ಮಹೀಂದ್ರ ರೇವಾ ಖರೀದಿಸಿ 70,000 ಉಳಿತಾಯ ಮಾಡಿ

ಈಗಾಗಲೇ ಮಹೀಂದ್ರ ರೇವಾ ಇ2ಒ ವಿದ್ಯುತ್ ಚಾಲಿತ ಕಾರನ್ನು ಬಿಡುಗಡೆ ಮಾಡಲಾಗಿದೆ. ಇದರಂತೆ ನೀವು ಮಹೀಂದ್ರ ಇ2ಒ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಲ್ಲಿ ವಾರ್ಷಿಕವಾಗಿ 70,000 ರು.ಗಳ ವರೆಗೂ ಉಳಿತಾಯ ಮಾಡಬಹುದಾಗಿದೆ ಎಂದು ಕಂಪನಿಯು ತಿಳಿಸಿದೆ.

ಮಹೀಂದ್ರ ರೇವಾ ಬಿಡುಗಡೆ ಮಾಡಿರುವ ವರದಿಯಲ್ಲಿ ಇದು ಉಲ್ಲೇಖವಾಗಿದೆ. ಮಹೀಂದ್ರ ಪ್ರಕಾರ ಇ2ಒ ಪ್ರತಿ ಕೀ.ಮೀ ಸಂಚಾರಕ್ಕೆ ಕೇವಲ 50 ಪೈಸೆ ಮಾತ್ರ ತಗಲುತ್ತದೆ. ಮತ್ತೊಂದೆಡೆ ಪೆಟ್ರೋಲ್ ಕಾರುಗಳಿಗೆ 5ರಿಂದ 6 ರು.ಗಳ ವರೆಗೆ ವೆಚ್ಚ ತಗಲುತ್ತದೆ.

ಇನ್ನು ಪ್ರತಿ ತಿಂಗಳು 1200 ಕೀ.ಮೀ. ಅಥವಾ ಅದಕ್ಕಿಂತಲೂ ಹೆಚ್ಚು ಸಂಚರಿಸುವುದರಿಂದ ವಾರ್ಷಿಕವಾಗಿ ರು. 70,000 ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ ಎಂದಿದೆ.

ಮಹೀಂದ್ರ ಇ2ಒ ದೆಹಲಿ ಆನ್ ರೋಡ್ ದರ 5.96 ಲಕ್ಷ ರು.ಗಳಾಗಿವೆ. ಅಲ್ಲಿ ಶೇಕಡಾ 29ರಷ್ಟು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಅಂದರೆ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಿಗೆ ಸ್ಪರ್ಧೆ ಒಡ್ಡುವ ಸಾಮರ್ಥ್ಯವನ್ನು ಇ2ಒ ಹೊಂದಿದೆ.

ಈ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನ ಝಿರೋ ಎಮಿಷನ್ ಹೊಂದಿದ್ದು, ಭವಿಷ್ಯ ಸಂಚಾರಿ ವಾಹನ ಎಂದೇ ಪರಿಗಣಿಸಲ್ಪಟ್ಟಿದೆ. ಹಾಗಿದ್ದರೂ ನಗರ ಪ್ರದೇಶದ ಗ್ರಾಹಕರನ್ನು ಎಷ್ಟರ ಮಟ್ಟಿಗೆ ಆಕರ್ಷಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Saturday, March 30, 2013, 10:09 [IST]
English summary
Mahindra says, driving 1,200+ kms of e2o every month, will save you Rs 70,000 on fuel and maintenance annually.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+