ಡೈಮ್ಲರ್ 5,000ನೇ ಟ್ರಕ್ ಅನಾವರಣ

By Nagaraja

ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ ಒಂದು ವರ್ಷದೊಳಗೆ ಚೆನ್ನೈನಲ್ಲಿರುವ ತನ್ನ ಓರಗಾಡಂ ಉತ್ಪಾದಕ ಘಟಕದಿಂದ 5000ನೇ ಟ್ರಕ್ ಬಿಡುಗಡೆಗೊಳಿಸುವಲ್ಲಿ ಡೈಮ್ಲರ್ ಇಂಡಿಯಾ ವಾಣಿಜ್ಯ ವಾಹನವು ಯಶಸ್ವಿಯಾಗಿದೆ.

ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ (ಡಿಐಸಿವಿ), 2012ನೇ ಜೂನ್‌ನಲ್ಲಿ 'ಭಾರತ್ ಬೆಂಝ್' ಫ್ಲಾಟ್ ಫಾರ್ಮ್‌ನಲ್ಲಿ ಚೆನ್ನೈನಲ್ಲಿ ಉತ್ಪಾದನೆ ಆರಂಭಿಸಿತ್ತು. ಇದರಂತೆ 2012 ಸೆಪ್ಟೆಂಬರ್ 26ರ ವೇಳೆಗೆ ಮೂರು ಘನ ವಾಹನ ಟ್ರಕ್‌ ಮಾಡೆಲ್‌ಗಳನ್ನು ಲಾಂಚ್ ಮಾಡಿತ್ತು.

ಪ್ರಸಕ್ತ ಸಾಲಿನಲ್ಲಿ ಫೆಬ್ರವರಿ ತಿಂಗಳಲ್ಲಿ ಹಗುರ ಭಾರತ ಟ್ರಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಇದಾದ ಬಳಿಕ ಜಪಾನ್ ಮೂಲಕ ಮಿಟ್ಸುಬಿಸಿ ಜತೆಗೂಡಿ 2013 ಮೇ 23ರಂದು ಇನ್ನೊಂದು ರೇಂಜ್‌ನ ಟ್ರಕ್ ಪರಿಚಯಿಸಿತ್ತು.

ಈ ಎಲ್ಲದರ ನಡುವೆ ಉತ್ಪಾದನೆಯಲ್ಲಿ ಸ್ಥಿರತೆ ಕಾಪಾಡುವ ಪ್ರಯತ್ನದಲ್ಲಿರುವ ಡೈಮ್ಲರ್ ತನ್ನ 5,000 ಯುನಿಟ್ ಟ್ರಕ್ ಲಾಂಚ್ ಮಾಡಿದೆ.

Most Read Articles

Kannada
English summary
In under a year since it commenced operations in India and still in the process of stabilising its production lines for its range of commercial vehicles, DICV has managed to hit the milestone of rolling out 5,000 units of its trucks
Story first published: Monday, July 15, 2013, 16:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X