ಬುಗಾಟಿ ವೆರೊನ್ ಸೂಪರ್ ಸೇಲ್
ಸರ್ವಕಾಲಿಕ ಶ್ರೇಷ್ಠ ಸೂಪರ್ ಕಾರುಗಳಲ್ಲಿ ಒಂದಾಗಿರುವ ಬುಗಾಟಿ ವೆರೊನ್ ಉತ್ಪಾದನೆ ಸದ್ಯದಲ್ಲೇ ನಿಲುಗಡೆಗೊಳ್ಳಲಿದೆ. ಇದನ್ನು ನೂತನ ವರ್ಷನ್ ಹಿಂಬಾಸಲಿದೆ. 2005ನೇ ಇಸವಿಯಲ್ಲಿ ಉತ್ಪನ್ನ ಆರಂಭಗೊಂಡ ಈ ಸೂಪರ್ ಕಾರುಗಳ 450 ಯುನಿಟ್‌ಗಳನ್ನು ಮಾರಾಟ ಮಾಡುವುದು ಕಂಪನಿಯ ಗುರಿಯಾಗಿತ್ತು.
ಇದೇ ರೀತಿ ಇದುವರೆಗೆ 400 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಅಂದರೆ ಕೇವಲ ಬೆರಳೆಣಿಯಷ್ಟು 50 ಯುನಿಟ್ ಮಾತ್ರ ಇನ್ನು ಬಾಕಿ ಉಳಿದಿದೆ.

ಬುಗಾಟಿ ಲೆಜೆಂಡ್ ಸಿರೀಸ್‌ನ ಗ್ರಾಂಡ್ ಸ್ಪೋರ್ಟ್ ಸೂಪರ್ ಕಾರು ಇದಾಗಿದ್ದು, ಮಧ್ಯ ಪ್ರಾಚ್ಯ ಗ್ರಾಹಕರೊಬ್ಬರು ಈ ದುಬಾರಿ ಕಾರನ್ನು ಖರೀದಿಸಿದ್ದಾರೆ. ಬುಗಾಟಿ ವೆರೊನ್ ಸಿರೀಸ್‌ನಲ್ಲಿ ಗ್ರಾಂಡ್ ಸ್ಪೋರ್ಟ್, ರೊಡ್‌ಸ್ಟರ್‌ಗಳಂತಹ ಆವೃತ್ತಿಗಳನ್ನು ಉತ್ಪಾದಿಸಲಾಗಿದೆ.
ಇದೀಗ 450 ಮಾರಾಟ ಗೆರೆ ದಾಟಿದ ಬಳಿಕ ಹೊಸ ಸ್ಪೋರ್ಟ್ಸ್ ಕಾರು ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.


Click it and Unblock the Notifications








