1 ಲೀಟರ್ ಇಂಧನದಲ್ಲಿ 1,000 ಕೀ.ಮೀ. ಸಾಗುವ ಕಾರು
ದುಬೈನ ಎಂಜಿನಿಯರ್ ವಿದ್ಯಾರ್ಥಿಗಳ ತಂಡವೊಂದು ನೂತನ ಕಾರೊಂದನ್ನು ಅಭಿವೃದ್ದಿಪಡಿಸಿದ್ದು, ಇದು ಒಂದು ಲೀಟರ್ ಇಂಧನದಲ್ಲಿ 1000 ಕೀ.ಮೀ. ತನಕ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಈ ಹಗುರ ಭಾರದ ಕಾರಿಗೆ 'ಇಕೊ ದುಬೈ 1' ಎಂದು ಹೆಸರಿಸಲಾಗಿದ್ದು, ಕಾರಿನ ವಿನ್ಯಾಸ ಅಂತಿಮ ಹಂತದಲ್ಲಿದ್ದು, ಟೆಸ್ಟಿಂಗ್ ಕಾರ್ಯ ಮುಂದಿನ ಎರಡು ವಾರಗಳಲ್ಲಿ ಆರಂಭವಾಗಲಿದೆ.
ದುಬೈ ಮೆನ್ಸ್ ಕಾಲೇಜ್‌ನ ಹೈಯರ್ ಕಾಲೇಜ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಎರಡು ವರ್ಷಗಳಷ್ಟು ಕಾಲ ನಡೆಸಿದ ನಿರಂತರ ಅಧ್ಯಯನದ ಬಳಿಕ ನೂತನ ಪರಿಸರ ಸ್ನೇಹಿ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಈ 25 ಕೆ.ಜಿ ತೂಕದ ಕಾರು ತಲಾ ಅರ್ಧ ಮೀಟರ್‌ಗಳಷ್ಟು ಅಗಲ ಹಾಗೂ ಎತ್ತರ ಮತ್ತು ಎರಡು ಮೀಟರ್ ಉದ್ದದ ಸುತ್ತಳತೆಯನ್ನು ಹೊಂದಿದೆ.
ಪ್ರಸ್ತುತ ಕಾರು ಜುಲೈ ತಿಂಗಳಲ್ಲಿ ದುಬೈನಲ್ಲೇ ರೂಪಿಸಲಾದ ಇತರ ನಾಲ್ಕು ಕಾರುಗಳೊಂದಿಗೆ ಸ್ಪರ್ಧೆಗಿಳಿಯಲಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಅಹ್ಮದ್ ಖಾಮೀಸ್ ಅಲ್ ಸುವೈದಿ, ಪೆಟ್ರೋಲ್ ಶಾಶ್ವತವಾಗಿರುವುದಿಲ್ಲ. ಮುಂದೊಂದು ದಿನ ಪೆಟ್ರೋಲ್ ಕ್ಷಾಮ ಕಂಡುಬರಲಿದೆ. ಈ ನಿಟ್ಟಿನಲ್ಲಿ ದುಬೈ ಭವಿಷ್ಯವನ್ನು ರೂಪಿಸಲಾಗುತ್ತಿದೆ ಎಂದಿದ್ದಾರೆ.
ಕೌಲಾಂಲಪುರದಲ್ಲಿ ಜುಲೈ 4ರಿಂದ 7ರ ವರೆಗೆ ನಡೆಯಲಿರುವ ಶೆಲ್ ಇಕೊ ಮ್ಯಾರಥಾನ್‌ನಲ್ಲಿ ಈ ನೂತನ ಕಾರು ಪ್ರದರ್ಶನವಾಗಲಿದೆ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಎಲೆಕ್ಟ್ರಿಕ್, ಸೋಲಾರ್ ಹಾಗೂ ಹೈಬ್ರಿಡ್ ತಂತ್ರಜ್ಞಾನವನ್ನು ಆಳವಡಿಸಿದ್ದಾರೆ. ಅಂದ ಹಾಗೆ ಫ್ರಾನ್ಸ್‌ನ ಪೊಲಿಟೆಕ್ ನ್ಯಾಂಟ್ಸ್ ಯುನಿವರ್ಟಿಸಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಕಾರು 4,900 ಕೀ.ಮೀ. ಸಂಚರಿಸಿರುವುದು ಈ ವರೆಗಿನ ದಾಖಲೆಯಾಗಿದೆ.
ಇವನ್ನೂ ಓದಿ: ನಿಮ್ಮ ಗರ್ಲ್ ಫ್ರೆಂಡ್ ಇಷ್ಟಪಡಬಹುದಾದ ಟಾಪ್ 5 ಕಾರು


Click it and Unblock the Notifications









