ಫಿಯೆಟ್ ಲಿನಿಯಾ, ಪುಂಟೊ ಅಬ್ಸಲ್ಯೂಟ್ ಎಡಿಷನ್ ಲಾಂಚ್
ಈ ಬಾರಿಯ ದಸರಾ ಅಥವಾ ದೀಪಾವಳಿ ಹಬ್ಬದ ವೇಳೆಯಲ್ಲಿ ಫಿಯೆಟ್ ಕಾರೊಂದನ್ನು ಖರೀದಿಸುವ ಅವಕಾಶದಿಂದ ನೀವು ವಂಚಿತರಾಗಿದ್ದಲ್ಲಿ ನಿರಾಸೆಯಾಗದಿರಿ. ಇಲ್ಲಿದೆ ಸುವರ್ಣಾವಕಾಶ; ಇಟಲಿ ಮೂಲದ ಈ ಪ್ರತಿಷ್ಠಿತ ವಾಹನ ತಯಾರಕ ಸಂಸ್ಥೆಯು ಲಿನಿಯಾ ಅಬ್ಸಲ್ಯೂಟ್ ಮತ್ತು ಪುಂಟೊ ಅಬ್ಸಲ್ಯೂಟ್ ಎಡಿಷನ್ ಲಾಂಚ್ ಮಾಡಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಈ ಎರಡು ಆವೃತ್ತಿಗಳು ಫೆಸ್ಟಿವ್ ಆಕ್ಸೆಸರಿ ಪ್ಯಾಕೇಜ್‍ನೊಂದಿಗೆ ಆಗಮನವಾಗಿದ್ದು, ಇದಕ್ಕಾಗಿ ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ. 25,000 ರು.ಗಳಷ್ಟು ಬೆಲೆಬಾಳುವ ಫೆಸ್ಟಿವ್ ಆಕ್ಸೆಸರಿ ಪ್ಯಾಕ್‌ನಲ್ಲಿ ಟಚ್ ಸ್ಕ್ರೀನ್ ಜಿಪಿಎಸ್ ನೇವಿಗೇಷನ್ ಜತೆ 3ಜಿ ಟಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ನಿರ್ವಹಣೆ ಹೊಂದಿರಲಿದೆ. ಹಾಗಿದ್ದರೂ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ತರಲಾಗಿದೆ.

ಇದರ ಜತೆಗೆ ಉಚಿತ ರೋಡ್ ಸೈಡ್ ಅಸಿಸ್ಟಂಟ್ ಮತ್ತು ಎಕ್ಸ್‌ಚೇಂಜ್ ಆಫರನ್ನು ಫಿಯೆಟ್ ಮುಂದಿಡುತ್ತಿದೆ. ಈ ಮೂಲಕ ಲಿನಿಯಾ ಖರೀದಿ ವೇಳೆ ರು. 70,000 ಹಾಗೂ ಪುಂಟೊ ಖರೀದಿ ವೇಳೆ 60,000 ರು. ವರೆಗೆ ಉಳಿತಾಯ ಮಾಡಬಹುದಾಗಿದೆ.
ಇಷ್ಟೆಲ್ಲ ಆಗಿದ್ದರೂ ಈಗಾಗಲೇ ಫಿಯೆಟ್ ಲಿನಿಯಾ ಅಥವಾ ಪುಂಟೊ ಅಬ್ಸಲ್ಯೂಟ್ ಹೊಂದಿರುವ ಹಳೆ ಗ್ರಾಹಕರು ತಮ್ಮ ಕಾರುಗಳಿಗೆ ನೂತನ ಆಕ್ಸೆಸರಿ ಪ್ಯಾಕೇಜ್ ಲಗತ್ತಿಸುವಲ್ಲಿ ಬಯಸುದಾದ್ದಲ್ಲಿ ಹೆಚ್ಚುವರಿ 25,000 ರು. ಪಾವತಿಸಬೇಕಾಗುತ್ತದೆ.


Click it and Unblock the Notifications








