ಇಕೊಸ್ಪೋರ್ಟ್ ಬಲ; ಫೋರ್ಡ್ ಮಾರಾಟ ಏರಿಕೆ
ಇತ್ತೀಚೆಗಷ್ಟೇ ಲಾಂಚ್ ಆಗಿದ್ದ ಇಕೊಸ್ಪೋರ್ಟ್ ಎಸ್‌ಯುವಿ ಕಾರಿನ ಬಲದೊಂದಿಗೆ ಅಮೆರಿಕ ಮೂಲದ ಫೋರ್ಡ್ ಕಂಪನಿಯು 2013 ಜೂನ್ ತಿಂಗಳ ಮಾರಾಟದಲ್ಲಿ ಭಾರಿ ಏರಿಕೆ ಗಳಿಸಿದೆ.
ಒಟ್ಟಾರೆಯಾಗಿ 2013 ಜೂನ್ ತಿಂಗಳ ಮಾರಾಟದಲ್ಲಿ ಫೋರ್ಡ್ ಶೇಕಡಾ 20.46ರಷ್ಟು ಏರಿಕೆ ದಾಖಲಿಸಿದೆ. ಈ ಅವಧಿಯಲ್ಲಿ ಕಂಪನಿಯು 8,771 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ ದೇಶಿಯ ಮಾರುಕಟ್ಟೆಯಲ್ಲಿ 7,145 ಯನಿಟ್ ಮಾರಾಟ ದಾಖಲಾಗಿದೆ. ಕಳೆದ ತಿಂಗಳಷ್ಟೇ ಬಿಡುಗಡೆಗೊಂಡಿದ್ದ ಇಕೆಸ್ಪೋರ್ಟ್ ಫೋರ್ಡ್ ಮಾರಾಟವನ್ನು ಶೇಕಡಾ 14ರಷ್ಟು ವೃದ್ಧಿಸುವಲ್ಲಿ ನೆರವಾಗಿತ್ತು.
ಕಳೆದ ವರ್ಷ ಇದೇ ಅವಧಿಗೆ 6,267 ಯುನಿಟ್ ಮಾತ್ರ ಮಾರಾಟ ಮಾಡುವಲ್ಲಿ ಫೋರ್ಡ್ ಯಶಸ್ವಿಯಾಗಿತ್ತು. ಇನ್ನು ರಫ್ತು ಮಾರಾಟ ಸಂಖ್ಯೆ ಗಮನಿಸಿದಾಗಲೂ ಕಳೆದ ವರ್ಷ ಇದ್ದಿದ್ದ 1024 ಯುನಿಟ್‌ಗಳಿಂದ 1626 ಯುನಿಟ್‌ಗಳಿಗೆ ಏರಿಕೆ ಕಂಡುಬಂದಿದೆ. ಈ ಮೂಲಕ ಶೇಕಡಾ 59ರಷ್ಟು ವೃದ್ಧಿದರ ದಾಖಲಿಸಿದೆ.
ಜೂನ್ ತಿಂಗಳಲ್ಲಿ ಬಿಡುಗಡೆಗೊಂಡಿದ್ದ ಇಕೊಸ್ಪೋರ್ಟ್ ಒಟ್ಟು 10 ವೆರಿಯಂಟ್‌ಗಳಲ್ಲಿ ಲಭ್ಯವಿದ್ದು, ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಬೆಂಗಳೂರು ಎಕ್ಸ್ ಶೋ ರೂಂ ದರ 5.59 ಲಕ್ಷ ರು.ಗಳಾಗಿವೆ.


Click it and Unblock the Notifications









