ಸೂಪರ್ ಸ್ಟಾರ್‌ಗಳಿಗಾಗಿ ಸೂಪರ್ ಬಸ್

ದೇಶದ ಪ್ರಖ್ಯಾತ ವಾಹನ ವಿನ್ಯಾಸ ಕಂಪನಿಯಾದ ಡಿಸಿ ಡಿಸೈನ್, ತಾರೆಗಳಿಗಾಗಿ ನೂತನ ಕಸ್ಟಮೈಸ್ಡ್ ಬಸ್ಸೊಂದನ್ನು ತಯಾರಿಸಲು ಹೊರಟಿದೆ. ಅದು ಅಂತಿಂಥ ಬಸ್ ಅಲ್ಲ. ಬಾಲಿವುಡ್ ಸ್ಟಾರ್‌ಗಳಲ್ಲಿ ತಮ್ಮ ವಸತಿ ಗೃಹದಲ್ಲಿ ಲಭ್ಯವಾಗಲಿರುವ ಎಲ್ಲ ಐಷಾರಾಮಿ ಸೌಲಭ್ಯಗಳು ಈ ಕಿರಿದಾದ ಬಸ್ ಹೊಂದಿರಲಿದೆ.

ಇತ್ತೀಚೆಗಷ್ಟೇ ಡಿಸಿ ಡಿಸೈನ್ ಸೂಪರ್ ಲಗ್ಷುರಿ ಬಸ್ಸೊಂದರ ಕಾನ್ಸೆಪ್ಟ್ ಬಿಡುಗಡೆಗೊಳಿಸಿತ್ತು. ಇದರ ಬೆನ್ನಲ್ಲೇ ಲಾಂಗೆ ಎಕ್ಸ್‌ಎಲ್ (DC Lounge XL) ಕಾನ್ಸೆಪ್ಟ್ ಕೂಡಾ ಅನಾವರಣಗೊಂಡಿದೆ.

ಈ ನಡುವೆ ನಿಮಗೊಂದು ಸಿಹಿ ಸುದ್ದಿ ನೀಡಲು ಡ್ರೈವ್ ಸ್ಪಾರ್ಕ್ ಬಯಸುತ್ತಿದ್ದು, ಈ ದೆಹಲಿ ಮೂಲಕ ಕಂಪನಿ ಸದ್ಯದಲ್ಲೇ 'ಅವಾಂತಿ' ಸೂಪರ್ ಕಾರನ್ನು ಬಿಡುಗಡೆಗೊಳಿಸಲಿದೆ. ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಿಸಲಿರುವುದರರಿಂದ ದೇಶದ ಕಾರು ಪ್ರಿಯರು ಹೆಮ್ಮೆಪಡಬಹುದಾಗಿದೆ.

ಅಂದ ಹಾಗೆ ಡಿಸಿ ಲಾಂಗೆ ಎಕ್ಸ್‌ಎಲ್ ಲಗ್ಷುರಿ ಬಸ್ಸಿನ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದೆ. ಇದು ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿರಲಿದೆ.

DC Lounge XL - Super Luxury Bus

ಐಷಾರಾಮಿ ಕಸ್ಟಮೈಸ್ಡ್ ಬಸ್ ನಿರ್ಮಿಸುವುದರಲ್ಲಿ ಡಿಸಿ ಡಿಸೈನ್ ಹೆಸರುವಾಸಿಯಾಗಿದೆ. ಬಾಲಿವುಡ್ ತಾರೆಗಳಿಗೆ ಶೂಟಿಂಗ್ ಸಂದರ್ಭದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ಐಷಾರಾಮಿ ಸೌಲಭ್ಯಗಳುಳ್ಳ ಈ ಬಸ್ ನೆರವಿಗೆ ಬರಲಿದೆ.

DC Lounge XL - Super Luxury Bus

ಎಕ್ಸ್‌ಟೀರಿಯರ್ ವಿನ್ಯಾಸ ರೂಪಿಸುವುದರಲ್ಲಿ ಡಿಸಿ ಡಿಸೈನ್‌ ಎತ್ತಿದ ಕೈ. ನಿಜಕ್ಕೂ ಈ ಸೂಪರ್ ಬಸ್ ಡಿಸಿಗೆ ಇನ್ನಷ್ಟು ವರ್ಚಸ್ಸು ನೀಡಲಿದೆ.

DC Lounge XL - Super Luxury Bus

ಡಿಸಿ ಲಾಂಗೆ ಎಕ್ಸ್‌ಎಲ್ ಬಸ್ಸಿನ ಇಂಟಿರಿಯರ್ ಲುಕ್. ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಈ ಸೂಪರ್ ಬಸ್ ಹೊಂದಿರಲಿದೆ.

DC Lounge XL - Super Luxury Bus

ಇಸುಝು (Isuzu) 4500 ಚಾಸೀಸ್ ತಲಹದಿಯಲ್ಲಿ ಡಿಸಿ ಲಾಂಗೆ ಎಕ್ಸ್‌ಎಲ್ ಬಸ್ ಕಾನ್ಸೆಪ್ಟ್ ತಯಾರಾಗಿದೆ.

DC Lounge XL - Super Luxury Bus

ಡಿಸಿ ಲಾಂಗೆ ಎಕ್ಸ್‌ಎಲ್ ಬಸ್ಸಿನ ವಿಲಾಸಿ ಬೆಡ್ ರೂಂ ದೃಶ್ಯ. ಒಳಗಡೆ ಎಸಿ ಜತೆ ಮನರಂಜನೆಗಾಗಿ ಟಿ.ವಿ ಸೌಲಭ್ಯವಿದೆ.

DC Lounge XL - Super Luxury Bus

ಪ್ಯಾಸೆಂಜರ್ ಕ್ಯಾಬಿನ್‌ನ ಎರಡು ಬದಿಗಳಲ್ಲೂ ಟಿ.ವಿ ಸೌಲಭ್ಯವಿದ್ದು, ಬಸ್ ಸಂಚಾರದ ವೇಳೆ ಚಿತ್ರ ಮಂದಿರದಲ್ಲಿ ಕುಳಿತುಕೊಂಡು ಸಿನೆಮಾ ವೀಕ್ಷಿಸುವ ಅನುಭವ ನೀಡಲಿದೆ.

DC Lounge XL - Super Luxury Bus

ನಿಮಗೆ ಈ ಐಷಾರಾಮಿ ಬಸ್ ಇಷ್ಟವಾಗಿದ್ದರೆ ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.

More from DriveSpark

Article Published On: Thursday, January 31, 2013, 11:22 [IST]
English summary
DC Design, the vehicle customizing company appears to have penchant for building vehicles fit for stars. Soon after unveiling the DC first class super luxury bus, DC Design has revealed images of yet another luxury bus named as the Lounge XL
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+