ಎಲೆಕ್ಟ್ರಿಕ್ ಕಾರುಗಳ ದೈತ್ಯ 'ಟೆಸ್ಲಾ' ನೀಡಿದ ಈ ಸುಳಿವು ನಿಮಗೆ ಖುಷಿ ಕೊಡುತ್ತೆ

ಜಗತ್ ಪ್ರಸಿದ್ಧ ಬ್ಯಾಟರಿ ಚಾಲಿತ ಕಾರು ತಯಾರಕ ಕಂಪನಿ 'ಟೆಸ್ಲಾ' ಮೋಟರ್ಸ್ ಭಾರತದ ಮಾರುಕಟ್ಟೆಗೆ ಯಾವಾಗ ಪ್ರವೇಶ ಪಡೆಯುತ್ತೆ ಎನ್ನುವುದು ಖಚಿತವಾಗಿದೆ.

By Girish

ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತವನ್ನು ಈ ವರ್ಷ ಪ್ರವೇಶ ಪಡೆಯತ್ತೆ ಎಂದು ಬಹಳ ದಿನಗಳಿಂದ ಗುಸು ಗುಸು ಪಿಸು ಪಿಸು ನೆಡೆಯುತ್ತಲೇ ಇತ್ತಾದರೂ ಖಚಿತವಾಗಿರಲಿಲ್ಲ. ಆದ್ರೆ ನಾವು ಈಗ ಹೇಳುವ ವಿಷಯ ನಿಮಗೆ ಖುಷಿ ಕೊಡೋದು ಗ್ಯಾರಂಟಿ.

ಎಲೆಕ್ಟ್ರಿಕ್ ಕಾರುಗಳ ದೈತ್ಯ 'ಟೆಸ್ಲಾ' ನೀಡಿದ ಈ ಸುಳಿವು ನಿಮಗೆ ಖುಷಿ ಕೊಡುತ್ತೆ

ಹೌದು, ಟೆಸ್ಲಾ ಭಾರತಕ್ಕೆ ಬರ್ತಿದೆ, ಯಾವಾಗ ಅಂತೀರಾ ? ಬಹಳ ದಿನ ಕಾಯಬೇಕಾಗಿಲ್ಲ ಸ್ನೇಹಿತರೆ, ಇದೆ ಬೇಸಿಗೆಯಲ್ಲಿ ನಿಮ್ಮ ಮನೆಯ ಸದಸ್ಯ ಆಗೋದ್ರಲ್ಲಿ ಸಂದೇಹ ಬೇಡ. ಇದನ್ನು ಖಚಿತಪಡಿಸಿದವರು ಬೇರೆ ಯಾರು ಅಲ್ಲ, ಸ್ವತಃ ಎಲೆಕ್ಟ್ರಿಕ್ ಕಾರಿನ ಉತ್ಪಾದಕ ಟೆಸ್ಲಾ ಕಂಪನಿಯ ಮಾಲೀಕ ಎಲೋನ್‌ ಮಸ್ಕ್‌.

ಎಲೆಕ್ಟ್ರಿಕ್ ಕಾರುಗಳ ದೈತ್ಯ 'ಟೆಸ್ಲಾ' ನೀಡಿದ ಈ ಸುಳಿವು ನಿಮಗೆ ಖುಷಿ ಕೊಡುತ್ತೆ

ಈ ವಿಚಾರವಾಗಿ ಎಲೋನ್‌ ಮಸ್ಕ್‌ ಟ್ವೀಟ್ ಮಾಡಿದ್ದು, ಬಹುಶಃ ಈ ವರ್ಷದ ಮಧ್ಯಂತರದಲ್ಲಿ ಟೆಸ್ಲಾದ ಮೂರನೇ ಆವೃತಿ 'ಬಿಡುಗಡೆಗೊಳ್ಳಬಹುದು' ಎಂಬ ಸೂಚನೆ ನೀಡಿದ್ದು ಆಟೋ ರಂಗದಲ್ಲಿ ದೊಡ್ಡ ಸಂಚಲನ ಉಂಟು ಮಾಡಿದೆ.

ಎಲೆಕ್ಟ್ರಿಕ್ ಕಾರುಗಳ ದೈತ್ಯ 'ಟೆಸ್ಲಾ' ನೀಡಿದ ಈ ಸುಳಿವು ನಿಮಗೆ ಖುಷಿ ಕೊಡುತ್ತೆ

ಅವರ ಟ್ವೀಟ್ ಓದಿದರೆ ಇನ್ನು ಈ ಬರುವಿಕೆ ಖಚಿತವಾಗಿಲ್ಲ ಎಂಬುದು ಖಾತ್ರಿಯಾಗುತ್ತದೆ. ಅದೇನೇ ಇರಲಿ ಒಟ್ಟಿನಲ್ಲಿ ಟೆಸ್ಲಾ ಪ್ರಿಯರಿಗೆ ಈ ಟ್ವೀಟ್ ಭರವಸೆಯ ಮಿಂಚು ಎನ್ನಬಹುದು.

ಎಲೆಕ್ಟ್ರಿಕ್ ಕಾರುಗಳ ದೈತ್ಯ 'ಟೆಸ್ಲಾ' ನೀಡಿದ ಈ ಸುಳಿವು ನಿಮಗೆ ಖುಷಿ ಕೊಡುತ್ತೆ

ಎಲೋನ್‌ ಮಸ್ಕ್‌ ಈ ಮೊದಲೇ ಹೇಳಿದಂತೆ " ನಾವು ಮೂರನೇ ಆವೃತಿ ಬಿಡುಗಡೆಗೊಳಿಸುವ ಮೊದಲು ಭಾರತದ ಆಟೋ ರಂಗವನ್ನು ಅಧ್ಯಯನ ಮಾಡಲಿದ್ದು, ನಮ್ಮ ಜಾಲವನ್ನು ವಿಸ್ತರಿಸಿಕೊಳ್ಳಲಿದ್ದೇವೆ" ಎಂಬ ನೇರ ಮಾತುಗಳು ಭಾರತದ ಮಾರುಕಟ್ಟೆಗೆ ಅವರೆಷ್ಟು ಮಹತ್ವ ನೀಡುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ಎಲೆಕ್ಟ್ರಿಕ್ ಕಾರುಗಳ ದೈತ್ಯ 'ಟೆಸ್ಲಾ' ನೀಡಿದ ಈ ಸುಳಿವು ನಿಮಗೆ ಖುಷಿ ಕೊಡುತ್ತೆ

ಎರಡು ಸಾವಿರಕ್ಕೂ ಅಧಿಕ ಪೇಟೆಂಟ್‌ ಹೊಂದಿರುವ ಟೆಸ್ಲಾ ಕಾರು ಈ ವರ್ಷ ಭಾರತದ ರಸ್ತೆಗಳಲ್ಲಿ ಸಂಚಲನ ಮೂಡಿಸಲಿದೆ ಎಂಬ ಸುದ್ದಿ ನಿಜವಾಗುತ್ತ ಕಾದು ನೋಡಬೇಕಿದೆ.

ಎಲೆಕ್ಟ್ರಿಕ್ ಕಾರುಗಳ ದೈತ್ಯ 'ಟೆಸ್ಲಾ' ನೀಡಿದ ಈ ಸುಳಿವು ನಿಮಗೆ ಖುಷಿ ಕೊಡುತ್ತೆ

ಇನ್ನು ಮೂರನೇ ಆವೃತ್ತಿಯ ಕಾರಿನ ಬಗ್ಗೆ ಹೇಳುವುದಾದರೆ ಕಾರಿನ ಬೆಲೆ ಸುಮಾರು 23 ಲಕ್ಷ ರೂ. ಇರಲಿದೆ ಎನ್ನಲಾಗಿದೆ. ಆದ್ರೆ ಭಾರತದ ಮಟ್ಟಿಗೆ ಇದು ಕೊಂಚ ದುಬಾರಿ ಎನ್ನಬಹುದು.

ಎಲೆಕ್ಟ್ರಿಕ್ ಕಾರುಗಳ ದೈತ್ಯ 'ಟೆಸ್ಲಾ' ನೀಡಿದ ಈ ಸುಳಿವು ನಿಮಗೆ ಖುಷಿ ಕೊಡುತ್ತೆ

ಪೆಟ್ರೋಲ್ ಮತ್ತು ಡೀಸೆಲ್ ಕಾರಿನ ಬಗ್ಗೆ ಒಲವು ತೋರಿಸುವ ವರ್ಗ ಭಾರತದಲ್ಲಿ ದೊಡ್ಡ ಸಂಖ್ಯೆ ಇದೆ, ಆದ್ರೆ ಎಲೆಕ್ಟ್ರಿಕ್ ಕಾರಿನ ಬಗ್ಗೆ ಅಷ್ಟಕ್ಕೇ ಅಷ್ಟೇ ಎನ್ನುವ ಮಂದಿಗೇನು ಕಮ್ಮಿ ಇಲ್ಲ. ಆದರೂ ಸಹ ಭಾರತದಲ್ಲಿ ಎಲೆಕ್ಟ್ರಿಕ್ ಮಾದರಿಯ ಕಾರುಗಳನ್ನು ಉತ್ಪಾದನೆ ಮಾಡುವ ಸಾಹಸಕ್ಕೆ ಕೈಹಾಕಿದ್ದು ಮಹೀಂದ್ರಾ ಮಾತ್ರ.

ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹೋಂಡಾ ಹೊರತಂದಿರುವ ಅಕಾರ್ಡ್ ಹೈಬ್ರಿಡ್ ಕಾರಿನ ಎಕ್ಸ್ಕ್ಲೂಸಿವ್ ಫೋಟೋಗಳನ್ನು ನೋಡಿ.

Most Read Articles

Kannada
English summary
Elon Musk has tweeted saying Tesla could enter India during the second half of 2017, when asked about the company’s entry to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X