ಕಾಣದಂತೆ ಮಾಯವಾದನು ನಮ್ಮ ಶಿವ..!

By Nagaraja

ನಿಮ್ಮಿಂದ 'ಡೋರ್' ಇಲ್ಲದ ಕಾರೊಂದನ್ನು ಊಹಿಸಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಕಾರೊಂದರ ನಿರ್ಮಾಣದಲ್ಲಿ ಅದರ ಬಾಗಿಲು ಮಹತ್ವದ ಪಾತ್ರ ವಹಿಸುತ್ತದೆ. ಅತಿ ದುಬಾರಿ ಕಾರುಗಳಿಂದ ಹಿಡಿದು ಅಗ್ಗದ ಬಜೆಟ್ ಕಾರು ವರೆಗೂ ಡೋರಿನ ವಿನ್ಯಾಸದಲ್ಲಿ ಹಲವು ವಿಧಗಳಿರುತ್ತವೆ. ಇದು ಕಾರಿನ ಬೆಲೆಗೆ ಅನುಸಾರವಾಗಿ ಇದರ ಶೈಲಿ ಪಡೆಯುತ್ತದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಅಂದ ಹಾಗೆ ಆಧುನಿಕತೆಯ ಸಂಕೇತವಾಗಿ ಕಾರು ಬಾಗಿಲಿನ ವಿನ್ಯಾಸದಲ್ಲೂ ಬದಲಾವಣೆ ಕಂಡುಬರುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆಯನ್ನು ಇಂದಿನ ಲೇಖನದಲ್ಲಿ ಕೊಡಲಿದ್ದೇವೆ.


ಕಾಣದಂತೆ ಮಾಯವಾದನು ನಮ್ಮ ಶಿವ...ಇದು ಪುನಿತ್ ರಾಜ್ ಕುಮಾರ್ ಅಭಿನಯದ ಹಾಡು. ಇದನ್ನು ಇಲ್ಲಿ ಉಲ್ಲೇಖಿಸಲಿರುವ ಪ್ರಮುಖ ಕಾರಣವೆಂದರೆ ನಾವಿಂದು ಪರಿಚಯಿಸಲಿರುವ ಕಾರಿನ ಬಾಗಿಲು ಸಹ ಒಂದೇ ಸೆಕೆಂಡುವಿನಲ್ಲಿ ಮಾಯವಾಗಲಿದೆ.

ಹೌದು, ಕೆಳಗಡೆ ಕೊಟ್ಟಿರುವ ವೀಡಿಯೋವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ ನೋಡಿ. ಜೇಟೆಕ್ ನಿರ್ಮಿಸಿರುವ ಈ 'ರಿಟ್ರಾಕ್ಟಬಲ್' ಅಥವಾ ಮಾಯಾವಾಗುವ ಈ ಕಾರು ಬಾಗಿಲು, ವಾಹನ ಜಗತ್ತಿನ ಹೊಸ ಅನ್ವೇಷಣೆಯಾಗಿದೆ.

Disappearing Car Door From Jatech

ಇದರಲ್ಲಿ ಹಲವಾರು ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗಿದೆ. ಇದರಲ್ಲಿ ಬಿ ಪಿಲ್ಲರ್ ಸೇರಿದಂತೆ ಮುಂಭಾಗ ಹಾಗೂ ಹಿಂಭಾಗದ ಬಾಗಿಲುಗಳು ಗಾಜು ಸಮೇತ ಕೆಳಮುಖವಾಗಿ ಚಲಿಸಲಿದೆ. ಇದು ಪ್ರಯಾಣಿಕರಿಗೆ ಸುಲಭವಾಗಿ ಹೊರ ಹಾಗೂ ಒಳ ಪ್ರವೇಶಿಸಲು ನೆರವಾಗಲಿದೆ.

ಅಷ್ಟೇ ಯಾಕೆ ಕಿಕ್ಕಿರಿದು ತುಂಬಿದ ಪಾರ್ಕಿಂಗ್ ಸಮಸ್ಯೆಯಿಂದಲೂ (ವೀಡಿಯೋ ಗಮನಿಸಿ) ಪಾರಾಗಲು ಇದರಿಂದ ಸಾಧ್ಯವಾಗಲಿದೆ. ಹಾಗೆಯೇ ಅಫಘಾತ ಸಂದರ್ಭಗಳಲ್ಲಿ ಕಾರಿನಿಂದ ಹೊರಬರಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ತಯಾರಕರು ಅಭಿಪ್ರಾಯಪಡುತ್ತಾರೆ.

ಆದರೆ ಈ ಅಂಶವನ್ನು ಮಾತ್ರ ಒಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಅಪಘಾತ ವೇಳೆ ಕಾರು ನಜ್ಜುಗುಜ್ಜಾದರೆ ಈ ತಂತ್ರಜ್ಞಾನ ಮುಖಾಂತರ ಹೊರ ಬರುವುದು ಸ್ವಲ್ಪ ಕಠಿಣದ ಸವಾಲೇ ಸರಿ. ವಿಷಯ ಏನೇ ಇರಲಿ ಈ ಹೊಸ ಡೋರ್ ತಂತ್ರಗಾರಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ವೀಡಿಯೋ ವೀಕ್ಷಿಸಿ ಅಭಿಪ್ರಾಯ ತಿಳಿಸಿ...
<center><iframe width="100%" height="450" src="//www.youtube.com/embed/AAtkoje4-eM?rel=0" frameborder="0" allowfullscreen></iframe></center>

More from DriveSpark

Article Published On: Tuesday, December 3, 2013, 15:07 [IST]
English summary
A futuristic, entirely different sort of car door that has the potential to revolutionize the way we get in and out of cars forever. It's called Retractable or ‘Disappearing' Car Door, developed by Jatech.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+