ದುಬೈ ಪೊಲೀಸ್ ತೆಕ್ಕೆಗೆ ಇನ್ನೊಂದು ಸೂಪರ್ ಕಾರು?
ಜಗತ್ತಿನ ದುಬಾರಿಗಳಲ್ಲಿ ಅತಿ ದುಬಾರಿ ಕಾರುಗಳನ್ನು ತಮ್ಮದಾಗಿಸಿಕೊಳ್ಳುವುದರಲ್ಲೇ ಮಗ್ನವಾಗಿರುವ ದುಬೈ ಪೊಲೀಸ್, ಐಷಾರಾಮಿ ಕಾರುಗಳ ಪಟ್ಟಿಗೆ ಸದ್ಯದಲ್ಲೇ ಇನ್ನೊಂದು ಸೂಪರ್ ಕಾರು ಸೇರ್ಪಡೆಯಾಗಲಿದೆ.
ಮೂಲಗಳ ಪ್ರಕಾರ ಜಗತ್ತಿನ ಅತಿ ವೇಗದ ಕಾರುಗಳಲ್ಲಿ ಒಂದೆನಿಸಿಕೊಂಡಿರುವ ಬುಗಾಟಿವೆರೊನ್ ಕಾರನ್ನು ದುಬೈ ಪೊಲೀಸ್ ತನ್ನ ತೆಕ್ಕೆಗೆ ಸೇರಿಸಿಕೊಳ್ಳಲಿದೆ. ಅಂದ ಹಾಗೆ ದುಬೈ ಪೊಲೀಸ್ ಬಳಿ ಯಾವೆಲ್ಲ ಕಾರುಗಳಿವೆ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿರಿ...
ಈ ಬಗ್ಗೆ ಟ್ವಿಟರ್ ಅಕೌಂಟ್‌ನಲ್ಲಿ ದುಬೈ ಪೊಲೀಸ್ ಮಾಹಿತಿ ನೀಡಿದ್ದು, ಬುಗಾಟಿವೆರೊನ್ ಕಾರಿನ ಚಿತ್ರವನ್ನು ಬಿಡುಗಡೆಗೊಳಿಸಿದೆ. ಅಷ್ಟಕ್ಕೂ ಬುಗಾಟಿವೆರೂನ್ 15 ಕೋಟಿ ರು.ಗಳಷ್ಟು ದುಬಾರಿಯಾಗಿದೆ.

Bugatti Veyron
ಜಗತ್ತಿನ ಅತಿ ಶ್ರೀಮಂತ ರಕ್ಷಣಾ ವ್ಯವಸ್ಥೆ ಹೊಂದಿರುವ ದುಬೈ ಪೊಲೀಸ್, ಪ್ರಸ್ತುತ ಐಷಾರಾಮಿ ಕಾರುಗಳನ್ನು ಖರೀದಿಸುವುದರಲ್ಲೇ ಬ್ಯುಸಿಯಾಗಿದಂತಿದೆ. ಅಷ್ಟಕ್ಕೂ ಅಲ್ಲಿ ಅಷ್ಟೊಂದು ಪ್ರಮಾಣದ ಅಪರಾಧ ಕೃತ್ಯಗಳು ನಡೆಯುತ್ತಿದೆಯೇ ಅಥವಾ ಕೇವಲ ಪ್ರತಿಷ್ಠಿಗಾಗಿ ಮಾತ್ರ ಇಂತಹ ಕಾರುಗಳನ್ನು ಸಂಗ್ರಹಿಸುತ್ತದೆಯೇ ಎಂಬುದು ಸಾಮಾನ್ಯ ಜನರನ್ನು ಕಾಡುವ ಪ್ರಶ್ನೆ.

ಬುಗಾಟಿವೆರೊನ್ ಸೂಪರ್ ಕಾರಿನಲ್ಲಿ 8.0 ಲೀಟರ್ ಡಬ್ಲ್ಯು 16 ಎಂಜಿನ್ ಆಳವಡಿಸಲಾಗಿದೆ.

Bugatti Veyron

Bugatti Veyron
ಎಲ್ಲ ಸೂಪರ್ ಕಾರುಗಳಂತೆ ಬುಗಾಟಿಕೂಡಾ ಚಪ್ಪಟೆ ವಿನ್ಯಾಸವನ್ನು ಹೊಂದಿದೆ. ಇದು ಕೆಲವೇ ಸೆಕೆಂಡುಗಳಲ್ಲಿ ಕಾರುಗಳ ವೇಗವನ್ನು ವರ್ಧಿಸಲು ನೆರವಾಗುತ್ತದೆ.

Bugatti Veyron
ಬುಗಾಟಿವೆರೂನ್ 2.6 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

Bugatti Veyron



Click it and Unblock the Notifications








