ ವಾಪಾಸ್ ಕರೆದುಕೊಂಡು ಹೋಗುವುದು ಪೋಷಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.

ಐದರಿಂದ ಆರು ವರ್ಷ ಹಳೆಯದಾದ ಬಸ್ಸನ್ನು ಬಿಎಂಟಿಸಿ ಓಪರೇಟ್ ಮಾಡುತ್ತಿಲ್ಲ. ಹಾಗಿರುವಾಗ ನಿಯಮಿತ ಬಳಕೆ ಮಾತ್ರ ಹೊಂದಿರುವ ಶಾಲೆಗಳು 15ರಿಂದ 16 ವರ್ಷಗಳ ವರೆಗೆ ಬಸ್ಸುಗಳನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ವರ್ಷಂಪ್ರತಿ ಬಿಎಂಟಿಸಿ ಕಾಲ ಮೀರಿದ ನೂರಾರು ಬಸ್ಸುಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸುತ್ತಿದೆ. ಈ ಸಂಬಂಧ ಶಾಲೆಗಳು ಕೋರಿಕೆ ಸಲ್ಲಿಸಿದರೆ ನ್ಯಾಯವಾದ ಬೆಲೆಗೆ ಒದಗಿಸಿಕೊಡುವುದಾಗಿ ಸ್ಪಷ್ಟನೆ ನೀಡಿದೆ.

More from DriveSpark

Article Published On: Friday, June 21, 2013, 12:40 [IST]
English summary
Seeking to capitalise on the piquant situation schools are facing with private vehicles remaining off roads, Bangalore Metropolitan Transport Corporation (BMTC), that discards hundreds of buses annually to replenish them with better technology vehicles, has asked schools to pick up some of these buses.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+