2013 ಅತ್ಯಂತ ಪವರ್‌ಫುಲ್ ಬ್ರಾಂಡ್ - ಫೆರಾರಿ
ಎಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿರುವ ಫೆರಾರಿ 2013ನೇ ಸಾಲಿನ ಶಕ್ತಿಶಾಲಿ ಬ್ರಾಂಡ್ ಆಗಿ ಹೊರಹೊಮ್ಮಿದೆ. ಗ್ಲೋಬಲ್ 500 ನಡೆಸಿರುವ ಜಾಗತಿಕ ಸಮೀಕ್ಷಾ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಪ್ರಮುಖ ಕಂಪನಿಗಳ ಹಣಕಾಸು ಹಾಗೂ ಬ್ರಾಂಡ್ ನಿರ್ವಹಣೆಯನ್ನು ವಿಶ್ಲೇಷಣೆ ಮಾಡುತ್ತಿರುವ ಗ್ಲೋಬಲ್ 500 ಸರ್ವೆ, ಫೆರಾರಿಯನ್ನು ವಿಶ್ವದ ಅತಿ ಶ್ರೇಷ್ಠ ಬ್ರಾಂಡ್ ಆಗಿ ಪರಿಗಣಿಸಿದೆ. ಈ ಮೂಲಕ ಇಟಲಿ ಕಾರು ತಯಾರಕ ಸಂಸ್ಥೆಯಾದ ಫಿಯೆಟ್ ಒಡೆತನದಲ್ಲಿರುವ ಫೆರಾರಿ ಉತ್ತಮ ರೇಟಿಂಗ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಜರ್ಮನಿಯ ಬಿಎಂಡಬ್ಲ್ಯು, ಆಡಿ ಹಾಗೂ ಫೋಕ್ಸ್‌ವ್ಯಾಗನ್‌ಗಳಂತಹ ಪ್ರತಿಷ್ಠಿತ ಕಾರು ತಯಾರಕ ಸಂಸ್ಥೆಗಳನ್ನು ಫೆರಾರಿ ಹಿಂದಿಕ್ಕಿದೆ. ಕಂಪನಿಗಳ ಅಂತರ, ಗ್ರಾಹಕ ಪ್ರತಿ ಆದಾಯ, ಜಾಹೀರಾತು ಹಾಗೂ ಮಾರ್ಕೆಟಿಂಗ್ ಆಧಾರದಲ್ಲಿ ಈ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಹಾಗಿದ್ದರೂ ಇಂತಹ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಫೆರಾರಿ ಪೈಪೋಟಿ ಸಾಧ್ಯವಿಲ್ಲದಿದ್ದರೂ ಬ್ರಾಂಡ್ ಹೆಸರು ಹಾಗೂ ನಿಷ್ಠಾವಂತಿಕೆಯಲ್ಲಿ ತನ್ನ ವರ್ಚಸ್ಸು ಕಾಪಾಡಿಕೊಂಡು ಬಂದಿದೆ.

ಅತ್ಯಂತ ಶಕ್ತಿಶಾಲಿ ಬ್ರಾಂಡ್ ಫೆರಾರಿ

Ferrari 250 GTO
2012ನೇ ಸಾಲಿನ ಮೊದಲ ಒಂಬತ್ತು ತಿಂಗಳಲ್ಲಿ ಫೆರಾರಿ ನಿವ್ವಳ ಲಾಭಾಂಶವು 7.6ರಷ್ಟು ಏರಿಕೆ ಕಾಣುವ ಮೂಲಕ 1104 ಕೋಟಿ ತಲುಪಿತ್ತು. ಕಂಪನಿಯ ಒಟ್ಟು ವಹಿವಾಟು 12,781 ಕೋಟಿ ರು.ಗಳಾಗಿದ್ದವು.

Ferrari 250 TR
ಟೆಸ್ಟ ರೋಸಾ ಫೆರಾರಿಯ ಅತಿ ದುಬಾರಿ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಕಳೆದ ವರ್ಷ ನಡೆದ ಹರಾಜಿನಲ್ಲಿ 16.4 ಮಿಲಿಯನ್ ರುಪಾಯಿಗಳಿಗೆ ಹರಾಜಾಗಿತ್ತು.

599 GTB Fiorano
2006ರಲ್ಲಿ 599 ಜಿಟಿಬಿ ಮೊದಲ ಬಾರಿ ಅನಾವರಣಗೊಂಡಿತ್ತು. ಇದು ವಿ12 ಪವರ್‌ಫುಲ್ ಎಂಜಿನ್ ಹಾಗೂ ಆಕರ್ಷಕ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಪ್ರಸ್ತುತ ಕಾರು ಇವೊದಿಂದ ವರ್ಷದ ಕಾರು ಹಾಗೂ ಟಾಪ್ ಗೇರ್ ಮ್ಯಾಗಜೀನ್‌ನಿಂದ ವರ್ಷದ ಸೂಪರ್ ಕಾರು ಪ್ರಶಸ್ತಿಗೆ ಪಾತ್ರವಾಗಿತ್ತು.

Ferrari 458 Italia
ಫೆರಾರಿ ಎಫ್430 ಉತ್ತರಾಧಿಕಾರಿ ಆಗಿರುವ 450 ಸ್ಟೈಲಿಷ್ ಲುಕ್ ಹೊಂದಿದೆ. ವರ್ಷದ ಕಾರು, ವರ್ಷದ ಸೂಪರ್ ಕಾರು ಸೇರಿದಂತೆ ಅನೇಕ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

Ferrari F12berlinetta
ಕಳೆದ ವರ್ಷ ಜಿನೆವಾ ಮೋಟಾರ್ ಶೋದಲ್ಲಿ ಲಾಂಚ್ ಆಗಿದ್ದ ಪ್ರಸ್ತುತ ಕಾರು 599 ಆವೃತ್ತಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಹಾಗೆಯೇ ಅತ್ಯುತ್ತಮ ಇಂಧನ ಕ್ಷಮತೆಯನ್ನು ಹೊಂದಿದೆ.

Ferrari Enzo
ಎನ್ಜೊ ಉಲ್ಲೇಖಿಸದಿದ್ದಲ್ಲಿ ಫೆರಾರಿ ಪಟ್ಟಿ ಅಪೂರ್ಣವೆನಿಸಲಿದೆ. ಫೆರಾರಿ ಸಂಸ್ಥಾಪಕ ಎನ್ಜೊ ಫೆರಾರಿ ಸ್ಮರಣಾರ್ಥ ತಯಾರಿಸಲಾದ ಎನ್ಜೊ ತಂತ್ರಗಾರಿಕೆಯಲ್ಲಿ ಮುಂದುವರಿಯದ ಸೂಪರ್ ಕಾರು ಆಗಿದೆ. 2002ನೇ ಸಾಲಿನಲ್ಲಿ ಬಿಡುಗಡೆಯಾದ ಪ್ರಸ್ತುತ ಕಾರು ಬ್ಲೂಮ್‌ಬರ್ಗ್ ಬ್ಯುಸಿನೆಸ್ ವೀಕ್‌ನ 'Fifty Ugliest Cars of the Past 50 Years' ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

Ferrari FXX
ಫೆರಾರಿಯಿಂದ ಆಯೋಜನೆಯಾಗುವ ಅತಿ ವಿಶೇಷ ಎಫ್‌ಎಕ್ಸ್‌ಎಕ್ಸ್ ಕಾರ್ಯಕ್ರಮದಲ್ಲಿ ಮಾಲಿಕರು ಕಾರನ್ನು ಡ್ರೈವ್ ಮಾಡುತ್ತಾರೆ.


Click it and Unblock the Notifications








