ಇನ್ನು ಡಬಲ್ ಡೆಕ್ಕರ್ ಬಸ್ಸಲ್ಲಿ ನಿಮ್ಮ ಮೀಲ್ಸ್ ರೆಡಿ
ಮುಂದಿನ ಕೆಲವು ದಿನಗಳಲ್ಲೇ ಈ ಹವಾನಿಯಂತ್ರಿತ ಡಬಲ್ ಡೆಕ್ಕರ್ ಬಸ್ ಪಯಣ ಆರಂಭಿಸಲಿದೆ. ಪ್ರಾದೇಶಿಕ ಸಾರಿಗೆ ಕಚೇರಿಯಿಂದ (ಆಟಿಒ) ಗ್ರೀನ್ ಸಿಗ್ನಲ್ ಪಡೆದಿರುವ ಈ ಚಲಿಸುವ ರೆಸ್ಟೋರೆಂಟ್ ಪ್ರಯಾಣಿಕರಿಗೆ ಇಷ್ಟವಾದ ಭೋಜನ ಸಿದ್ಧಪಡಿಸಲಿದೆ.
ಹೋಟೆಲ್ ಮರೈನ್ ಪ್ಲಾಜಾದಿಂದ ಸಂಚಾರ ಆರಂಭಿಸಲಿರುವ ಬಸ್ ನರಿಮಾನ್ ಪಾಯಿಂಟ್‌ನಿಂದ ಯು ಟರ್ನ್ ಪಡೆದುಕೊಂಡು ಮತ್ತೆ ಮರೈನ್ ಪ್ಲಾಜಾ ಬಳಿಗೆ ಕೊಂಡೊಯ್ಯಲಿದೆ. ಈ ಐಷಾರಾಮಿ ಬಸ್ ಪ್ರತಿ ಗಂಟೆಗೆ ಸರಾಸರಿ 20ರಿಂದ 25 ಕೀ.ಮೀ ವೇಗತೆಯಲ್ಲಿ ಸಂಚರಿಸಲಿದೆ.
ದೈನಂದಿನ ನಾಲ್ಕು ಸರ್ವಿಸ್ ಇರಲಿದ್ದು, ಒಂದು ಪ್ರಯಾಣದಲ್ಲಿ 40 ಮಂದಿಗೆ ಸಂಚರಿಸಬಹುದಾಗಿದೆ. ಹಾಗೆಯೇ 12 ಬಗೆಯ ಸ್ವಾದಿಷ್ಟ ಭೋಜನದ ಮೆನು ಲಭ್ಯವಿರಲಿದೆ.
ಹೋಟೆಲ್ ಮರೈನ್ ಪ್ಲಾಜಾ ಜತೆಗೂಡಿ ಟ್ರಿಪ್ ಆಯೋಜಿಸಲಾಗಿದ್ದು, ಆರಾಮದಾಯಕ ಸಂಚಾರದ ಜತೆ ಮನರಂಜನೆಗಾಗಿ ಎಲ್‌ಸಿಡಿ ಸೌಲಭ್ಯ ಕೂಡಾ ಏರ್ಪಡಿಸಲಾಗಿದೆ. ಈ ಡಬಲ್ ಡೆಕ್ಕರ್ ಬಸ್ಸಿನ ಒಳಗಡೆ ಕುಳಿತುಕೊಳ್ಳುವವರಿಗೆ ಎಸಿ ಸೌಲಭ್ಯ ಹಾಗೂ ಮೇಲ್ಗಡೆಯ ಸಂಚಾರರು ತೆರೆದ ಗಾಳಿ ಸವಿಯಬಹುದಾಗಿದೆ.
ಇನ್ನು ಮುಂಗಡವಾಗಿ ಬುಕ್ಕಿಂಗ್ ಸೇವೆ ಲಭ್ಯವಿದೆ. ಆದರೆ ಎಷ್ಟು ವೆಚ್ಚ ತಗುಲಲಿದೆ ಎಂಬುದರ ಬಗೆಗಿನ ಮಾಹಿತಿ ಮಾತ್ರ ಲಭ್ಯವಾಗಿಲ್ಲ. ಹಾಗೆಯೇ ಮುಂದಿನ ದಿನಗಳಲ್ಲಿ ಅಹಮದಾಬಾದ್, ಸೂರತ್ ಹಾಗೂ ಚೆನ್ನೈ ನಗರಗಳಿಗೂ ವಿಸ್ತರಿಸುವ ಯೋಜನೆಯನ್ನು ಹೊಂದಿದೆ.


Click it and Unblock the Notifications









