ಬಜೆಟ್ ಬಳಿಕ ಎಲೆಕ್ಟ್ರಿಕ್ ಕಾರುಗಳು ಅಗ್ಗ?
ಕೇಂದ್ರ ಸರಕಾರದ 2013-14ನೇ ಸಾಲಿನ ಬಹುನಿರೀಕ್ಷಿತ ಬಜೆಟ್ ಮೇಲೆ ಎಲ್ಲರು ಗಮನ ಕೇಂದ್ರಿತವಾಗಿದೆ. ಇದರಂತೆ ಆಟೋಮೊಬೈಲ್ ರಂಗವು ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದೆ. ದೇಶದಲ್ಲಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿರುವ ಕೇಂದ್ರ ಸರಕಾರವು ಸಬ್ಸಿಡಿ ದರ ಘೋಷಿಸಲು ಸನ್ನದ್ಧವಾಗಿದೆ.
ಒಂದು ವೇಳೆ ಸರಕಾರವು ಸಬ್ಸಿಡಿ ನೀಡಿದರೆ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳು ಅಗ್ಗವಾಗಲಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿಯಂತೆ ಮುಂದಿನ ಆರ್ಥಿಕ ಸಾಲಿನಲ್ಲಿ ವಿದ್ಯುತ್ ಚಾಲಿತ ಕಾರುಗಳಿಗೆ 1.5 ಲಕ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ರು. 50,000ದಷ್ಟು ಸಬ್ಸಿಡಿ ನೀಡುವ ಯೋಜನೆಯಿದೆ.
ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳ ಮಾರಾಟವನ್ನು ಉತ್ತೇಜಿಸುವ ಸಲುವಾಗಿ 300ರಿಂದ 500 ಕೋಟಿ ರುಪಾಯಿಗಳ ಹೆಚ್ಚುವರಿ ಮೂಲಧನ ಘೋಷಿಸಲು ಹಣಕಾಸು ಸಚಿವಾಲಯದ ಪರೀಶೀಲನೆಯಲ್ಲಿದೆ. ಈ ಬೆಳವಣಿಗೆ ಜನವರಿ 9ರಂದು ಪ್ರಧಾನಿ ಮನಮೋಹನ್ ಸಿಂಗ್ ಅನಾವರಣ ಮಾಡಲಿರುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಮಿಷನ್ ಯೋಜನೆಗಿಂತ ಮೊದಲು ಕಂಡುಬಂದಿದೆ.
ಇಂಧನ ಚಾಲಿತ ವಾಹನಗಳಿಗೆ ಹೆಚ್ಚು ಅವಲಂಬಿಸುತ್ತಿರುವುದರಿಂದ ಮುಂದಿನ ಎಂಟು ವರ್ಷಗಳಲ್ಲಿ ವಿದ್ಯುತ್ ಹಾಗೂ ಹೈಬ್ರಿಡ್ ವಾಹನಗಳ ಮೇಲೆ ರು. 22,500 ಕೋಟಿ ಹೂಡಿಕೆ ಮಾಡಲಾಗುವುದು. ಈ ಪೈಕಿ 13,000ದಿಂದ 14,00ದ ಕೋಟಿ ರು. ಸರಕಾರವೇ ಅನುದಾನ ನೀಡಲಿದ್ದು ಉಳಿದ ಮೊತ್ತವನ್ನು ಆಟೋಮೊಬೈಲ್ ರಂಗ ಹೂಡಿಕೆ ಮಾಡಲಿದೆ.
ಅಂದ ಹಾಗೆ 2020ರ ವೇಳೆಗೆ ದೇಶದಲ್ಲಿ ಏಳು ಮಿಲಿಯನ್ ಇಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಳಿಸುವ ಮಹತ್ವಾಕಾಂಕ್ಷೆ ಯೋಜನೆಯನ್ನು ಸರಕಾರ ಹೊಂದಿದೆ. ಪ್ರಸ್ತುತ ಸರಕಾರದ ರಾಷ್ಟ್ರೀಯ ಮಿಷನ್ ಯೋಜನೆ ಪ್ರಾಯೋಗಿಕವಾಗಿ ಅನ್ನಿಸುತ್ತಿಲ್ಲವಾದರೂ ಈ ಬಗ್ಗೆ ಸ್ಪಷ್ಟ ಯೋಜನೆಯನ್ನು ಹೊಂದಿದೆ. ಈ ಮೂಲಕ ವಿದ್ಯುತ್ ಚಾಲಿತ ಕಾರು ಹಾಗೂ ಬೈಕ್ ಮಾರಾಟವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ.

ಎಲೆಕ್ಟ್ರಿಕ್ ಕಾರು
ಮುಂದಿನ ಬಜೆಟ್‌ನಲ್ಲಿ ಸಬ್ಸಿಡಿ ದರ ಘೋಷಿಸಿದರೆ ವಿದ್ಯುತ್ ಚಾಲಿತ ವಾಹನಗಳು ಮತ್ತಷ್ಟು ಅಗ್ಗವಾಗಲಿದೆ. ಇದು ಗ್ರಾಹಕರನ್ನು ಹೆಚ್ಚು ಆಕರ್ಷಿಸಲಿದೆ.

ಎಲೆಕ್ಟ್ರಿಕ್ ಕಾರು
ಇಂಧನ ದರ ಗಣನೀಯವಾಗಿ ಏರುತ್ತಿರುವುದರಿಂದ ಪರಿಸರ ಸ್ನೇಹಿ ವಿದ್ಯುತ್ ವಾಹನಗಳು ಉತ್ತೇಜಿಸಲು ಸರಕಾರ ಮುಂದಾಗಿದೆ.

ಎಲೆಕ್ಟ್ರಿಕ್ ಕಾರು
2011-12ರ ಸಾಲಿನಲ್ಲಿ ಒಟ್ಟು 130,000 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ ಎಂದು ಎಲೆಕ್ಟ್ರಿಕ್ ವಾಹನಗಳ ಲಾಬಿ ಸಂಸ್ಥೆ ತಯಾರಕರು ತಿಳಿಸಿದ್ದಾರೆ. ಹಾಗೆಯೇ ಮುಂದಿನ ಆರ್ಥಿಕ ಸಾಲಿನಲ್ಲಿ 120,000 ದ್ವಿಚಕ್ರ ವಾಹನ ಹಾಗೂ 12,000 ಕಾರುಗಳ ಮಾರಾಟದ ಗುರಿ ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್
ಅಂದ ಹಾಗೆ ಸರಕಾರ ಸಬ್ಸಿಡಿ ಷೋಷಿಸಿದರೆ ಮಹೀಂದ್ರ ರೇವಾ ಕಾರುಗಳು 1.5 ಲಕ್ಷ ರು. ಹಾಗೂ ಎಲೆಕ್ಟ್ರಿಕ್ ಸ್ಕೂಟರ್‌ಗಳು 30 ಸಾವಿರ ಅಸುಪಾಸಿನಲ್ಲಿ ದೊರಕುವ ಸಾಧ್ಯತೆಯಿದೆ.

ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ಸ್ಕೂಟರ್



Click it and Unblock the Notifications








