ಬೇಲೂರು ಅಪಘಾತ; ಬೈಕ್ ತಪ್ಪಿಸಲು ಹೋಗಿ ದುರಂತ?

By Nagaraja

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಮಂಗಳವಾರ ಬೆಳಿಗ್ಗೆ ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಬಿದ್ದ ಪರಿಣಾಮ ಎಂಟು ಜನ ಮೃತಪಟ್ಟ ದಾರುಣ ದುರಂತ ವಾರ್ತೆ ವರದಿಯಾಗಿತ್ತು. ಘಟನೆಯಲ್ಲಿ 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಬೈಕ್ ತಪ್ಪಿಸಲು ಹೋಗಿ ದುರಂತ..?
ಈ ವೇಳೆ ಪ್ರಾಥಮಿಕ ತನಿಖಾ ವೇಳೆ ಮೋಟಾರ್ ಬೈಕ್ ಬಚಾವ್ ಮಾಡಲು ಹೋಗಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ.


ಚಾಲಕನ ನಿರ್ಲಕ್ಷ್ಯ, ರಾಡರ್ ತುಂಡು...
ಇನ್ನು ಕೆಲವು ಮೂಲಗಳ ಮಾಹಿತಿ ಪ್ರಕಾರ ಚಾಲಕನ ನಿರ್ಲಕ್ಷವೇ ಬಸ್ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಸ್ ಸ್ಟೇರಿಂಗ್ ಜಾಮ್ ಆಗಿ ಟೈರ್ ಎಂಡ್ ರಾಡರ್ ತಂಡಾಗಿದ್ದು ಕಾರಣ ಎನ್ನಲಾಗುತ್ತಿದೆ.

ಹಳೆ ಬಸ್ಸು...
ಅಪಘಾತಕ್ಕೀಡಾದ ಕೆಎಸ್‌ಆರ್‌ಟಿಸಿ ಬಸ್ ಸಕಲೇಶಪುರ ಡಿಪೋ ಸಾರಿಗೆ ಸಂಸ್ಥೆಗೆ ಸೇರಿದ್ದಾಗಿದೆ. ಈಗಾಗಲೇ 7.06 ಲಕ್ಷ ಕೀ.ಮೀ. ಓಡಿರುವ ಈ ಬಸ್ಸು ಮಾರ್ಗ ಮಧ್ಯೆ ಹಲವು ಬಾರಿ ಕೆಟ್ಟು ಹೋಗಿರುವುದಾಗಿ ಪ್ರಯಾಣಿಕರು ದೂರಿದ್ದಾರೆ.

ತಡೆಗೋಡೆ ಇಲ್ಲ...
ಒಂದೂವರೆ ಕೀ.ಮೀ. ಉದ್ದಕ್ಕೂ ಹರಡಿರುವ ವಿಷ್ಣುಸಮುದ್ರ ಕೆರೆಗೆ ತಡೆಗೋಡೆ ನಿರ್ಮಿಸದಿರುವುದು ದುರಂತಕ್ಕೆ ಹೇತುವಾಯಿತು ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.

ಕಿಕ್ಕಿರಿದ ಬಸ್ಸು...
ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ 100ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಗಾಯಾಳುಗಳಲ್ಲಿ ಹೆಚ್ಚಿನವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

3 ಲಕ್ಷ ರು. ಪರಿಹಾರ...
ಈ ನಡುವೆ ಆಸ್ಪತ್ರೆಗಳಿಗೆ ಭೇಟಿ ನೀಡಿರುವ ರಾಮಲಿಂಗಾರೆಡ್ಡಿ ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ಹಾಗೆಯೇ ಗಾಯಾಳುಗಳ ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ.

More from DriveSpark

Article Published On: Wednesday, July 24, 2013, 12:41 [IST]
English summary
As many as eight persons, including two women, died and 70 were injured when a KSRTC bus fell into the Vishnusagara tank at Belur on Tuesday morning
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+